Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡದಿ ಟೌನ್‌ಶಿಪ್ ವಿವಾದ: ಧೈರ್ಯವಿದ್ದರೆ ಅಧಿವೇಶನದಲ್ಲಿ ಚರ್ಚೆಗೆ ಬರಲಿ ಎಂದು ಹೆಚ್‌ಡಿಕೆಗೆ ಶಿವಕುಮಾರ್ ತಿರುಗೇಟು!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಸ್ಮಾರ್ಟ್ ಸಿಟಿ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಎಸೆದಿದ್ದ ಬಹಿರಂಗ ಸವಾಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ. "ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಬರುವುದಲ್ಲ, ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಅವರ ಪಕ್ಷದವರ ಮೂಲಕ ಚರ್ಚೆ ಮಾಡಿಸಲಿ, ಅಲ್ಲೇ ಸೂಕ್ತ ಉತ್ತರ ಕೊಡುತ್ತೇವೆ" ಎಂದು ತಿರುಗೇಟು ನೀಡಿದ್ದಾರೆ. 

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ಹೆಚ್‌ಡಿಕೆ ಮಾಡಿರುವ ಆರೋಪಗಳು ಹಾಗೂ ಬಿಡುಗಡೆ ಮಾಡಿರುವ ದಾಖಲೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಅಧಿವೇಶನದಲ್ಲೇ ಮುಖಾಮುಖಿ ಆಗೋಣ: ಡಿ.ಕೆ. ಶಿವಕುಮಾರ್
ಬೈರಮಂಗಲಕ್ಕೆ ಬಹಿರಂಗ ಚರ್ಚೆಗೆ ಬರುವಂತೆ ಹೆಚ್.ಡಿ. ಕುಮಾರಸ್ವಾಮಿ ಹಾಕಿದ್ದ ಪ್ರತಿ ಸವಾಲಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಬೀದಿ ಚರ್ಚೆಗೆ ತಾವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

"ನಾನು ಈ ವಿಷಯದ ಬಗ್ಗೆ ಈಗ ಮಾಧ್ಯಮಗಳ ಮುಂದೆ ಏನನ್ನೂ ಮಾತನಾಡುವುದಿಲ್ಲ. ನಾನು ಹಿಂದೆಯೇ ಅವರನ್ನು ಚರ್ಚೆಗೆ ಕರೆದಿದ್ದೆ, ಆಗ ಅವರು ಬರಲಿಲ್ಲ. ಈಗ ಮುಂದಿನ ಅಧಿವೇಶನ ಹತ್ತಿರ ಬರುತ್ತಿದೆ. ಕುಮಾರಸ್ವಾಮಿ ಅವರು ತಮ್ಮ ಜೆಡಿಎಸ್ ಪಕ್ಷದ ಶಾಸಕರು ಹಾಗೂ ಇತರ ಅನುಭವಿ ರಾಜಕಾರಣಿಗಳ ಮೂಲಕ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲಿ. ಅಲ್ಲಿಯೇ ನಾವು ಕಾನೂನಾತ್ಮಕವಾಗಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ. ಇನ್ನು ಅವರು ದಾಖಲೆಗಳನ್ನು ಬಿಡುಗಡೆ ಮಾಡಿರುವ ವಿಚಾರಕ್ಕೆ ಬಂದರೆ, ಅವರಿಗೆ ಶುಭವಾಗಲಿ."

ಹೆಚ್.ಡಿ. ಕುಮಾರಸ್ವಾಮಿ ಮಾಡಿದ ಆಪಾದನೆಗಳೇನು?:
ಇದಕ್ಕೂ ಮುನ್ನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಿಡದಿ ಯೋಜನೆ ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರದ ಲೂಟಿ ಅಸ್ತ್ರ ಎಂದು ಆರೋಪಿಸಿದ್ದರು.

ನನ್ನ ಅವಧಿಯಲ್ಲಿ ಪ್ರಕ್ರಿಯೆ ನಡೆದಿಲ್ಲ: 2007ರಲ್ಲೇ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ತೊಂದರೆಯಾಗಬಾರದು ಎಂದು ಬಿಡದಿ ಭೂಸ್ವಾಧೀನವನ್ನು ಕೈಬಿಡುವುದಾಗಿ ಸದನದಲ್ಲೇ ಹೇಳಿದ್ದೆ. 2018ರಲ್ಲಿ ಮುಖ್ಯಮಂತ್ರಿಯಾದಾಗಲೂ ನಾನು ಈ ಯೋಜನೆಗೆ ಅಧಿಸೂಚನೆ ಹೊರಡಿಸಿರಲಿಲ್ಲ.

2025ರ ಮಾರ್ಚ್‌ನಲ್ಲಿ ಅಧಿಸೂಚನೆ: ಬಿಡದಿ ಯೋಜನೆಗೆ ಸಂಬಂಧಿಸಿದಂತೆ 2025ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಅದು ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ಅಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ.

ಬಿಡ್ಡಿಂಗ್ ಮತ್ತು ಡಿಎಲ್‌ಎಫ್ ಸಂಸ್ಥೆ: ಅಂದು ಈ ಯೋಜನೆಗೆ ಬಿಡ್ಡಿಂಗ್ ನಡೆಸಿದಾಗ 'ಡಿಎಲ್‌ಎಫ್' ಸಂಸ್ಥೆ ಮಾತ್ರ ಭಾಗವಹಿಸಿ ಒಡಂಬಡಿಕೆಯಾಗಿತ್ತು. ಆದರೆ ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇತ್ತು. ಬಳಿಕ ಯಡಿಯೂರಪ್ಪ ಅವರ ಅವಧಿಯಲ್ಲಿ ಆ ಸಂಸ್ಥೆ ಹಣ ವಾಪಸ್ ಪಡೆದು ಯೋಜನೆಯಿಂದ ಹಿಂದೆ ಸರಿದಿತ್ತು.

ರೈತರ ಹಿತಕ್ಕಾಗಿ ಹೋರಾಟ:
"
ನಾನು ಮುಖ್ಯಮಂತ್ರಿಯಾದ ಬಳಿಕ ಸಿಡಿಪಿಗೆ ಅನುಮೋದನೆ ನೀಡಿ ಗ್ರೀನ್ ಮತ್ತು ರೆಡ್ ಜೋನ್ ಎಂದು ವರ್ಗೀಕರಿಸಿದ್ದೆ ಅಷ್ಟೇ. ಸಾರ್ವಜನಿಕರ ಮತ್ತು ರೈತರ ಹಿತಾಸಕ್ತಿಗಾಗಿ ಭೂಮಿಯನ್ನು ಡಿನೋಟಿಫೈ ಮಾಡಿದರೆ ಯಾರೂ ಜೈಲಿಗೆ ಹೋಗುವುದಿಲ್ಲ. ಧೈರ್ಯವಿದ್ದರೆ ಬೈರಮಂಗಲಕ್ಕೆ ಬಂದು ರೈತರು ಭೂಮಿ ಕೊಡಲು ಸಿದ್ಧರಿದ್ದಾರಾ ಇಲ್ಲವಾ ಎಂಬುದನ್ನು ಅವರ ಮುಂದೆಯೇ ಚರ್ಚಿಸೋಣ" ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದರು.

ಸದ್ಯ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಉಭಯ ನಾಯಕರ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಡದಿ ಭೂಸ್ವಾಧೀನದ ಕಿಚ್ಚು ಭಾರಿ ಚರ್ಚೆಗೆ ಕಾರಣವಾಗುವ ಮುನ್ಸೂಚನೆ ಸಿಕ್ಕಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.