ಚಂದ್ರವಳ್ಳಿ ನ್ಯೂಸ್ ಹೊಳೆನರಸೀಪುರ: ಮಾಜಿ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮ ದೇವೇಗೌಡರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪ್ರಣಾಮಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ಅಂತ್ಯಸಂಸ್ಕಾರದ ವಿಧಿವಿಧಾನಗಳಲ್ಲಿ ಭಾಗವಹಿಸಿ, ಅಗಲಿದ ಹಿರಿಯ ಜೀವಕ್ಕೆ ಗೌರವ ನಮನಗಳನ್ನು ಅರ್ಪಿಸಲಾಯಿತು.
ಸರಳತೆ, ವಾತ್ಸಲ್ಯದ ಸಾಕಾರ ಮೂರ್ತಿ
ಸರಳತೆ ಮತ್ತು ವಾತ್ಸಲ್ಯದ ಸಾಕಾರ ಮೂರ್ತಿಯಂತಿದ್ದ ಶ್ರೀಮತಿ ಚನ್ನಮ್ಮ ದೇವೇಗೌಡರ ಅಗಲಿಕೆ ಇಡೀ ನಾಡಿನ ಜನತೆಗೆ ತೀವ್ರ ದುಃಖ ಮತ್ತು ಆಘಾತವನ್ನು ಉಂಟು ಮಾಡಿದೆ. ಸದಾ ಪ್ರೀತಿ, ಮಮತೆಯಿಂದ ಎಲ್ಲರನ್ನೂ ಆಪ್ತರಾಗಿಸಿಕೊಳ್ಳುತ್ತಿದ್ದ ತಾಯಿಯ ಅಗಲಿಕೆಯಿಂದ ಅವರ ಕುಟುಂಬಕ್ಕೆ ಆಗಿರುವ ನೋವು ಮತ್ತು ನಷ್ಟವನ್ನು ಭರಿಸಲು ಸಾಧ್ಯವಿಲ್ಲದ್ದು.
ಕುಟುಂಬದ ದುಃಖದಲ್ಲಿ ಇಡೀ ನಾಡು ಭಾಗಿ
ಈ ಅತ್ಯಂತ ತೀವ್ರ ದುಃಖದ ಸಂದರ್ಭದಲ್ಲಿ ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಮಸ್ತ ಕುಟುಂಬದ ಸದಸ್ಯರ ದುಃಖದಲ್ಲಿ ನಾವು ಮತ್ತು ನಮ್ಮ ಪಕ್ಷ ಮಾತ್ರವಲ್ಲದೆ, ಇಡೀ ನಾಡಿನ ಕೋಟ್ಯಂತರ ಜನತೆ ಭಾಗಿಯಾಗಿದೆ. ಇಡೀ ನಾಡೇ ಕುಟುಂಬದವರ ನೋವಿಗೆ ಹೆಗಲು ಕೊಟ್ಟಿದೆ.
"ಆ ಪರಮೇಶ್ವರನು ಪೂಜ್ಯ ತಾಯಿ ಶ್ರೀಮತಿ ಚನ್ನಮ್ಮನವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಈ ಅಪಾರ ಹಾಗೂ ಅಸಹನೀಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಇಡೀ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ."



