ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ. ತಹಶಿಲ್ದಾರ್ ಮಲ್ಲಪ್ಪ ಎರಗೋಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಾಗಿ ಭಗೀರಥ ಉಪ್ಪಾರ ಸಮುದಾಯದ ವಿವಿದ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಸಂಘದ ಗೌರವ ಅಧ್ಯಕ್ಷರು ಸಮುದಾಯದ ಹಿರಿಯ ಮುಖಂಡರು ಆದ ಕೃಷ್ಣಪ್ಪನವರು, ಕಂಚಿಗನಾಳ ಚಿಕ್ಕ ಆಂಜಿನಪ್ಪ ನವರಿಗೆ, ಆಲಹಳ್ಳಿ ಮುನಿರಾಜಪ್ಪ ನವರಿಗೆ, ಮಾಜಿ ಸೈನಿಕರು ರಮೇಶ್ ಮತ್ತು ಸರ್ಕಾರಿ ಆಸ್ಪತ್ರೆಯ ಜನಸ್ನೇಹಿ ವೈದ್ಯ ಮಂಜುನಾಥ್ ರವರಿಗೆ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾರ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಕುಮಾರ್, ಉಪಾಧ್ಯಕ್ಷ, ಶ್ರೀ ನಿವಾಸ್ ಬಾಬು, ವಿಜಯಕುಮಾರ್, ಲಕ್ಷ್ಮಿನಾರಾಯಣ, ಕೆಸಿ,ಗೋವಿಂದು, ವಕೀಲರು ಕೃಷ್ಣಮೂರ್ತಿ,ಚಂದ್ರಕುಮಾರ ಸೇರಿದಂತೆ ಸಮುದಾದ ಅನೇಕರು ಹಾಜರಿದ್ದರು.


