Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಕಾಂಗ್ರೆಸ್ ಸರ್ಕಾರದಲ್ಲಿ ಹಗಲು ದರೋಡೆ, ಅಧಿಕಾರಿಗಳ ದುರ್ಬಳಕೆ’: ಸಿ.ಟಿ. ರವಿ ಗಂಭೀರ ಆರೋಪಗಳ ಸುರಿಮಳೆ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಪೊಲೀಸರ ದುರ್ಬಳಕೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿಂದು ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಸರ್ಕಾರದ ವಿರುದ್ಧ ಸಾಲು ಸಾಲು ಹಗರಣಗಳ ಆರೋಪ ಪಟ್ಟಿ ಬಿಡುಗಡೆ ಮಾಡಿದರು.

ಗೃಹ ಸಚಿವರಿಂದ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ?:
"
ಹಿಂದೂ ಪರ ಕಾರ್ಯಕರ್ತ ತೇಜಸ್ ಗೌಡ ಎಂಬುವವರು ಗೃಹ ಸಚಿವರ ವಿರುದ್ಧ ಕೇಸ್ ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ, ಗೃಹ ಸಚಿವರು ಆತನ ಮನೆಗೆ ತಮ್ಮಾಳುಗಳನ್ನು ಕಳಿಸಿ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿಸಿದ್ದಾರೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬೆದರಿಸಲು ನಿಮಗ್ಯಾಕೆ ಅಷ್ಟೊಂದು ಭಯ? ಈ ರೀತಿಯ ಬೆದರಿಕೆ ತಂತ್ರಗಳು ಯಾರಿಗೂ ಶೋಭೆ ತರುವುದಿಲ್ಲ" ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಮಸೀದಿಗಳಲ್ಲಿ ಸಾಮೂಹಿಕ ಎಸ್‌ಐಆರ್ ಅಕ್ರಮ; ದೆಹಲಿಗೆ ದೂರು’:
ವಿಶೇಷ ಮತದಾರರ ತೀವ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ ಅವರು, "ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಗೆ ಬೆಂಬಲಿಸುವ ಮತದಾರರಿಗೆ ಪರಿಷ್ಕರಣೆಯ ಅರ್ಜಿಯನ್ನೇ ನೀಡುತ್ತಿಲ್ಲ. ಆದರೆ, ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಉಳಿಸಿಕೊಳ್ಳಲಾಗುತ್ತಿದೆ. ಮಸೀದಿಗಳಲ್ಲಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಇಲ್ಲಿ ಹುಟ್ಟದೇ ಇರುವವರಿಗೂ ಬರ್ತ್ ಸರ್ಟಿಫಿಕೇಟ್ ನೀಡಿ ಮತದಾರರನ್ನಾಗಿ ಮಾಡಲಾಗುತ್ತಿದೆ. ಈ ಕುರಿತು ರಾಜ್ಯದಲ್ಲಿ ದೂರು ನೀಡಲಾಗಿದ್ದು, ಇಂದು ದೆಹಲಿಯಲ್ಲೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತಿದೆ" ಎಂದರು. ಸ್ಲಮ್‌ಗಳಲ್ಲಿ ಬಿಎಲ್‌ಒ ಬದಲಿಗೆ ಬಿಎಲ್‌ಎಗಳು ಹೋಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಕ್ಷದ ಕಾರ್ಯಕರ್ತರ ಆಣತಿಯಂತೆ ಬಿಎಲ್‌ಒಗಳು ಕೇಳುವುದೇ ಕಾನೂನುಬಾಹಿರ ಎಂದರು.

ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು:
ಅನುಮತಿ ಪಡೆದೇ ಆರ್‌ಎಸ್‌ಎಸ್ ಪಥಸಂಚಲನ ಮಾಡಬೇಕು ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ಜನರು ತಮ್ಮನ್ನು ಮರೆಯಬಾರದು, ತಾವು ಅಧಿಕಾರದಲ್ಲಿದ್ದೇವೆ ಎಂಬುದನ್ನು ನೆನಪಿಸಲು ಪ್ರಿಯಾಂಕ್ ಖರ್ಗೆ ಪದೇ ಪದೇ ಆರ್‌ಎಸ್‌ಎಸ್ ವಿಚಾರ ಎತ್ತುತ್ತಿದ್ದಾರೆ. ಆರ್‌ಎಸ್‌ಎಸ್ ಯಾವಾಗಲೂ ಕಾನೂನುಬದ್ಧವಾಗಿ, ಅನುಮತಿ ಪಡೆದೇ ಪಥಸಂಚಲನ ನಡೆಸುತ್ತದೆ. ಗೃಹ ಸಚಿವರಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಆ ಕಡೆ ಮೊದಲು ಗಮನ ಹರಿಸಲಿ" ಎಂದು ಲೇವಡಿ ಮಾಡಿದರು.

ಹೊಲಿಗೆ ಯಂತ್ರ, ಲೇಬರ್ ಕಿಟ್‌ನಲ್ಲಿ ಹಗಲು ದರೋಡೆ’:
"
10 ಲಂಚ ಪಡೆದರೂ ಬಿಡುವುದಿಲ್ಲ ಎಂದು ಸಿಎಂ ಹೇಳುತ್ತಾರೆ, ಆದರೆ ಸರ್ಕಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ. ದೇವರಾಜು ಅರಸು ನಿಗಮದಲ್ಲಿ ಮಾರುಕಟ್ಟೆಯಲ್ಲಿ ಕೇವಲ 10,000 ಬೆಲೆಯಿರುವ ಹೊಲಿಗೆ ಯಂತ್ರಕ್ಕೆ 17,000 ಕೋಟ್ ಮಾಡಿ ಭ್ರಷ್ಟಾಚಾರ ಮಾಡಲಾಗಿದೆ. ಇದೇ ರೀತಿ ಕಾರ್ಮಿಕ ಇಲಾಖೆಯ ಕಿಟ್‌ಗಳ ಖರೀದಿಯಲ್ಲೂ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ" ಎಂದು ದೂರಿದರು.

ಲಕ್ಷ್ಮಣ್ ಸವದಿ ಬೇಡುವ ಸ್ಥಿತಿಗೆ ಬಂದಿದ್ದಾರೆ!:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಡೆಪ್ಯುಟೇಷನ್ ಮೇಲೆ ಬಂದಿದ್ದಾರೆ ಎಂದಿದ್ದ ಲಕ್ಷ್ಮಣ್ ಸವದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಸವದಿಯವರು ನಮ್ಮ ಪಕ್ಷದಲ್ಲಿದ್ದಾಗ ಡಿಸಿಎಂ ಆಗಿ ರಾಜನ ತರಹ ಇದ್ದರು. ಆದರೆ ಈಗ ಕಾಂಗ್ರೆಸ್‌ಗೆ ಹೋಗಿ ಸಚಿವ ಸ್ಥಾನಕ್ಕಾಗಿ ಕ್ಯೂನಲ್ಲಿ ನಿಂತಿದ್ದಾರೆ. ಅವರನ್ನು ನೋಡಿದರೆ ಬೇಸರವಾಗುತ್ತದೆ, ಅಲ್ಲಿ ಬೇಡುವ ಸ್ಥಿತಿಗೆ ತಲುಪಿದ್ದಾರೆ" ಎಂದರು. ಸವದಿ ಮತ್ತೆ ಬಿಜೆಪಿಗೆ ಬರುವ ಆಲೋಚನೆ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ, "ಅದು ಸೀಕ್ರೆಟ್, ಸೀಕ್ರೆಟ್ ಆಗಿಯೇ ಇರಲಿ" ಎಂದು ಮಾರ್ಮಿಕವಾಗಿ ಉತ್ತರಿಸಿದರು.

ರಾಮಮಂದಿರದ ಹಗರಣಕ್ಕೆ ಯೋಗಿ ಸರ್ಕಾರದಲ್ಲೇ ಶಿಕ್ಷೆ; ವಕ್ಫ್ ತನಿಖೆಗೆ ಸವಾಲು:
"
ರಾಮಮಂದಿರ ಟ್ರಸ್ಟ್‌ನಲ್ಲಿ ಅಕ್ರಮವೆಸಗಿದವರ ವಿರುದ್ಧ ಅಲ್ಲಿನ ಸರ್ಕಾರವೇ ಎಸ್‌ಐಟಿ ರಚಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಲ್ಲಿ ರಾವಣನ ಭಕ್ತರ ಸರ್ಕಾರವಿಲ್ಲ, ರಾಮನ ಭಕ್ತರ ಸರ್ಕಾರವಿದೆ. ತಪ್ಪು ಮಾಡಿದವರ ವಿರುದ್ಧ ಸ್ವತಃ ಟ್ರಸ್ಟ್ ದೂರು ನೀಡಿದೆ. ಅದೇ ಧೈರ್ಯ ಈ ಸರ್ಕಾರಕ್ಕಿದ್ದರೆ, ಅನ್ವರ್ ಮಾಣಿಪ್ಪಾಡಿ ವರದಿಯ ಆಧಾರದ ಮೇಲೆ ವಕ್ಫ್ ಮಂಡಳಿ ಹಗರಣಗಳ ತನಿಖೆಗೆ ಇಲ್ಲೂ ಒಂದು ಎಸ್‌ಐಟಿ ರಚಿಸಲಿ" ಎಂದು ಸಿ.ಟಿ. ರವಿ ಸವಾಲು ಹಾಕಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.