Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪತಿಗೆ ಕ್ರೌರ್ಯ, ಪ್ರತ್ಯೇಕ ವಾಸ: ಕೆಳ ಕೋರ್ಟ್ ಆದೇಶ ರದ್ದುಗೊಳಿಸಿ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತಿಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವುದು ಮತ್ತು ಸೂಕ್ತ ಕಾರಣವಿಲ್ಲದೆ ಸುದೀರ್ಘ ಅವಧಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.

ಅಲ್ಲದೆ, ಈ ಸುದೀರ್ಘ ಕಾನೂನು ಹೋರಾಟಕ್ಕೆ ಶಾಶ್ವತ ತೆರೆ ಎಳೆಯುವ ನಿಟ್ಟಿನಲ್ಲಿ ಪತ್ನಿಗೆ ಸೆಕ್ಷನ್ 25ರ ಅಡಿಯಲ್ಲಿ ₹17 ಲಕ್ಷ ರೂಪಾಯಿಗಳ ಖಾಯಂ ಜೀವನಾಂಶ ಪಾವತಿಸುವಂತೆ ಪತಿಗೆ ಸೂಚಿಸಿದ್ದು, ತೀರ್ಪು ಬಂದ 8 ವಾರಗಳ ಒಳಗಾಗಿ ಈ ಮೊತ್ತವನ್ನು ಪತ್ನಿಯ ಖಾತೆಗೆ ಜಮೆ ಮಾಡಲು ಆದೇಶಿಸಿದೆ.

Advertisement

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರು ನಿವಾಸಿಯಾದ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಮುಖ ತೀರ್ಪು ನೀಡಿದೆ.

ಹೈಕೋರ್ಟ್ ಪೀಠದ ಪ್ರಮುಖ ಗಮನಾರ್ಹ ಅಂಶಗಳು:
ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರ ಪತಿಯು ಪತ್ನಿಯಿಂದ ತೀವ್ರ ಕ್ರೌರ್ಯಕ್ಕೆ ಒಳಗಾಗಿದ್ದಾರೆ ಮತ್ತು 2017ರಿಂದಲೂ ಪತ್ನಿಯು ಸೂಕ್ತ ಕಾರಣವಿಲ್ಲದೆ ಪತಿಯನ್ನು ತ್ಯಜಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿತು.

ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವುದನ್ನು ಇಬ್ಬರು ಮಕ್ಕಳೇ ಕಣ್ಣಾರೆ ಕಂಡಿದ್ದಾರೆ. ಈ ವಿಚಾರವನ್ನು ತಂದೆಗೆ ತಿಳಿಸದಂತೆ ಪತ್ನಿ ಮಕ್ಕಳಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ವಿಚಾರಣಾ ನ್ಯಾಯಾಲಯವು ಈ ಎಲ್ಲ ಸೂಕ್ಷ್ಮ ಹಾಗೂ ಪ್ರಮುಖ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಹಳೆಯ ಆದೇಶವನ್ನು ರದ್ದುಗೊಳಿಸಿತು.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪತ್ನಿಗೆ 2004ರ ಡಿಸೆಂಬರ್ 20ರಂದು ಕೊಡಗು ಜಿಲ್ಲೆಯ ಕುಶಾಲನಗರದ ಗೌಡ ಸಮಾಜದ ಸಂಪ್ರದಾಯದಂತೆ ವಿವಾಹ ನೆರವೇರಿತ್ತು.

ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾದ ಒಂದು ವರ್ಷದ ಬಳಿಕ ಪತ್ನಿಯು ಅನಗತ್ಯವಾಗಿ ಮನೆಯಲ್ಲಿ ಗಲಾಟೆ ಮಾಡುವುದು, ಮಕ್ಕಳಿದ್ದರೂ ಅವರನ್ನು ಬಿಟ್ಟು ಮನೆ ತೊರೆಯುವುದು ಹಾಗೂ ಹಲವು ಉದ್ಯೋಗಗಳನ್ನು ಬದಲಾಯಿಸುವುದು ಮಾಡುತ್ತಿದ್ದರು.

ಪತಿಯಿಂದ ಕಾರು ಮತ್ತು ದ್ವಿಚಕ್ರ ವಾಹನ ಖರೀದಿಸಿ, ಮನಬಂದಂತೆ ತಿರುಗಾಡುವುದು ಹಾಗೂ ಪ್ರಶ್ನಿಸಿದರೆ ಬೆದರಿಕೆ ಹಾಕುವುದು ಮಾಡುತ್ತಿದ್ದರು. ಹಲವು ಬಾರಿ ಪೊಲೀಸ್ ದೂರು ದಾಖಲಾಗಿ ರಾಜಿ ಸಂಧಾನದ ಮೂಲಕ ಮನೆಗೆ ಬಂದರೂ, ಮನೆಯಲ್ಲೇ ಪ್ರತ್ಯೇಕ ಆಹಾರ ತಯಾರಿಸಿಕೊಂಡು ಪತಿ ಹಾಗೂ ಮಕ್ಕಳೊಂದಿಗೆ ಬೆರೆಯದೆ ದೂರವಿರುತ್ತಿದ್ದರು.

 ಕೌಟುಂಬಿಕ ಕೋರ್ಟ್‌ನಿಂದ ಹೈಕೋರ್ಟ್‌ವರೆಗೆ:
ಪತ್ನಿಯ ಈ ಕಿರುಕುಳದಿಂದ ಬೇಸತ್ತು ಪತಿಯು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(1ಎ) (ಕ್ರೌರ್ಯ) ಮತ್ತು 13(1)(1ಬಿ) (ಪರಿತ್ಯಾಗ) ಅಡಿಯಲ್ಲಿ ವಿಚ್ಛೇದನ ಕೋರಿ ಮೈಸೂರಿನ ಪ್ರಥಮ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು 2019ರ ಫೆಬ್ರುವರಿ 11ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಪತಿಯ ಪರ ವಕೀಲರು, "ಅರ್ಜಿದಾರರು ಪ್ರಸ್ತುತ 20 ಮತ್ತು 18 ವರ್ಷದ ತಮ್ಮಿಬ್ಬರು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ನಿರ್ವಹಣೆಯನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳುತ್ತಿದ್ದಾರೆ. ಹಿರಿಯ ಮಗಳು ಎಂಜಿನಿಯರಿಂಗ್ ಹಾಗೂ ಕಿರಿಯ ಮಗಳು ಪಿಯುಸಿ ಮುಗಿಸಿದ್ದು, ಶೈಕ್ಷಣಿಕ ವೆಚ್ಚದ ಅಗತ್ಯವಿದೆ" ಎಂದು ಪೀಠಕ್ಕೆ ತಿಳಿಸಿದರು.

ಅಂತಿಮವಾಗಿ ಎಲ್ಲಾ ಮಗ್ಗಲುಗಳಿಂದ ಪ್ರಕರಣವನ್ನು ಪರಿಶೀಲಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಕೇಂದ್ರ ತಂಡಕ್ಕೆ ಟಿ.ಬಿ. ಜಯಚಂದ್ರ ಮನವಿರಾಹುಲ್ ಗಾಂಧಿ 'ಚೀನಾ-ಪಾಕ್ ಏಜೆಂಟ್' ಎಂದ ಶಾಸಕ; ಸಿದ್ದರಾಮಯ್ಯಗೆ ಕಾಂಗ್ರೆಸ್ ಬಿಡುವಂತೆ ಬಹಿರಂಗ ಸಲಹೆ!ಹಿರಿಯ ಚಲನಚಿತ್ರ ಮಾಂತ್ರಿಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ: ಗಣ್ಯರಿಂದ ಕಂಬನಿಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮುರಿದುಬಿದ್ದ ಎಲ್‌ಇಡಿ ಕಮಾನು; ವೃದ್ಧ ಸೇರಿ ಹಲವರಿಗೆ ಗಾಯಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲುಹಿರಿಯ ಐಎಎಸ್‌ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಜವಾಬ್ದಾರಿ ಹಂಚಿಕೆಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ"ರಾಹುಲ್ ಗಾಂಧಿಗೆ ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿಕೆಯಿತ್ತು": ಸಂಸದರ ವಿವಾದಾತ್ಮಕ ಹೇಳಿಕೆವೀಳ್ಯದೆಲೆ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದ ನಿಖಿಲ್ ಕುಮಾರಸ್ವಾಮಿದಸರಾ ವಿಜೃಂಭಣೆಗೆ ಸಿದ್ಧತೆ: ರಾಜಕೀಯ ರಹಿತ, ವೈಭವದ ದಸರಾಗೆ ಡಿ.ಕೆ. ಶಿವಕುಮಾರ್ ಕರೆ