ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜವಹರ್‌ಲಾಲ್ ಮಂಚ್‌ನ ರಾಜ್ಯಾಧ್ಯಕ್ಷ ಮೈನುದ್ದಿನ್ ಹೆಚ್.ಜೆ. ಇವರ ಸೂಚನೆಯಂತೆ ಹಿರಿಯೂರಿನ ದಾದಾಪೀರ್ ಜಿ.ಇವರನ್ನು ಜವಹರ್‌ಲಾಲ್ ಮಂಚನ್ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ದಾದಾಪೀರ್ ಜಿ.ರವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಪಕ್ಷದಲ್ಲಿ ಯಾವುದೇ ಒಂದು ಹುದ್ದೆಯನ್ನು ಪಡೆದುಕೊಂಡ ಮೇಲೆ ಸುಮ್ಮನೆ ಕೂರಬಾರದು ಜಿಲ್ಲೆಯಲ್ಲಿ ಸಂಚರಿಸಿ ಜವಹರ್‌ಲಾಲ್ ಮಂಚ್ ವಿಭಾಗವನ್ನು ಸಂಘಟಿಸಿ ಮುಂದೆ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ದಾದಾಪೀರ್ ಜಿ.ರವರಿಗೆ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ವಿ.ಮಧುಗೌಡ, ಯೂತ್ ಕಾಂಗ್ರೆಸ್‌ನ ವಸೀಂ, ಕಾಂಗ್ರೆಸ್ ಮುಖಂಡ ಹಿರಿಯೂರಿನ ಅಬಿದ್ ಇವರುಗಳು ಈ ಸಂದರ್ಭದಲ್ಲಿದ್ದರು.




