ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರ ಸಭೆಯ ಪೌರಕಾರ್ಮಿಕರಿಗೆ ಐ ಐ ಹೆಚ್ ಎಸ್ ಸಂಸ್ಥೆಯ ವತಿಯಿಂದ ಹಸಿ ಕಸ ಮತ್ತು ಒಣ ಕಸ ವನ್ನು ವಿಂಗಡಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವು ಆಜಾದ್ ನಗರ, ಹೊರಪೇಟೆ, ಅಂಜುಮನ್ ಸರ್ಕಲ್ ನಲ್ಲಿ ಆಯೋಜಿಸಲಾಗಿತ್ತು.
ನಗರದ ಹಲವು ಸ್ಥಳಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026 ರ ಪ್ರಕಾರ ಸಾರ್ವಜನಿಕರಲ್ಲಿ ನಾಲ್ಕು ವಿಧದ ಕಸವನ್ನು ವಿಂಗಡಿಸಿಕೊಡಲು ಅರಿವು ಮೂಡಿಸಲಾಯಿತು.
ನಂತರ ನಗರಸಭೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆಯಲ್ಲಿ ಬ್ಲಾಕ್ ಸ್ಪಾಟ್ ಅನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವುದರ ಮೂಲಕ ಸುಂದರ ಗೊಳಿಸಲಾಯಿತು. ತರಕಾರಿ ಮಾರುಕಟ್ಟೆ ಹೂವಿನ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರಿಗೆ ಏಕ ಬಳಕೆ ಪ್ಲಾಸ್ಟಿಕ್ ನ್ನೂ ನಿಷೇಧಿಸಲು ಮತ್ತು ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ವಿಂಗಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕೆಂದು ತಿಳುವಳಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ ) ಜಾಫರ್ ಸಾಬ್, ಹಿರಿಯ ಆರೋಗ್ಯ ನಿರೀಕ್ಷಕರಾದ ರುಕ್ಮಿಣಿ, ಕಿರಿಯ ಆರೋಗ್ಯ ನಿರೀಕ್ಷಕರಾದ ಹೀನ ಕೌಸರ್, ಐ.ಐ.ಎಚ್.ಎಸ್ ಸಂಸ್ಥೆಯ ವಿದ್ಯಾ, ಅಂಬರೀಶ್, ಮತ್ತು ಯೋಗೇಶ್ ಹಾಗೂ ನಗರ ಸಭೆಯ ಕಮ್ಯೂನಿಟಿ ಮೊಬಿಲಿಜೆರ್ಸ್ ಮುಂತಾದವರು ಉಪಸ್ತಿತರಿದ್ದರು.




