Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೃಜನಶೀಲತೆ ಮತ್ತು ಪ್ರಭುತ್ವ: ಜೂನ್ 21ರಂದು ಒಂದು ದಿನದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಂಡಾಯ ಸಾಹಿತ್ಯ ಸಂಘಟನೆ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ಸೃಜನಶೀಲತೆ ಮತ್ತು ಪ್ರಭುತ್ವಒಂದು ದಿನದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯನ್ನು ಇದೇ ಜೂನ್ 21ರಂದು ಬೆಳಿಗ್ಗೆ 10.30 ರಿಂದ ಸಂಜೆ 6.45 ರವರೆಗೆ ಚಿತ್ರದುರ್ಗ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜೂನ್ 21ರಂದು ಬೆಳಿಗ್ಗೆ 10.30ಕ್ಕೆ ಗೋಷ್ಠಿ-1 ನಡೆಯಲಿದ್ದು, ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ನುಡಿಗಳನ್ನಾಡುವರು. ಸೃಜನಶೀಲತೆ ಸ್ವಾತಂತ್ರ್ಯ ಮತ್ತು ವರ್ತಮಾನದ ಬಿಕ್ಕಟ್ಟುಗಳು ಕುರಿತು ಅರುಣ ಜೋಳದ ಕೂಡ್ಲಿಗಿ, ಪ್ರಾಚೀನ ಕನ್ನಡ ಸಾಹಿತ್ಯ: ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯದ ಸವಾಲು ಕುರಿತು ನವೀನ್ ಮಂಡಗದ್ದೆ ವಿಷಯ ಮಂಡನೆ ಮಾಡುವರು. ಯಾದವ ರೆಡ್ಡಿ ಅಧ್ಯಕ್ಷತೆ ವಹಿಸುವರು. ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡುವರು.

ಗೋಷ್ಠಿ-2 ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಮಧ್ಯಕಾಲೀನ ಕನ್ನಡ ಸಾಹಿತ್ಯ: ಪ್ರಭುತ್ವ ಮತ್ತು ಸೃಜನಶೀಲ ಸ್ಥಿತ್ಯಂತರ ಕುರಿತು ಎಚ್.ಜಿ.ವಿಜಯಕುಮಾರ್, ಆಧುನಿಕ ಕನ್ನಡ ಸಾಹಿತ್ಯ: ಪ್ರಜಾಪ್ರಭುತ್ವ ಮತ್ತು ಸೃಜನಶೀಲ ಮುಖಾಮುಖಿ ಕುರಿತು ಜಿ.ಕೆ.ಪ್ರೇಮ ವಿಷಯ ಮಂಡನೆ ಮಾಡುವರು.

 ಎಂ.ಎನ್.ಅಹೋಬಲಪತಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಚಂದ್ರಶೇಖರ ತಾಳ್ಯ ಅಧ್ಯಕ್ಷತೆ ವಹಿಸುವರು. ಬಿ.ಎಂ.ಗುರುನಾಥ್ ಆಶಯ ನುಡಿಗಳನ್ನಾಡುವರು. ಕವಿಗಳಾದ ಸಂತೋಷ್ ಕುಮಾರ್ ಬೆಳಗಟ್ಟ, ಶಿವಶಂಕರ ಸೀಗೆಹಟ್ಟಿ, ಸನಾವುಲ್ಲ ನವಿಲೇ ಹಾಳು, ಅಂಜಿನಪ್ಪ ಡಿ.ಹಿಕ್ಕಿಂಗೆರೆ, ಪ್ರವೀಣ ದಾಗಿನಕಟ್ಟೆ, ಕೃಷ್ಣಮೂರ್ತಿ ಉಡೇವು, ನಾಗರಾಜ ಕಣಿವೆ ಬಿಳಿಚಿ, ರಿಜ್ವಾನ್  ಹೊಳಲ್ಕೆರೆ, ಎಸ್.ಪ್ರದೀಪ, ದೀಪಿಕಾ ಬಾಬು, ಗೀತಾ ಭರಮಸಾಗರ, ಮಧುಕಾರ್ಗಿ, ಸೌಮ್ಯ ನಿಕ್ಕಿಮ್, ಎ.ವಿ.ಕವಿತಾ, ಆರ್.ಮಮತಾ, ಎಸ್.ಮನು, ಶಿವು ಆಲೂರು, ವಿಶಾಲ್ ಮ್ಯಾಸರ್ ಭಾಗವಹಿಸುವರು. ಸಂಜೆ 5.30ಕ್ಕೆ ಸಮಾರೋಪ ಸ್ಪಂದನೆ ನಡೆಯಲಿದ್ದು, ಆರ್.ಜಿ.ನಾಗರಾಜ್ ಸಮಾರೋಪ ನುಡಿಗಳನ್ನಾಡುವರು. ಹೆಂಜಾರಪ್ಪ ಹರಿಯಬ್ಬೆ ಅತಿಥಿಗಳಾಗಿ ಭಾಗವಹಿಸುವರು. ಚಿಕ್ಕಪ್ಪನಹಳ್ಳಿ ಷಣ್ಮುಖ ಅಧ್ಯಕ್ಷತೆ ವಹಿಸುವರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.