ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ಹಾಗೂ ಸಹಿಷ್ಣುತಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 28 ರಿಂದ ರಾಜ್ಯಾದ್ಯಂತ ವಿವಿಧ ವಲಯಗಳಲ್ಲಿ ಈ ಪರೀಕ್ಷೆಗಳು ಆರಂಭವಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆಗಸ್ಟ್ 2ರಂದು ನಡೆದಿದ್ದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಈ ಮುಂದಿನ ಹಂತದ ಪರೀಕ್ಷೆಗಳು ನಡೆಯಲಿವೆ. ಈ ಬೃಹತ್ ನೇಮಕಾತಿ ಅಭಿಯಾನದಡಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಒಟ್ಟು 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಉಳಿಕೆ ಮೂಲ ವೃಂದದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
1. ಉಳಿಕೆ ಮೂಲ ವೃಂದದ (RPC) ಪರೀಕ್ಷಾ ವೇಳಾಪಟ್ಟಿ ಹಾಗೂ ಕೇಂದ್ರಗಳು:ಬೆಂಗಳೂರು ನಗರ ಘಟಕ (2,015 ಹುದ್ದೆಗಳು | 9,887 ಅಭ್ಯರ್ಥಿಗಳು):ದಿನಾಂಕ: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05
ಕೇಂದ್ರಗಳು: ಸಿಎಆರ್ (ಹೆಚ್‌ಕ್ಯೂ) ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ, ಮತ್ತು ಆರ್.ಕೆ. ಹೆಗಡೆ ನಗರದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಎಆರ್ (ಉತ್ತರ) ಪೆರೇಡ್ ಮೈದಾನ.
ಕೇಂದ್ರ ವಲಯ (200 ಹುದ್ದೆಗಳು | 946 ಅಭ್ಯರ್ಥಿಗಳು):
(ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳು)
ದಿನಾಂಕ: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03
ಕೇಂದ್ರ: ಬೆಂಗಳೂರಿನ ಕೊರಮಂಗಲದ ಮಡಿವಾಳ ಮಾರುಕಟ್ಟೆ ಎದುರಿನ 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ.
ದಕ್ಷಿಣ ವಲಯ (395 ಹುದ್ದೆಗಳು | 1,891 ಅಭ್ಯರ್ಥಿಗಳು):
(ಮೈಸೂರು ನಗರ/ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ)
ದಿನಾಂಕ: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05
ಕೇಂದ್ರ: ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆರ್ಮ್ಸ್ ರಿಸರ್ವ್ (CAR) ಪರೇಡ್ ಮೈದಾನ.
ಪೂರ್ವ ವಲಯ (250 ಹುದ್ದೆಗಳು | 1,234 ಅಭ್ಯರ್ಥಿಗಳು):
(ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ)
ದಿನಾಂಕ: ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 06
ಕೇಂದ್ರ: ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನ.
ಪಶ್ಚಿಮ ವಲಯ (395 ಹುದ್ದೆಗಳು | 1,803 ಅಭ್ಯರ್ಥಿಗಳು):
(ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಮಂಗಳೂರು ನಗರ)
ದಿನಾಂಕ: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03
ಕೇಂದ್ರ: ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಂಗಳ ಕ್ರೀಡಾಂಗಣ.
ಉತ್ತರ ವಲಯ (110 ಹುದ್ದೆಗಳು | 549 ಅಭ್ಯರ್ಥಿಗಳು):
(ಗದಗ ಮತ್ತು ಹುಬ್ಬಳ್ಳಿ-ಧಾರವಾಡ ನಗರ)
ದಿನಾಂಕ: ಸೆಪ್ಟೆಂಬರ್ 29 ಮತ್ತು 30, 2026
ಕೇಂದ್ರ: ಬೆಳಗಾವಿಯ ವಿಟಿಯು ಹತ್ತಿರದ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ.
ಬಳ್ಳಾರಿ ವಲಯ - RPC (30 ಹುದ್ದೆಗಳು | 144 ಅಭ್ಯರ್ಥಿಗಳು):
(ಬಳ್ಳಾರಿ ಮತ್ತು ರಾಯಚೂರು)
ದಿನಾಂಕ: ಅಕ್ಟೋಬರ್ 05 ರಿಂದ ಅಕ್ಟೋಬರ್ 06
ಕೇಂದ್ರ: ಕೊಪ್ಪಳದ ಮುನಿರಾಬಾದ್‌ನ ಹೊಸಹಳ್ಳಿ ಬಳಿಯಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನ (ಐಆರ್‌ಬಿ ಕ್ಯಾಂಪಸ್).
2. ಕಲ್ಯಾಣ ಕರ್ನಾಟಕ (KK) ವೃಂದದ ಪರೀಕ್ಷಾ ವೇಳಾಪಟ್ಟಿ ಹಾಗೂ ಕೇಂದ್ರಗಳು:
ಸಿಒಪಿ ಬೆಂಗಳೂರು ನಗರ - KK (171 ಹುದ್ದೆಗಳು | 833 ಅಭ್ಯರ್ಥಿಗಳು):ದಿನಾಂಕ: ಅಕ್ಟೋಬರ್ 08
ಕೇಂದ್ರಗಳು: ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್‌ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನ (ದಕ್ಷಿಣ).
ಬಳ್ಳಾರಿ ವಲಯ - KK ಘಟಕಗಳು (174 ಹುದ್ದೆಗಳು | 869 ಅಭ್ಯರ್ಥಿಗಳು):(ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ).
ದಿನಾಂಕ: ಅಕ್ಟೋಬರ್ 12 ರಿಂದ ಅಕ್ಟೋಬರ್ 15
ಕೇಂದ್ರ: ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನ.
ಈಶಾನ್ಯ ವಲಯ (251 ಹುದ್ದೆಗಳು | 1,240 ಅಭ್ಯರ್ಥಿಗಳು):
(ಕಲಬುರಗಿ ನಗರ/ಜಿಲ್ಲೆ, ಬೀದರ್)
ದಿನಾಂಕ: ಅಕ್ಟೋಬರ್ 12 ರಿಂದ ಅಕ್ಟೋಬರ್ 14
ಕೇಂದ್ರ: ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ:
ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು (Call Letter) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್: cetonline.karnataka.gov.in/kea/indexnew ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ನಿಗದಿತ ದೈಹಿಕ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ.




