ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಧರ್ಮಸ್ಥಳದ ಶ್ರೀಮುಡಿ ಭವನದ ವರಾಂಡದಲ್ಲಿ 55 ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ದೊಡ್ಡಬಳ್ಳಾಪುರ ಕಛೇರಿಪಾಳ್ಯದ ಗುರುರಾಜಪ್ಪ ಎಂದು ಗುರುತಿಸಲಾಗಿದೆ.
ದಲಿತ ಮುಖಂಡ, ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದ ಗುರುರಾಜಪ್ಪನವರ ಶವ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆಯಾಗಿದೆ.ಧರ್ಮಸ್ಥಳದ ಪೊಲೀಸರ ಪ್ರಕಾರ ಅನಾರೋಗ್ಯ ಅಥವಾ ಇತರ ಕಾರಣದಿಂದ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ಕಛೇರಿ ಪಾಳ್ಯದ ನಿವಾಸಿಯಾಗಿರುವ ಕಳೆದ ಎರಡು ದಿನಗಳ ಹಿಂದೆ ಗುರುರಾಜಪ್ಪ ತಮ್ಮ ಬೈಕ್ ತೆಗೆದುಕೊಂಡು ಹೋದವರು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.
ಶನಿವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿಲು ಕುಟುಂಬಸ್ಥರು ಹೋದಾಗ, ಧರ್ಮಸ್ಥಳಧಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಮಾಹಿತಿ ಬಂದಿದೆ, ಎರಡು ಹೋಲಿಕೆಯಾದ ಕಾರಣ ಮೃತರು ಗುರುರಾಜಪ್ಪ ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿದು ಬರಲಿದೆ.




