Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಜೆಪಿಗರು ರಣಹದ್ದುಗಳು, ಕೋಮುವಾದ ಸೃಷ್ಟಿಸುವುದೇ ಅವರ ಕಸುಬು: ಸಚಿವ ಯತೀಂದ್ರ

ಚಂದ್ರವಳ್ಳಿ ನ್ಯೂಸ್, ಮೈಸೂರು:
ಬಿಜೆಪಿಯವರು ರಣಹದ್ದುಗಳಿದ್ದಂತೆ, ಅವರು ಯಾವಾಗಲೂ ರಾಜ್ಯದಲ್ಲಿ ಕೋಮುವಾದ ಸೃಷ್ಟಿಸಲು ಕಾಯುತ್ತಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿ. ನರಸೀಪುರ ಗಣೇಶ ಮೆರವಣಿಗೆ ವಿವಾದ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಹಲವು ಮಹತ್ವದ ಸ್ಪಷ್ಟನೆಗಳನ್ನು ನೀಡಿದರು.

 ಟಿ.ನರಸೀಪುರ ಇನ್‌ಸ್ಪೆಕ್ಟರ್ ಹೇಳಿಕೆ ಹಾಗೂ ಗಣೇಶ ಮೆರವಣಿಗೆ ವಿವಾದ: ಟಿ.ನರಸೀಪುರ ಗಣೇಶ ಮೆರವಣಿಗೆಯ ಕುರಿತು ಇನ್‌ಸ್ಪೆಕ್ಟರ್ ನೀಡಿರುವ ಹೇಳಿಕೆಯ ವೈರಲ್ ವಿಡಿಯೋ ಬಗ್ಗೆ ಮಾತನಾಡಿದ ಅವರು, "ಇನ್‌ಸ್ಪೆಕ್ಟರ್ ಮಾತನಾಡಿರುವ ವಿಡಿಯೋ ಸರಿಯಾಗಿದೆ. ಮಸೀದಿ, ಚರ್ಚ್ ಅಥವಾ ದೇವಸ್ಥಾನಗಳ ಮುಂಭಾಗದಲ್ಲಿ ಅನಧಿಕೃತವಾಗಿ ಪಟಾಕಿ ಹೊಡೆಯುವುದು ತಪ್ಪು. ದೇವಸ್ಥಾನಗಳ ಮುಂದೆ ಬೇರೆಯವರು ಬಂದು ಪಟಾಕಿ ಹೊಡೆದರೆ ಸುಮ್ಮನಿರಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

Advertisement

ಕಳೆದ ಬಾರಿ ಅನುಮತಿ ಪಡೆಯದೆ ಆ ರಸ್ತೆಯಲ್ಲಿ ಮೆರವಣಿಗೆ ಹೋಗಿದ್ದರು, ಆಗ ಪೊಲೀಸರೂ ಇರಲಿಲ್ಲ. ಈಗ ಅಂತಹ ಸಂದರ್ಭದಲ್ಲಿ ಹೆಚ್ಚು-ಕಮಿ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ ಅವರು, ಅನುಮತಿ ಪಡೆದು ಯಾವ ರಸ್ತೆಯಲ್ಲಿ ಬೇಕಾದರೂ ಮೆರವಣಿಗೆ ನಡೆಸಬಹುದು ಎಂದು ಸ್ಪಷ್ಟಪಡಿಸಿದರು.

"ರೈತರ ಸಮಸ್ಯೆ ಬಿಜೆಪಿಯವರಿಗೆ ಬೇಕಿಲ್ಲ, ಗಲಭೆ ಸೃಷ್ಟಿಸುವುದೇ ಅವರ ಕೆಲಸ":
ವಿರೋಧ ಪಕ್ಷವಾದ ಬಿಜೆಪಿಯವರ ವಿರುದ್ಧ ಹರಿಹಾಯ್ದ ಸಚಿವರು, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅಂದರೆ ಸದನಕ್ಕೇ ಬರುವುದಿಲ್ಲ, ಬರದ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ಆದರೆ ಸಮಾಜದಲ್ಲಿ ಗಲಭೆ ಸೃಷ್ಟಿಸುವ ವಿಚಾರಗಳನ್ನೇ ಇಟ್ಟುಕೊಂಡು ರಾಜಕೀಯ ಮಾಡುವುದೇ ಬಿಜೆಪಿಯವರ ಏಕೈಕ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್‌ಸ್ಪೆಕ್ಟರ್ ವಿಡಿಯೋ ವಿಚಾರವಾಗಿ ಮಾತನಾಡಿ, "ನಾನೂ ಕೂಡ ಪೂರ್ತಿ ವಿಡಿಯೋ ನೋಡಿದ್ದೇನೆ. ಅವರು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಬದಲು 'ಗ್ರಹಚಾರ ಬಿಡಿಸುತ್ತೇನೆ' ಎಂದಿದ್ದಾರೆ. ಬಿಜೆಪಿಯವರು ಹೇಳಿದ ತಕ್ಷಣ ಅವರನ್ನು ಅಮಾನತು ಮಾಡುವುದಕ್ಕೆ ಆಗುವುದಿಲ್ಲ. ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ. ಬಿಜೆಪಿಯವರು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಷ್ಟೇ" ಎಂದು ಕಿಡಿಕಾರಿದರು.

ತಾಯಿಯ ಆಸೆಯಂತೆ ಮೈಸೂರಿನಲ್ಲಿ ಹೊಸ ಮನೆ ನಿರ್ಮಾಣ:
ಇದೇ ವೇಳೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, "ನಮ್ಮ ತಾಯಿಯ ಆಸೆಯಂತೆ ಮೈಸೂರಿನಲ್ಲಿ ಹೊಸ ಮನೆ ಕಟ್ಟಿಸಿದ್ದು, ಮೊನ್ನೆ ತಾನೇ ಗೃಹಪ್ರವೇಶ ನೆರವೇರಿದೆ. ಹಿಂದೆ ಎರಡು ಮನೆಗಳನ್ನು ಕಟ್ಟಿದ್ದೆವು, ಆದರೆ ಅಲ್ಲಿ ಒಂದು ದಿನವೂ ಇರುವುದಕ್ಕೆ ಆಗಿರಲಿಲ್ಲ, ಹಾಗಾಗಿ ಆ ಮನೆಗಳನ್ನು ಮಾರಾಟ ಮಾಡಿದ್ದೆವು. ಈಗ ನಮ್ಮ ತಾಯಿಯ ಆಸೆಯಂತೆ ಹೊಸ ಮನೆ ನಿರ್ಮಿಸಲಾಗಿದೆ. ಅಪ್ಪನೂ (ಸಿದ್ದರಾಮಯ್ಯ) ವಾರದಲ್ಲಿ ಎರಡು ದಿನ ಮೈಸೂರಿನಲ್ಲೇ ಇರುತ್ತಾರೆ. ಅಮ್ಮ ಮತ್ತು ಅಪ್ಪ ಇಬ್ಬರೂ ಮೈಸೂರಿನಲ್ಲೇ ಇರುತ್ತಾರೆ. ತಾಯಿಯ ಪ್ಲಾನ್‌ನಂತೆ ಈ ಮನೆ ನಿರ್ಮಾಣ ಮಾಡಲಾಗಿದ್ದು, ನಾನು ಕೂಡ ಮೈಸೂರಿಗೆ ಬಂದಾಗ ಈ ಮನೆಯಲ್ಲೇ ಇರುತ್ತೇನೆ" ಎಂದು ತಿಳಿಸಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ