Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿರು ಬೇಸಿಗೆ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳ ವಿಶೇಷ ಕಾಳಜಿಗೆ ಸಲಹೆ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಈ ಬಾರಿ ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿದ್ದು, ಬಿರು ಬೇಸಿಗೆ ಎಲ್ಲರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ವೃದ್ಧರು, ಗರ್ಭಿಣಿಯರು, ಮತ್ತು ಮಕ್ಕಳು ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಜಿ.ಪಿ. ರೇಣುಪ್ರಸಾದ್ ಸಲಹೆ ನೀಡಿದ್ದಾರೆ.

ಹವಾಮಾನ ವೈಪರಿತ್ಯ ದಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಕುರಿತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುವ ಆರೋಗ್ಯ ಸಮಸ್ಯೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಸಂಬAಧ ಅವಶ್ಯಕ ಪೂರ್ವಸಿದ್ಧತೆ ಮಾಡಿಕೊಂಡು ವಿಶೇಷ ಕಾಳಜಿವಹಿಸಿ ಆರೋಗ್ಯ ಸೇವೆ ನೀಡಬೇಕು.ಬಿಸಿಲಾಘಾತ, ನಿರ್ಜಲೀಕರಣದಿಂದ ಬಳಲುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಜಾರಿ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಅಂತರ ಇಲಾಖೆಯ ಸಮನ್ವಯ ದೊಂದಿಗೆ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರು ತಾಪಮಾನದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ದೇಹ ನಿರ್ಜಲೀಕರಣ ವಾಗದಂತೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಯೋಜನಾಧಿಕಾರಿ ಡಾ.ಕಾಶಿ ಮಾತನಾಡಿ, ಸಾರ್ವಜನಿಕರು ಸೂರ್ಯಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ ಶ್ರಮದಾಯಕ ಕೆಲಸ ಮಾಡಬಾರದು. ತಿಳಿ ಬಣ್ಣದ ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಬೇಕು. ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವಾಗ ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣ ತಡೆಯಲು ಹೆಚ್ಚು ಸಕ್ಕರೆಯುತ್ತಾ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬಾರದು. ಸೂರ್ಯಘಾತವಾದರೆ ತಣ್ಣಗಿನ ಸ್ಥಳದಲ್ಲಿ ವ್ಯಕ್ತಿಯನ್ನು ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ವರೆಸಬೇಕು, ಕುಡಿಯಲು ಆಗಾಗ್ಗೆ ನೀರು ಕೊಡುವುದು, ವ್ಯಕ್ತಿ ಚೇತರಿಸಿಕೊಂಡ ನಂತರ ನೀರಿನಂಶವಿರುವ ಪದಾರ್ಥಗಳನ್ನು ನೀಡಬೇಕೆಂದರು. ಆದಷ್ಟು ಜೀರ್ಣಕ್ರಿಯೆ ಆಗುವ ಆಹಾರ ಪದಾರ್ಥಗಳ ಬಳಕೆ ಮಾಡುತ್ತಾ ಮನೆಯಲ್ಲಿ ದೊರೆಯುವ ಮಜ್ಜಿಗೆ, ಎಳನೀರು, ನೀರಿನಂಶ ಇರುವ ಸೌತೆಕಾಯಿ ಮೂಲಂಗಿ, ಸೊಪ್ಪು ತರಕಾರಿ ಬಳಸಬೇಕು ಎಂದರು.

 ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೀತಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಲಭ್ಯ ಇರುವಂತೆ ಗಮನಹರಿಸಲು ನಿರ್ದೇಶನ ನೀಡಿದರು.

ವೀಡಿಯೋ ಸಂವಾಧದಲ್ಲಿ ವೈದ್ಯಾಧಿಕಾರಿಗಳು ಮತ್ತು ವಿವಿಧ ವೃಂದದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಂಗಲ್ಯ, ಜನಿವಾರ ವಿವಾದ: ಕಾಂಗ್ರೆಸ್‌ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಭಕ್ತಿಭಾವದ ಶ್ರೀ ರಾಮನವಮಿ ಆಚರಣೆ; ಆರ್. ಅಶೋಕ್ ಭಾಗಿದಾವಣಗೆರೆ ವಿಶ್ವವಿದ್ಯಾಲಯದ ಬಳಿ ಸುಸಜ್ಜಿತ ಬಸ್ ನಿಲ್ದಾಣ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ನವೋದ್ಯಮ ಮತ್ತು ಕೈಗಾರಿಕಾ ಕ್ರಾಂತಿಯ ನಾಯಕತ್ವ: ಕರ್ನಾಟಕದ ಕಹಳೆಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ;- ಸಿ.ಟಿ. ರವಿ ಆಕ್ರೋಶ"ಗ್ಯಾರಂಟಿ ಬೇಡ, ಜೀವಕ್ಕೆ ಗ್ಯಾರಂಟಿ ಕೊಡಿ": ನಿಖಿಲ್ ಕುಮಾರಸ್ವಾಮಿ ಆಗ್ರಹಶರಾವತಿ ಯೋಜನೆಗೆ ಕೇಂದ್ರದ ಅಸಹಕಾರ: ಸಿದ್ದರಾಮಯ್ಯ ತೀವ್ರ ಅಸಮಾಧಾನಗ್ರಾಮ ಪಂಚಾಯತ್ ಅನುದಾನ ಬಿಡುಗಡೆಗೆ ತಾರತಮ್ಯ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: "ಕರ್ನಾಟಕಕ್ಕೆ ಸಿಗದ ಮೂಲಸೌಕರ್ಯ ನ್ಯಾಯ"ಬೆಂಗಳೂರು ಕೃಷಿ ತಂತ್ರಜ್ಞಾನದ ರಾಜಧಾನಿಯಾಗಲಿ: ಸಿಎಂ ಸಿದ್ದರಾಮಯ್ಯ ಆಶಯ