LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾಗೃತಿಯೋ? ಅಥವಾ ಐದು ವರ್ಷದ ಅಡಮಾನವೋ? ಮತದಾರ ಬದಲಾಗದಿದ್ದರೆ ತಾಲೂಕಿನ ಭವಿಷ್ಯಕ್ಕೆ ಬೆಳಕಿಲ್ಲ!

Advertisement
Advertisement

ಎಂ.ಎಲ್ ಗಿರಿಧರಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್
ಹಿರಿಯೂರು:
"ನಮ್ಮ ಮತ
ನಮ್ಮ ಹಕ್ಕುನಮ್ಮ ಭವಿಷ್ಯ" – ಈ ಮಾತುಗಳು ಕೇವಲ ಚುನಾವಣೆಯ ಸಂದರ್ಭದಲ್ಲಿ ಕೇಳಿಬರುವ ಘೋಷಣೆಗಳಾಗಬಾರದು. ಆದರೆ ಇಂದಿನ ಕಹಿ ವಾಸ್ತವವೆಂದರೆಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗದೆಕೇವಲ ಒಂದು "ಲಾಭದಾಯಕ ವ್ಯಾಪಾರ" (Business) ಆಗಿ ಪರಿವರ್ತನೆಯಾಗಿದೆ. ಹಣ ಮತ್ತು ಜಾತಿ ಬಲವಿದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದುಉಳಿದವರಿಗೆ ಅವಕಾಶವೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.

ಆದರೆಈ ದುಸ್ಥಿತಿಗೆ ಸಂಪೂರ್ಣ ಕಾರಣ ರಾಜಕಾರಣಿಗಳು ಮಾತ್ರವೇಅಥವಾ ನಮ್ಮ ಮತವನ್ನು ನಾವೇ ಮಾರಿಕೊಳ್ಳುತ್ತಿರುವ ನಾವೂ ಕಾರಣವೇಎಂದು ಪ್ರತಿಯೊಬ್ಬ ಮತದಾರನು ಕಣ್ಣು ಮುಚ್ಚಿ ಯೋಚಿಸಬೇಕಾಗಿದೆ.

೧. ಉಚಿತ ಹಣಕ್ಕೆ ನಮ್ಮ ಹಕ್ಕುಗಳ ಅಡಮಾನ
ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಕೊಡುವ ಸಾವಿರಾರು ರೂಪಾಯಿಗಳ ಆಸೆಗೆ ಬಿದ್ದು ಮತ ಮಾರಿಕೊಂಡರೆ
ಅದು ನಮ್ಮ ಕ್ಷೇತ್ರವನ್ನು ಐದು ವರ್ಷಗಳ ಕಾಲ ಅವರ ಬಳಿ ಅಡ ಇಟ್ಟಂತೆ.

ಅಭ್ಯರ್ಥಿಯ ಲೆಕ್ಕಾಚಾರ: ಚುನಾವಣೆ ಗೆಲ್ಲಲು ಕೋಟಿಗಟ್ಟಲೆ ಬಂಡವಾಳ ಹೂಡುವ ಅಭ್ಯರ್ಥಿಅಧಿಕಾರಕ್ಕೆ ಬಂದ ಮೇಲೆ ಆ ಬಂಡವಾಳವನ್ನು ಬಡ್ಡಿ ಸಮೇತ ಲೂಟಿ ಮಾಡಲು ಯತ್ನಿಸುತ್ತಾನೆ.

ನಮ್ಮ ಮೇಲೆಯೇ ಬೀಳುವ ಒರೆ: ಆ ರಾಜಕಾರಣಿ ಮಾಡಿದ ವೆಚ್ಚವನ್ನು ಭರಿಸಲು ಕೊನೆಗೆ ಹೊರೆಯಾಗುವುದು ಸಾಮಾನ್ಯ ಜನರ ಮೇಲೆಯೇ. ರೈತರ ರಸಗೊಬ್ಬರಬಿತ್ತನೆ ಬೀಜಪೆಟ್ರೋಲ್ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಆ ಹಣವನ್ನು ನಮ್ಮಿಂದಲೇ ವಸೂಲಿ ಮಾಡಲಾಗುತ್ತದೆ.

೨. ಕೈಚಾಚಿ ಪಡೆದ ಮೇಲೆ ಹಕ್ಕು ಪ್ರತಿಪಾದಿಸಲು ಸಾಧ್ಯವೇ?
ಚುನಾವಣೆಯ ದಿನ ಯಾರಿಂದ ಹಣಕ್ಕಾಗಿ ಕೈಚಾಚುತ್ತೇವೋ
ಆ ಜನಪ್ರತಿನಿಧಿಯ ಮುಂದೆ ನಾಳೆ ಕೆಲಸಕ್ಕಾಗಿ ಧೈರ್ಯವಾಗಿ ಹೋಗಿ ನಿಲ್ಲಲು ನಮಗೆ ಶಕ್ತಿ ಇರುತ್ತದೆಯೇ?.
"ಹಣ ಪಡೆದು ಮತ ಹಾಕಿದ ದಿನವೇ ನಾವು ಅವರ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರಾಗುತ್ತೇವೆ."

ನಂತರ ರಸ್ತೆ ಇಲ್ಲರೈತರಿಗೆ ನೀರಿಲ್ಲಶಾಲೆಗಳು ಸರಿಯಿಲ್ಲಯುವಕರಿಗೆ ಉದ್ಯೋಗವಿಲ್ಲ ಎಂದು ದೂರುವುದರಲ್ಲಿ ಅರ್ಥವೇ ಇಲ್ಲ. ಹಣಕ್ಕೆ ಬಲಿಯಾಗದೆ ಮತ ಚಲಾಯಿಸಿದರೆ ಮಾತ್ರಆರಿಸಿ ಕಳುಹಿಸಿದ ಜನಪ್ರತಿನಿಧಿಯನ್ನು ರಾಜರೋಷವಾಗಿ ಪ್ರಶ್ನಿಸುವ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೇಳುವ ಪೂರ್ಣ ಹಕ್ಕು ನಮಗಿರುತ್ತದೆ.

೩. ಹಿರಿಯೂರು ಕ್ಷೇತ್ರದ ಸವಾಲು ಮತ್ತು ಯುವಜನತೆಯ ಭವಿಷ್ಯ
ರಾಜ್ಯಾದ್ಯಂತ ಕೆಲವು ಕ್ಷೇತ್ರಗಳ ಬಗ್ಗೆ 
– "ಹಣವಿದ್ದರೆ ಸಾಕುಯಾರಾದರೂ ಗೆಲ್ಲಬಹುದು" ಎಂಬ ಪ್ರತಿಬಿಂಬ ಮೂಡಿದೆ. ಹಿರಿಯೂರು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲದಿರುವುದು ದುರಂತ. ಹಣದ ಮಹಿಮೆಯಿಂದಲೇ ಗೆಲ್ಲಬಹುದು ಎಂಬ ಭಾವನೆ ರಾಜಕಾರಣಿಗಳಲ್ಲಿ ಬಂದರೆಅಲ್ಲಿ ಪ್ರಾಮಾಣಿಕರಿಗೆ ಮತ್ತು ನೈಜ ನಾಯಕರಿಗೆ ಜಾಗವೆಲ್ಲಿದೆ?

ಇದರ ನೇರ ಪರಿಣಾಮ ಬೀರುತ್ತಿರುವುದು ಯುವಜನತೆಯ ಭವಿಷ್ಯದ ಮೇಲೆ. ಸರ್ಕಾರಿ ಶಾಲೆಗಳು ಸೌಲಭ್ಯಗಳಿಲ್ಲದೆ ಸೊರಗುತ್ತಿವೆ.
ಸರಿಯಾದ ವಿದ್ಯಾಭ್ಯಾಸ ಸಿಗುತ್ತಿಲ್ಲ.

ಉದ್ಯೋಗಾವಕಾಶಗಳಿಲ್ಲದೆ ಯುವಕರು ಬೀದಿಪಾಲಾಗುತ್ತಿದ್ದಾರೆ.
ರೈತನ ಬೆಳೆಗೆ ಬೆಲೆಯಿಲ್ಲ
ನೀರಿಲ್ಲದೆ ಭೂಮಿ ಒಣಗುತ್ತಿದೆ.

೪. ಮತದಾರರೇ ಎಚ್ಚೆತ್ತುಕೊಳ್ಳಿ: ಈಗಾಗದಿದ್ದರೆ ಇನ್ನೆಂದಿಗೂ ಇಲ್ಲ!
ಅಭ್ಯರ್ಥಿ ಕೊಡುವ ಆ ಅಲ್ಪ ಹಣದಿಂದ ನಮ್ಮ ಜೀವನ ಕೊನೆಯಾಗುತ್ತದೆಯೇ
ಖಂಡಿತ ಇಲ್ಲ. ಆ ಹಣ ಕೆಲವು ದಿನಗಳಿಗಷ್ಟೇ ಸೀಮಿತಆದರೆ ಅದರ ಪರಿಣಾಮ ಐದು ವರ್ಷಗಳ ಕಾಲ ನರಕಯಾತನೆ ತರುತ್ತದೆ!.

ಆದ್ದರಿಂದ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ರಾಜಕಾರಣಿಗಳನ್ನು ದೂಷಿಸುವ ಮೊದಲು ಮತದಾರರಾದ ನಾವು ಬದಲಾಗಬೇಕು.
ನಮ್ಮ ಮತ ಮಾರಾಟಕ್ಕಿಲ್ಲ: ಹಣ
ಜಾತಿ ಅಥವಾ ಹೆಂಡದ ಆಸೆಗೆ ಮತ ಮಾರಿಕೊಳ್ಳಬಾರದು.
ಅಭಿವೃದ್ಧಿಯೇ ಮಾನದಂಡವಾಗಲಿ: ನಮ್ಮ ತಾಲೂಕಿನ/ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ
ಯುವಕರ ಮತ್ತು ರೈತರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಯನ್ನು ನೋಡಿ ಮತ ಚಲಾಯಿಸಬೇಕು.

ಮತದಾರರು 'ಮತದೇವರು'ಗಳಾಗಬೇಕೇ ಹೊರತು 'ಬಲಿಪಶು'ಗಳಾಗಬಾರದು. ನಾವು ಜಾಗೃತರಾದರೆ ಮಾತ್ರ ಪ್ರಜಾಪ್ರಭುತ್ವ ಗೆಲ್ಲುತ್ತದೆನಮ್ಮ ತಾಲೂಕು ಅಭಿವೃದ್ಧಿಯತ್ತ ಸಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಳ್ಳೋಣಮತವನ್ನು ಮಾರಿಕೊಳ್ಳದೆ ಕ್ಷೇತ್ರವನ್ನು ಉಳಿಸಿಕೊಳ್ಳೋಣ!.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್