Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ನೌಕರರ ‘ಕೈಕೊಡುವ’ ಆಟಕ್ಕೆ ಬ್ರೇಕ್; ಜಾರಿಗೆ ಬಂತು ‘ಕರ್ತವ್ಯ’ ಆ್ಯಪ್!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ನೌಕರರು ಬಂದು ಡಿಜಿಟಲ್ ಸಹಿ ಹಾಕಿ ಮಾಯವಾಗುವಂತಿಲ್ಲ! ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಲು ಕರ್ನಾಟಕ ಸರ್ಕಾರವು
'ಕರ್ತವ್ಯ' ಎಂಬ ಅತ್ಯಾಧುನಿಕ ಹಾಜರಾತಿ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.

 

ಮುಖ್ಯಮಂತ್ರಿಗಳ ಕಡಕ್ ಸೂಚನೆಯ ಬೆನ್ನಲ್ಲೇ ಜಾರಿಯಾಗಿರುವ ಈ ವ್ಯವಸ್ಥೆಯು, ಕಚೇರಿ ವೇಳೆಯಲ್ಲಿ ನೌಕರರ 100% ಭೌತಿಕ ಉಪಸ್ಥಿತಿಯನ್ನು ಕಡ್ಡಾಯಗೊಳಿಸಲಿದೆ. ಹಳೇ ಬಯೋಮೆಟ್ರಿಕ್ ಲೂಪ್‌ಹೋಲ್‌ಗೆ ಕತ್ತರಿ!ಈ ಹಿಂದೆ ಇದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಕೇವಲ ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು.

 

ಆದರೆ ಹೊಸ ಕರ್ತವ್ಯಆ್ಯಪ್, ಉದ್ಯೋಗಿ ಎಲ್ಲಿದ್ದಾನೆ ಎಂಬುದನ್ನು ಆತನ ಭೌಗೋಳಿಕ ಸ್ಥಳದ ಮೂಲಕ ನಿಖರವಾಗಿ ಪತ್ತೆಹಚ್ಚುತ್ತದೆ. ಸಂಪೂರ್ಣ "ಮೇಡ್-ಇನ್-ಕರ್ನಾಟಕ" ಆವಿಷ್ಕಾರವಿಶೇಷವೆಂದರೆ, ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಯಾವುದೇ ಖಾಸಗಿ ಸಂಸ್ಥೆಯ ನೆರವು ಪಡೆದಿಲ್ಲ. ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ.

 

ಅಭಿವೃದ್ಧಿಪಡಿಸಿದವರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ ಮತ್ತು ಕರ್ನಾಟಕ ಎಐ ಸೆಲ್ ಜಂಟಿಯಾಗಿ ರೂಪಿಸಿವೆ.ಲಾಭ: ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವೆಂಡರ್ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶದ ಸುರಕ್ಷತೆ ಹೆಚ್ಚಿದೆ.

 

ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು: AI ಫೇಶಿಯಲ್ ರೆಕಗ್ನಿಷನ್:

ವಂಚನೆಯ ಹಾಜರಾತಿ ತಡೆಯಲು ಲೈವ್‌ನೆಸ್ ಡಿಟೆಕ್ಷನ್ ತಂತ್ರಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ ಇದೆ.

 

ಜಿಯೋಫೆನ್ಸಿಂಗ್: ಜಿಐಎಸ್ ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ಹಾಕಲು ಸಾಧ್ಯ.ಲಿಂಕ್ಡ್ ಡೇಟಾಬೇಸ್: ಇದನ್ನು ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಯೊಂದಿಗೆ ಜೋಡಿಸಲಾಗಿದೆ.

 

ಸ್ಮಾರ್ಟ್ ಆಪ್: ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಆಪ್‌ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ ವಿವರಗಳನ್ನು ದಾಖಲಿಸಬಹುದು.

 

ಒಂದೇ ವಾರದಲ್ಲಿ 25% ಪ್ರಗತಿ!ಪ್ರಸ್ತುತ 42 ಇಲಾಖೆಗಳ 4,78,522 ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗುತ್ತಿದ್ದು, ಈಗಾಗಲೇ 3.01 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ವಾರ 2.46 ಲಕ್ಷ ಇದ್ದ ನೋಂದಾಯಿತ ನೌಕರರ ಸಂಖ್ಯೆ, ಈ ವಾರ 3,01,034 ಕ್ಕೆ ಏರಿಕೆಯಾಗಿದೆ.

ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇಲಾಖೆಗಳು:
ಇಲಾಖೆಯ ಹೆಸರು ಒಟ್ಟು ನೌಕರರು ನೋಂದಾಯಿತ ನೌಕರರುದೈನಂದಿನ ಹಾಜರಾತಿ ಸ್ಥಾನಶಾಲಾ ಶಿಕ್ಷಣ ಇಲಾಖೆ 1,76,0551, 68,2521,41,800+ ಮೊದಲ ಸ್ಥಾನಆರೋಗ್ಯ ಮತ್ತು ಕುಟುಂಬ ಕಲ್ಯಾಣ-66,96954,400+ ಎರಡನೇ ಸ್ಥಾನ 90%.

 

ಮೈಲಿಗಲ್ಲು ದಾಟಿದ ಇತರೆ ಇಲಾಖೆಗಳು:

 ಪದವಿಪೂರ್ವ ಮಂಡಳಿ, ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಈಗಾಗಲೇ 90% ಕ್ಕಿಂತ ಹೆಚ್ಚು ನೋಂದಣಿ ಗುರಿ ತಲುಪಿವೆ. ಸಾರ್ವಜನಿಕರಿಗೆ ಹಾಗೂ ನೌಕರರಿಗೆ ಸಿಗಲಿದೆ ನೆಮ್ಮದಿಮೊಬೈಲ್ ಮೂಲಕವೇ ಹಾಜರಾತಿ ಹಾಕುವ ಸೌಲಭ್ಯ ಇರುವುದರಿಂದ ಕಚೇರಿಗಳ ಮುಂಭಾಗದಲ್ಲಿ ಬಯೋಮೆಟ್ರಿಕ್‌ಗಾಗಿ ಸರತಿಯಲ್ಲಿ ನಿಲ್ಲುವುದು ತಪ್ಪಿದೆ ಎಂದು ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ.

 

ಮತ್ತೊಂದೆಡೆ, ಕಚೇರಿಗಳಲ್ಲಿ ಅಧಿಕಾರಿಗಳ ಭೌತಿಕ ಲಭ್ಯತೆ ಖಾತರಿಯಾಗುವುದರಿಂದ ಸಾರ್ವಜನಿಕರಿಗೆ ಇನ್ಮುಂದೆ ತಡೆರಹಿತ ಸೇವೆ ಸಿಗಲಿದೆ."ಕರ್ನಾಟಕವು ಡಿಜಿಟಲ್ ಆಡಳಿತ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ."
 
ಡಾ. ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.