ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸಾರ್ವಜನಿಕರ ಹತ್ತಿರ ಇಡೀ ಆಡಳಿತ ತಂತ್ರವನ್ನು ವಿಕೇಂದ್ರೀಕರಿಸಿ, ಪ್ರಜಾಪ್ರಭುತ್ವವನ್ನು ಸಂವಿಧಾನದ ಆಶಯದಂತೆ ಜನಪರ ಸರ್ಕಾರ ನಡೆಸಲು ಒಂದು ವಿನೂತನ ಪ್ರಯಾಸವಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಈ ಮೂಲಕ ಅಹವಾಲುಗಳನ್ನು ನೇರವಾಗಿ ಆಲಿಸುವುದರ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ, ಸ್ಥಳದಲ್ಲಿಯೇ ಸೇವೆ ಒದಗಿಸುವಿಕೆ, ಅಹವಾಲುಗಳ ನಿರಂತರ ಪರಿಶೀಲನೆ, ಅಧಿಕಾರಿಗಳ ಹೊಣೆಗಾರಿಕೆ ಮತ್ತು ನಾಗರಿಕರಿಗೆ ಪಾರದರ್ಶಕ ವರದಿ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ, ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಈ ವೇದಿಕೆಯ ಸದುಪಯೋಗವನ್ನು ಪಡೆಯುತ್ತೀರೆಂದು ಆಶಿಸುತ್ತೇನೆ!! ಮಾತ್ರವಲ್ಲ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳುವಳಿಕೆ ಪಡೆಯಲು ಹಾಗೂ ಸರ್ಕಾರಕ್ಕೆ ತಮ್ಮ ಸಲಹೆ ಸೂಚನೆ ನೀಡಲು ಇದು ಒಂದು ಅನುಭವ ಮಂಟಪವಾಗಿ ನಿರಂತರ ನಡೆಯುವ ಉಪಕ್ರಮವಾಗಲಿದೆ ಹಾಗೂ ಎಲ್ಲಾ ಲೋಕತಂತ್ರ ವ್ಯವಸ್ಥೆಗಳಿಗೆ ಮಾದರಿಯಾಗಿ ದಾರಿದೀಪವಾಗುತ್ತದೆ ಎಂದು ನನ್ನ ವಿಶ್ವಾಸ ಎಂದು ಡಾ.ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.




