ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೇಶದ ಪ್ರಧಾನಿ ನರೇಂದ್ರಮೋದಿರವರ ಜನ್ಮದಿನವನ್ನು ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ತರಕಾರಿ ಮಾರುವ ಮೂಲಕ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ತಳ್ಳುಗಾಡಿಯಲ್ಲಿ ಜವಳಿಕಾಯಿ, ಎಲೆ ಕೋಸು, ಕ್ಯಾರೆಟ್, ಟಮೋಟೋ, ಆಲುಗಡ್ಡೆ, ಹಸಿಮೆಣಸಿನಕಾಯಿಯನ್ನು ಮಾರಾಟ ಮಾಡುವ ಮೂಲಕ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿರವರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಮಾತನಾಡಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ದೇಶದ ಯುವ ಜನಾಂಗವನ್ನು ನಂಬಿಸಿ ವಂಚನೆ ಮಾಡಿರುವ ಪ್ರಧಾನಿ ಮೋದಿ ಅಗ್ನಿವೀರ್ ನೇಮಕದಲ್ಲಿಯೂ ಯುವಕ/ಯುವತಿಯರಿಗೆ ಉದ್ಯೋಗದ ಆಸೆ ತೋರಿಸಿ ವಚನ ಭ್ರಷ್ಟರಾಗಿದ್ದಾರೆ. ಪದವಿ ಪಡೆದವರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಮೂರನೆ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರಮೋದಿರವರು ನೀಡಿದ ಭರವಸೆಯಂತೆ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ೨೪ ಕೋಟಿ ಉದ್ಯೋಗ ನೀಡಬೇಕಿತ್ತು. ಡಿಗ್ರಿ ಪಡೆದವರು ಟೀ, ತರಕಾರಿ ಮಾರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ೧೦೫ ದಿನಗಳಲ್ಲಿ ೭೦ ಸಾವಿರ ಉದ್ಯೋಗಗಳ ಸೃಷ್ಠಿಯಾಗಿದೆ. ಯುವ ಪೀಳಿಗೆ ರಾಜ್ಯ ಮತ್ತು ದೇಶದ ಬೆನ್ನೆಲುಬೆನ್ನುವ ಕಾಳಜಿಯಿದೆ. ಕಾಂಗ್ರೆಸ್‌ಗೆ ಬಡವರು, ದಲಿತರು, ಶೋಷಿತರು, ನಿರುದ್ಯೋಗಿಗಳ ಕಷ್ಟ ಗೊತ್ತಿದೆ. ಕೋಮುವಾದಿ ಬಿಜೆಪಿ. ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದರು.
ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಶ್ಚಿತ್(ಚಿಂಟು) ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ಸೈಯದ್ ಸೈಫುಲ್ಲಾ, ಇಂಜುಮಾಮ್
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಆದರ್ಶ್ ಶಾಮಣ್ಣ, ಗ್ರಾಮಾಂತರ ಅಧ್ಯಕ್ಷ ಮಹಂತೇಶ್, ಪದಾಧಿಕಾರಿಗಳಾದ ಯಾಸಿನ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




