Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಂಗಳೂರಿನಿಂದ ಲಡಾಖ್‌ಗೆ ಆಟೋ ಪಯಣ: 8,900 ಕಿ.ಮೀ ಕ್ರಮಿಸಿ ಇತಿಹಾಸ ಬರೆದ ಕನ್ನಡಿಗ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಳಿದ ಕಡೆಗೆ ಬರಲು ಹಿಂಜರಿಯುವ ಆಟೋ ಚಾಲಕರ ನಡುವೆ
, ಮೂರು ಚಕ್ರದ ವಾಹನದಲ್ಲೇ ಬೆಂಗಳೂರಿನಿಂದ ಲಡಾಖ್‌ವರೆಗೆ ಭರ್ಜರಿ 8,900 ಕಿಲೋಮೀಟರ್ ಪ್ರಯಾಣಿಸಿ ಸಾಧನೆ ಮೆರೆದಿದ್ದಾರೆ ಮೈಸೂರು ಮೂಲದ, ಬೆಂಗಳೂರಿನ ಸರ್ಜಾಪುರ ನಿವಾಸಿ ಬಾಲಕೃಷ್ಣ ಮೋಹನ್ (35).

ಕೇವಲ 8 ರಿಂದ 10 ದಿನಗಳಲ್ಲಿ ಈ ಕಠಿಣ ಹಾಗೂ ಸುದೀರ್ಘ ಹಾದಿಯನ್ನು ಕ್ರಮಿಸುವ ಮೂಲಕ ಈ ಸಾಹಸ ಗೈದ ಮೊದಲ ಕನ್ನಡಿಗ ಎಂಬ ಅಪರೂಪದ ಹೆಗ್ಗಳಿಕೆಗೆ ಬಾಲಕೃಷ್ಣ ಪಾತ್ರರಾಗಿದ್ದಾರೆ.

Advertisement

ಸಾಹಸಮಯ ಪಯಣ ಆರಂಭವಾಗಿದ್ದು ಹೇಗೆ?
ಆಗಸ್ಟ್ 1 ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ಪ್ರಯಾಣ ಆರಂಭಿಸಿದ ಬಾಲಕೃಷ್ಣ, ಹೈದರಾಬಾದ್, ನಾಗಪುರ, ಆಗ್ರಾ, ದೆಹಲಿ, ಅಮೃತಸರ ಹಾಗೂ ಜಮ್ಮು ಮಾರ್ಗವಾಗಿ ಸಾಗಿ 8 ನೇ ದಿನಕ್ಕೆ ಶ್ರೀನಗರ ತಲುಪಿದರು. ಅಲ್ಲಿಂದ ಮುಂದುವರಿದು ಒಟ್ಟು 10 ದಿನಗಳ ಅವಧಿಯಲ್ಲಿ ಯಶಸ್ವಿಯಾಗಿ ಲಡಾಖ್ ತಲುಪಿದರು. ಯೂಟ್ಯೂಬರ್ ‘69 ವಂಡರ್‌ಲಸ್ಟ್’ (ನಿಖಿಲ್) ಅವರ ಸಾಹಸ ವಿಡಿಯೋಗಳಿಂದ ಪ್ರೇರಿತರಾದ ಇವರು, ಆಟೋ ಚಾಲಕನಾಗಿಯಷ್ಟೇ ಉಳಿಯದೆ ಹೊಸತೇನನ್ನಾದರೂ ಸಾಧಿಸುವ ಛಲದಿಂದ ಈ ಸಾಹಸಕ್ಕೆ ಕೈಹಾಕಿದರು. ಪ್ರಯಾಣಕ್ಕಾಗಿ ತಮ್ಮ ಹಳೆಯ ಆಟೋ ಬದಲಿಗೆ 8 ತಿಂಗಳಷ್ಟೇ ಹಳೆಯದಾದ ಆಟೋ ಖರೀದಿಸಿ, ಯೆಲ್ಲೋ ಬೋರ್ಡ್ ಅನ್ನು ವೈಟ್ ಬೋರ್ಡ್‌ಗೆ ಪರಿವರ್ತಿಸಿಕೊಂಡಿದ್ದರು.

ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆ:
ಯಾವುದೇ ಸ್ಪಾನ್ಸರ್‌ಶಿಪ್ ಇಲ್ಲದೆ
, ಸ್ವಂತ ಹಣ ಹಾಗೂ ಸಾಲ ಮಾಡಿ ಸುಮಾರು 1.8 ರಿಂದ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಲಕೃಷ್ಣ ಈ ಸಾಹಸ ಪೂರ್ಣಗೊಳಿಸಿದ್ದಾರೆ.

ಸಾಹಸದ ಶಿಖರ: ಲಡಾಖ್ ತಲುಪಿದ ಬಳಿಕ ಖರ್ದುಂಗ್ ಲಾ, ಫೋಟು ಲಾ ಸೇರಿದಂತೆ ಪ್ರಮುಖ ಪರ್ವತ ಮಾರ್ಗಗಳನ್ನು ಕ್ರಮಿಸಿ, ಸಮುದ್ರ ಮಟ್ಟದಿಂದ ಬರೋಬ್ಬರಿ 19,024 ಅಡಿ ಎತ್ತರದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಮೋಟಾರು ರಸ್ತೆ 'ಉಮ್ಲಿಂಗ್ ಲಾ ಪಾಸ್' ತಲುಪಿ ತ್ರಿವರ್ಣ ಧ್ವಜ ಹಾರಿಸಿದರು.

ಎದುರಾದ ಅಡೆತಡೆಗಳು: ದಾರಿಯುದ್ದಕ್ಕೂ ಭಾರಿ ಮಳೆ, ಭೂಕುಸಿತದ ಕಾರಣ ದೆಹಲಿಯಲ್ಲಿ ಎರಡು ದಿನ ಕಾಯಬೇಕಾಯಿತು. ಜಮ್ಮುವಿನಿಂದ ಮುಂದೆ ಸಿಎನ್‌ಜಿ ಸಿಗದ ಕಾರಣ ಪೆಟ್ರೋಲ್‌ನಲ್ಲೇ ಆಟೋ ಓಡಿಸಬೇಕಾಯಿತು. ವೆಚ್ಚ ಕಡಿಮೆ ಮಾಡಲು ಟೆಂಟ್, ಸ್ಲೀಪಿಂಗ್ ಬ್ಯಾಗ್ ಹಾಗೂ ಡಾರ್ಮಿಟರಿಗಳನ್ನು ಬಳಸಿಕೊಂಡರು.

ಆಗಸ್ಟ್ 24 ರಂದು ಹಿಮಾಚಲ ಪ್ರದೇಶ ಹಾಗೂ ಅಟಲ್ ಟನಲ್ ಮಾರ್ಗವಾಗಿ ಮರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವ ಬಾಲಕೃಷ್ಣ ಅವರ ಈ ಸಾಹಸಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. "ಮುಂದಿನ ದಿನಗಳಲ್ಲಿ ಉತ್ತಮ ಪ್ರಾಯೋಜಕತ್ವ ದೊರೆತರೆ ಕನ್ಯಾಕುಮಾರಿಯವರೆಗೂ ಆಟೋ ಪ್ರಯಾಣ ಬೆಳೆಸುವ ಆಸೆಯಿದೆ" ಎಂದು ಬಾಲಕೃಷ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ