Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

50 ವರ್ಷಗಳ ಬಳಿಕ ಒಂದಾದ ಬಾಲ್ಯದ ಗೆಳೆಯರು: ಕಣ್ಣಾಲಿಗಳು ತುಂಬಿ ಬಂದ ಚಿನ್ಮುಲ್ಲಾದ್ರಿ ಶಾಲೆಯ ‘ಸುವರ್ಣ ಸಂಭ್ರಮ’!

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಲ ಚಕ್ರ ಉರುಳಿದಂತೆ ತಲೆಯ ಕೂದಲು ನರೆತಿರಬಹುದುಮುಖದಲ್ಲಿ ನೆರಿಗೆಗಳು ಮೂಡಿರಬಹುದು, ಆದರೆ ಬಾಲ್ಯದ ನೆನಪುಗಳು ಮತ್ತು ಅಕ್ಷರ ಕಲಿಸಿದ ಶಾಲೆಯ ಮೇಲಿನ ಭಕ್ತಿ ಮಾತ್ರ ಎಂದಿಗೂ ಹಸಿಯಾಗಿಯೇ ಇರುತ್ತದೆ ಎಂಬುದಕ್ಕೆ ಚಿತ್ರದುರ್ಗದ ಚಿನ್ಮುಲ್ಲಾದ್ರಿ ರಾಷ್ಟ್ರೀಯ ಪ್ರೌಢಶಾಲೆ ಸಾಕ್ಷಿಯಾಯಿತು.

ಸುಮಾರು ಅರ್ಧ ಶತಮಾನದ ಹಿಂದೆ, ಅಂದರೆ 1975-78ರ ಅವಧಿಯಲ್ಲಿ ಇದೇ ಶಾಲೆಯ ಅಂಗಳದಲ್ಲಿ ಕೈಕೈ ಹಿಡಿದು ಓಡಾಡಿದ್ದ ಸಣ್ಣ ಮಕ್ಕಳು, ಇಂದು ದೇಶದ ಹೆಮ್ಮೆಯ ಇಂಜಿನಿಯರ್‌ಗಳು, ವೈದ್ಯರು, ಸಂಶೋಧಕರು, ಶಿಕ್ಷಕರು, ಉದ್ಯಮಿಗಳು ಹಾಗೂ ಭಾರತೀಯ ವಾಯುಪಡೆಯ ಸೈನಿಕರಾಗಿ ಮರಳಿ ಬಂದಾಗ ಅಲ್ಲಿ ಸೃಷ್ಟಿಯಾಗಿದ್ದು ಕೇವಲ ಸಮ್ಮಿಲನವಲ್ಲ; ಅದೊಂದು ಭಾವನೆಗಳ ಮಹಾಪೂರ!.

ನಾವು ಇಂದು ಏನಾಗಿದ್ದೇವೋ, ಅದಕ್ಕೆ ಅಂದಿನ ಗುರುಗಳೇ ಕಾರಣ!’: ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವುಕರಾಗಿ ಮಾತನಾಡಿದ ಭದ್ರಾ ಮೇಲ್ದಂಡೆ ಯೋಜನೆಯ ನಿವೃತ್ತ ಮುಖ್ಯ ಇಂಜಿನಿಯರ್ ಎಂ. ರವಿ ಅವರು,

"ಪ್ರೌಢಶಾಲಾ ಹಂತದಲ್ಲಿ ನಮಗೆ ಸಿಕ್ಕ ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನವೇ ಇಂದು ನಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಂತೆ ಮಾಡಿದೆ. ಅಂದಿನ ಶಿಕ್ಷಕರ ಬೋಧನೆ, ತಪ್ಪು ಮಾಡಿದಾಗ ಅವರು ಪ್ರೀತಿಯಿಂದ ತಿದ್ದುತ್ತಿದ್ದ ರೀತಿ ಅದ್ಭುತ. ಆ ಶೈಕ್ಷಣಿಕ ಶಿಸ್ತನ್ನು ಇಂದಿನ ವಿದ್ಯಾರ್ಥಿಗಳೂ ಅಳವಡಿಸಿಕೊಳ್ಳಬೇಕು" ಎಂದು ಹಳೆಯ ದಿನಗಳನ್ನು ನೆನೆದರು.

ಇದೇ ವೇಳೆ, 1978ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ 63 ವರ್ಷದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಇ.ಕೆ. ಮಂಜುನಾಥ್ ಅವರು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟಾಗ ಇಡೀ ಸಭೆ ಮೌನವಾಯಿತು. "ನನ್ನ ಜೀವನದ ಪ್ರತಿಯೊಂದು ಸಾಧನೆಯ ಹಿಂದೆಯೂ ನನ್ನ ಹೆಮ್ಮೆಯ ಶಿಕ್ಷಕರ ಆಶೀರ್ವಾದವಿದೆ" ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಅಕ್ಷರ ಕಲಿಸಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳ ಗುರುಕಾಣಿಕೆಛ
ಕೇವಲ ನೆನಪುಗಳನ್ನು ಹಂಚಿಕೊಳ್ಳುವುದಕ್ಕೆ ಮಾತ್ರ ಈ ಭೇಟಿ ಸೀಮಿತವಾಗಿರಲಿಲ್ಲ. ತಮಗೆ ಬದುಕು ಕಟ್ಟಿಕೊಟ್ಟ ಶಾಲೆಗೆ ಏನಾದರೂ ಮಾಡಬೇಕು ಎಂಬ ಹಂಬಲದಿಂದ
, ಹಲವಾರು ಹಳೆಯ ವಿದ್ಯಾರ್ಥಿಗಳು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಉದಾರವಾಗಿ ದೇಣಿಗೆ ನೀಡಿ ತಮ್ಮ ಶಾಲಾಭಿಮಾನ ಮೆರೆದರು.

1962ರಿಂದ ಈ ಶಾಲೆ ನಡೆದುಬಂದ ಹಾದಿ ಮತ್ತು ಅದರ ಅಭಿವೃದ್ಧಿಯನ್ನು ಸಂಸ್ಥೆಯ ಕಾರ್ಯದರ್ಶಿ ಎಂ. ಆರ್. ನಾರಾಯಣಪ್ಪ ಅವರು ವಿವರಿಸಿದಾಗ, ಹಳೆಯ ವಿದ್ಯಾರ್ಥಿಗಳ ಕಣ್ಣಿನಲ್ಲಿ ಹೆಮ್ಮೆ ಎದ್ದು ಕಾಣುತ್ತಿತ್ತು.

ಮಾಜಿ ಡಿಗ್ರೂಪ್ ನೌಕರ ರಹೀಮ್ ಅವರಿಗೆ ಗೌರವ: ಮಾನವೀಯತೆಯ ಪರಮಾವಧಿ
ಈ ಸಮ್ಮಿಲನದ ಅತ್ಯಂತ ಭಾವುಕ ಕ್ಷಣ ಮೂಡಿಬಂದಿದ್ದು ಅಂದಿನ ದಿನಗಳಲ್ಲಿ ಶಾಲೆಯಲ್ಲಿ
ಡಿಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿದ್ದ ರಹೀಮ್ ಅವರನ್ನು ನೆನೆದು, ವೇದಿಕೆಯಲ್ಲಿ ಸನ್ಮಾನಿಸಿದಾಗ. ಅಂದು ತಮಗೆ ನೀರು ಕೊಟ್ಟು, ಗಂಟೆ ಬಾರಿಸಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕಚೇರಿ ಸಹಾಯಕನನ್ನು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿರುವ ವಿದ್ಯಾರ್ಥಿಗಳು ಅಪ್ಪಿ ಗೌರವಿಸಿದ್ದು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ಕಾರ್ಯಕ್ರಮದ ಮುಖ್ಯಾಂಶಗಳು:
ಕಾರ್ಯಕ್ರಮದ ಯಶಸ್ಸಿನ ರೂವಾರಿ
, ಇಂಜಿನಿಯರ್ ಪಿ. ಎಲ್. ಸುರೇಶ್ ರಾಜು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳು: ಕರ್ನಾಟಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿ. ಆರ್. ಮಂಜುನಾಥ್
, ಉಪಾಧ್ಯಕ್ಷ ರಮೇಶ್ ಬಾಬು, ಖಜಾಂಚಿ ನಂಜುಂಡಸ್ವಾಮಿ, ನಿರ್ದೇಶಕರುಗಳಾದ ಯುವರಾಜ್ ಮತ್ತು ಪದ್ಮನಾಭ್ ಪಾಲ್ಗೊಂಡಿದ್ದರು.

ನಿವೃತ್ತ ಶಿಕ್ಷಕ ಹಾಗೂ ಹಳೆಯ ವಿದ್ಯಾರ್ಥಿ ಟಿ. ವೆಂಕಟಶಿವ ರೆಡ್ಡಿ ಸ್ವಾಗತಿಸಿದರೆ, ಸಂಸ್ಥೆಯ ನಿರ್ದೇಶಕ ಎಂ. ಆರ್. ದಾಸೇಗೌಡ ವಂದಿಸಿದರು. ಶಾಲೆಯ ಶಿಕ್ಷಕ ಮುರುಳಿ ನಿರೂಪಿಸಿದರು.

ಕೊನೆಯ ಮಾತು: ಚಿನ್ಮುಲ್ಲಾದ್ರಿ ಶಾಲೆಯ ಈ ಸುವರ್ಣ ಸಂಭ್ರಮ ಕೇವಲ ಒಂದು ಸಮಾರಂಭವಾಗಿರದೆ, ಯಾಂತ್ರಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಗುರು-ಶಿಷ್ಯರ ಬಾಂಧವ್ಯ, ಹಳೇ ಗೆಳೆತನ ಮತ್ತು ಕೃತಜ್ಞತಾ ಭಾವವನ್ನು ಮರುಸೃಷ್ಟಿ ಮಾಡಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.