ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸಚಿವರ ಭೇಟಿ ಹಾಗೂ ಸಚಿವ ಸಂಪುಟಕ್ಕೆ ಸಂಬಂಧಿಸಿದ ಪ್ರಮುಖ ಸಭೆಗಳಿಗಾಗಿ ನವದೆಹಲಿಗೆ ತೆರಳಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಮಾದರಿಯಲ್ಲೇ ದೆಹಲಿಯಲ್ಲೂ ಅತ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿಯೊಬ್ಬರಿಗೆ ದೆಹಲಿಯಲ್ಲಿ ಈ ಹಂತದ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಬೆಂಗಳೂರಿನಿಂದ ತೆರಳಿದ ವಿಶೇಷ ಪಡೆ: ಡಿ.ಕೆ. ಶಿವಕುಮಾರ್ ಅವರ ಭದ್ರತೆಗಾಗಿ ಬೆಂಗಳೂರಿನಿಂದಲೇ 7 ಜನ ಪೊಲೀಸರ ವಿಶೇಷ ತಂಡ ದೆಹಲಿಗೆ ಆಗಮಿಸಿದೆ.
ಉನ್ನತಾಧಿಕಾರಿಗಳ ನಿಯೋಜನೆ: ಈ ವಿಶೇಷ ಭದ್ರತಾ ಪಡೆಯಲ್ಲಿ ಎಸ್‌ಪಿ, ಇನ್ಸ್‌ಪೆಕ್ಟರ್‌ದರ್ಜೆಯ ಅಧಿಕಾರಿಗಳು ಸೇರಿದಂತೆ ಹಲವು ಹಂತದ ಸಿಬ್ಬಂದಿ ಇದ್ದು, ದೆಹಲಿಯಲ್ಲಿ ಸಿಎಂ ಅವರ ಪ್ರತಿಯೊಂದು ಸಂಚಾರದ ಮೇಲೂ ಹದ್ದಿನಕಣ್ಣು ಇರಿಸಿದ್ದಾರೆ.
ರಾಜಧಾನಿಯಲ್ಲೂ ಪ್ರೋಟೋಕಾಲ್: ದೆಹಲಿಗೆ ಆಗಮಿಸುವ ರಾಜ್ಯದ ಗಣ್ಯರಿಗೆ ಸಾಮಾನ್ಯವಾಗಿ ದೆಹಲಿ ಪೊಲೀಸರು ಭದ್ರತೆ ನೀಡುತ್ತಾರೆ. ಆದರೆ, ಈ ಬಾರಿ ರಾಜ್ಯದಿಂದಲೇ ಬಂದ ವಿಶೇಷ ಪೊಲೀಸ್ ಪಡೆ ಡಿಸಿಎಂ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ವಿಶೇಷ.



