LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಜೂನ್ 30ರಿಂದ ಮನೆ ಮನೆ ಗಣತಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚಿತ್ರದುರ್ಗ ಜಿಲ್ಲೆಯ ನಂ. 100 ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ 'ಸಮಗ್ರ ಪರಿಷ್ಕರಣೆ (SIR)-2026' ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ವ್ಯಾಪಕ ಪ್ರಚಾರಕ್ಕಾಗಿ ಹಿರಿಯೂರು ತಾಲೂಕು ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

​ವಿಶೇಷ ಸಮಗ್ರ ಪರಿಷ್ಕರಣೆ ಎಂದರೇನು?:
​SIR ಎಂಬುದು ಒಂದು ಆಳವಾದ ಮತ್ತು ನಿರ್ಣಾಯಕ ಪ್ರಕ್ರಿಯೆಯಾಗಿದೆ. ಇದು ಹಿಂದಿನ ಮತದಾರರ ಪಟ್ಟಿಯನ್ನು ಅವಲಂಬಿಸದೆ, ಸಂಪೂರ್ಣವಾಗಿ "ಹೊಸ ಪಟ್ಟಿಯನ್ನು" ಸಿದ್ಧಪಡಿಸುವ ಕಾರ್ಯವಾಗಿದೆ. ಈ ಪ್ರಕ್ರಿಯೆಯ ಮೂಲಕ ಪ್ರತಿಯೊಬ್ಬ ಮತದಾರನ ಅರ್ಹತೆಯನ್ನು ಕೂಲಂಕಷವಾಗಿ ಪರಿಶೀಲಿಸಿ ದೃಢೀಕರಿಸಲಾಗುತ್ತದೆ.

​ಪ್ರಮುಖ ವೇಳಾಪಟ್ಟಿ:
​ಚುನಾವಣಾ ಆಯೋಗವು ನಿಗದಿಪಡಿಸಿರುವ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಈ ಕೆಳಗಿನಂತಿದೆ
.

ಕ್ರ.ಸಂ ಪ್ರಕ್ರಿಯೆ / ಚಟುವಟಿಕೆ ದಿನಾಂಕಗಳು
1
ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ 20.06.2026 ರಿಂದ 29.06.2026
2 BLO
ಗಳಿಂದ ಮನೆ ಮನೆ ಭೇಟಿ (H2H ಗಣತಿ) 30.06.2026 ರಿಂದ 29.07.2026

3 ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ 29.07.2026 ರ ಒಳಗಾಗಿ
4
ಕರಡು ಮತದಾರರ ಪಟ್ಟಿ ಪ್ರಕಟಣೆ 05.08.2026

5 ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಧಿ 05.08.2026 ರಿಂದ 04.09.2026
6
ಆಕ್ಷೇಪಣೆಗಳ ವಿಲೇವಾರಿ ಮತ್ತು ನೋಟಿಸ್ ಅವಧಿ 05.08.2026 ರಿಂದ 03.10.2026

7 ಅಂತಿಮ ಮತದಾರರ ಪಟ್ಟಿ ಪ್ರಕಟಣೆ 07.10.2026
ಮನೆ ಮನೆ ಗಣತಿ ಪ್ರಕ್ರಿಯೆ ಮತ್ತು ದಾಖಲೆಗಳು. ​ಈ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಲಿದ್ದಾರೆ.

​ಮೊದಲ ಭೇಟಿ: ಪ್ರತಿ ಮತದಾರನಿಗೂ ಗಣತಿ ನಮೂನೆಗಳನ್ನು ವಿತರಿಸುತ್ತಾರೆ.​ಎರಡನೇ ಭೇಟಿ: ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುತ್ತಾರೆ.

​ಮೂರನೇ ಭೇಟಿ: ಬೀಗ ಹಾಕಿದ ಮನೆಗಳಿಗೆ ಮತ್ತೊಮ್ಮೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ.
​ಆನ್‌ಲೈನ್ ಸಲ್ಲಿಕೆ: ಮತದಾರರು ನಮೂನೆ-6, 7, 8 ರ ಜೀರೋ-ಭರ್ತಿ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲೇ ಸಲ್ಲಿಸಲು ಸಹ ಅವಕಾಶವಿದೆ.

​ಅಗತ್ಯವಿರುವ ಸ್ವಯಂ-ದೃಢೀಕೃತ ದಾಖಲೆಗಳು:
ಗಣತಿ ನಮೂನೆಯ ಜೊತೆಗೆ ಕೇಂದ್ರ/ರಾಜ್ಯ ಸರ್ಕಾರ/ಸಾರ್ವಜನಿಕ ಉದ್ಯಮಗಳ ಗುರುತಿನ ಚೀಟಿ, ಪಿಂಚಣಿ ಪಾವತಿ ಆದೇಶ, ಅಥವಾ ಜುಲೈ 1, 1987 ಕ್ಕಿಂತ ಮೊದಲು ಸರ್ಕಾರ/ಬ್ಯಾಂಕ್/ಅಂಚೆ ಕಚೇರಿ/ಎಲ್‌ಐಸಿ ಸಂಸ್ಥೆಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ/ಪ್ರಮಾಣಪತ್ರವನ್ನು ಸಲ್ಲಿಸಬಹುದು.

​ಪೌರತ್ವ ನಿರ್ಧಾರ:
​ಮತದಾರರ ಪಟ್ಟಿಗೆ ಅರ್ಹತೆಯನ್ನು ನಿರ್ಧರಿಸುವಾಗ ಪೌರತ್ವವು ಪ್ರಮುಖ ಮಾನದಂಡವಾಗಿದ್ದು, ಭಾರತೀಯ ಪೌರತ್ವ ಕಾಯ್ದೆಯಡಿ ಈ ಕೆಳಗಿನ ನಿಯಮಗಳನ್ನು ಪರಿಗಣಿಸಲಾಗುತ್ತದೆ.

​26 ಜನವರಿ 1950 ರಿಂದ 1 ಜುಲೈ 1987 ರ ನಡುವೆ ಜನಿಸಿದವರು: ಜನನದಿಂದಲೇ ಪೌರತ್ವ ಪಡೆಯುತ್ತಾರೆ.

​1 ಜುಲೈ 1987 ರಿಂದ 2 ಡಿಸೆಂಬರ್ 2004 ರ ನಡುವೆ ಜನಿಸಿದವರು: ಜನನದ ಸಮಯದಲ್ಲಿ ಅವರ ಪೋಷಕರಲ್ಲಿ ಒಬ್ಬರು ಭಾರತದ ನಾಗರಿಕರಾಗಿದ್ದರೆ ಪೌರತ್ವ ಸಿಗುತ್ತದೆ.

​2 ಡಿಸೆಂಬರ್ 2004 ಅಥವಾ ಅದರ ನಂತರ ಜನಿಸಿದವರು: ಪೋಷಕರಿಬ್ಬರೂ ಭಾರತದ ನಾಗರಿಕರಾಗಿರಬೇಕು ಅಥವಾ ಒಬ್ಬರು ಭಾರತದ ನಾಗರಿಕರಾಗಿದ್ದು, ಇನ್ನೊಬ್ಬರು ಅಕ್ರಮ ವಲಸಿಗರಾಗಿರಬಾರದು.

​ ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳುವವರು ಅಥವಾ ಬೇರೆ ರಾಜ್ಯದಿಂದ ಬಂದವರು ಫಾರ್ಮ್ 6/8 ರ ಜೊತೆಗೆ *'ಪೂರಕ ಘೋಷಣಾ ನಮೂನೆ'*ಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ತಪ್ಪು ಮಾಹಿತಿ ಅಥವಾ ಸುಳ್ಳು ಹೇಳಿಕೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

​ಕರಡು ಪಟ್ಟಿ ಪ್ರಕಟಣೆ ಮತ್ತು ಆಕ್ಷೇಪಣೆ:
​ಗಣತಿ ನಮೂನೆಗಳನ್ನು ಸಲ್ಲಿಸಿದ ಎಲ್ಲಾ ಮತದಾರರನ್ನು ಸೇರಿಸಿ 05.08.2026 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

​ನಮೂನೆಗಳನ್ನು ಸಲ್ಲಿಸದವರ ಹೆಸರುಗಳನ್ನು ಈ ಕರಡು ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ.
​ಕರಡು ಪಟ್ಟಿ ಪ್ರಕಟವಾದ ನಂತರ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 05.08.2026 ರಿಂದ 04.09.2026 ರವರೆಗೆ ಕಾಲಾವಕಾಶ ಇರಲಿದ್ದು, ತಪ್ಪಿದವರು ಹೊಸದಾಗಿ ಅರ್ಜಿ ಸಲ್ಲಿಸಬಹುದು.

​ರಾಜಕೀಯ ಪಕ್ಷಗಳ ಪಾತ್ರ ಹಾಗೂ 'BLO ಸೌಲಭ್ಯ ಕೇಂದ್ರ'

​BLA ನೇಮಕ: ಪ್ರಕ್ರಿಯೆಯ ಪಾರದರ್ಶಕತೆಗಾಗಿ ಪ್ರತಿಯೊಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರನ್ನು (BLA) ನೇಮಕ ಮಾಡಲು ಸೂಚಿಸಲಾಗಿದೆ.

​BLO Facilitation Centre: ಮತದಾರರ ಸುಲಭ ಭಾಗವಹಿಸುವಿಕೆಗಾಗಿ ತಹಶೀಲ್ದಾರ್ ಕಚೇರಿ, ಗ್ರಾಪಂ ಕಚೇರಿ (PDO ಕಚೇರಿ), ವಾರ್ಡ್ ಕಚೇರಿಗಳು ಹಾಗೂ ನಾಡ ಕಚೇರಿಗಳಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಲ್ಲದೆ ಅಗತ್ಯವಿರುವ ಸ್ಥಳಗಳಾದ ತಾಂಡಾಗಳು ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ನಿಗದಿತ ದಿನಾಂಕಗಳಂದು ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ.ವೆಂಕಟೇಶ್ ನಾಯಕ, ತಹಶೀಲ್ದಾರ ಎಂ.ಸಿದ್ದೇಶ್, ನಗರ ಸಭೆ ಎಇಇ ಸುನೀಲ್, ಬಿಇಓ ತಿಪ್ಪೇಸ್ವಾಮಿ, ಮಂಡಲ್ ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ, ಜೆಡಿಎಸ್ ತಾಲೂಕ್ ಅಧ್ಯಕ್ಷರು ಹನುಮಂತರಾಯಪ್ಪ ಮತ್ತಿತರರು ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲ್ಲುಗುದಿಗೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಭಕ್ತಿ ಭಾವದಿಂದ ನಡೆದ ನಾಗ ಪಂಚಮಿ ಆಚರಣೆಬ್ಯಾಂಕ್ ಸರ್ಕಲ್ ಫುಟ್ ಪಾತ್ ಒತ್ತುವರಿ:ಸ್ಥಳೀಯರ ಆಕ್ರೋಶಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶ