ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಬರ ಅಧ್ಯಯನ ತಂಡ ಅ.4 ರಂದು ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಪ್ರವಾಸಕೈಗೊಳ್ಳಲಿದೆ. ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು, ಉಪನಿರ್ದೇಶಕ ಚೇತ್ ರಾಮ್ ಮೀನಾ, ಓಎಸ್‌ಡಿ ಕರ್ನಲ್ ಅಮರೇಂದ್ರ ಸಿಂಗ್, ನಿದೇರ್ಶಕ ಡಾ.ಜೆ.ಹರ್ಷ ಅವರನ್ನು ಒಳಗೊಂಡ ಅಂತರ್ ಸಚಿವಾಲಯ ತಂಡ ಬೆಳಿಗ್ಗೆ 9.40 ರಿಂದ
ಹಿರಿಯೂರು ತಾಲ್ಲೂಕಿನ ಸಕ್ಕರ, ಹೊಸಕೆರೆ, ಚಳ್ಳಕೆರೆ ತಾಲ್ಲೂಕಿನ ಚಿಕ್ಕಚೆಲ್ಲೂರು ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಶೇಂಗಾ, ತೊಗರಿ, ಹೆಸರು ಬೆಳೆಗಳನ್ನು ವೀಕ್ಷಿಸಲಿದೆ. ಬೆಳಿಗ್ಗೆ 11 ಗಂಟೆಗೆ ಚಳ್ಳಕೆರೆ ತಾಲ್ಲೂಕಿನ ಪರುಶುರಾಮಪುರದಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆ ಹಾಗೂ ವಿಬಿ ಜಿ ರಾಮ್ ಜಿ ಅಡಿ ಕೆರೆ ಪುಶ್ಚೇತನ ಕಾಮಗಾರಿಯನ್ನು ವೀಕ್ಷಿಸಲಿದೆ.
ನಂತರ ದ್ಯಾವರನಹಳ್ಳಿ ಜಿಲ್ಲಾ ಪಂಚಾಯತಿ ಕೆರೆ, ದೊಡ್ಡೇರಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಬೆಳೆ ಹಾಗೂ ರಾಣಿಕೆರೆ ಪರಿಶೀಲಿಸಲಿದೆ. ಬಳಿಕ ನಗರಂಗೆರೆಯಲ್ಲಿ ಮೇವಿನ ಮಿನಿ ಕಿಟ್ ವಿತರಿಸಲಾಗಿರುವ ರೈತರ ಜಮೀನು ಹಾಗೂ ಕುರುಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಲಿದೆ. ಬಳಿಕ ಚಿತ್ರದುರ್ಗ ನಗರಕ್ಕೆ ಆಗಮಿಸಿ, ದಾವಣಗೆರೆ ಜಿಲ್ಲೆಯ ಲಕ್ಕಮುತ್ತನಹಳ್ಳಿಗೆ ತೆರಳಲಿದೆ.




