ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ಪಟ್ಟಣದ ಶಿವಲಿಂಗಪ್ಪ ಬಡಾವಣೆಯ ಸಿರಿಲಕ್ಷ್ಮಿ ತಂದೆ ಮಂಜಪ್ಪ(18 ವರ್ಷ) ಕಾಣೆಯಾದ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಸಿರಿಲಕ್ಷ್ಮಿ 5. ಅಡಿ ಎತ್ತರವಿದ್ದು, ಸಾಧರಣ ಮೈಕಟ್ಟು, ಗೋಧಿ ಮೈಬಣ್ಣ ದುಂಡ ಮುಖ ಹೊಂದಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಜೀನ್ಸ್ ಟಾಪ್, ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಗುರುತು ಪತ್ತೆಯಾದವರು ಅಥವಾ ವಾರಸದಾರರು ಹೊಳಲ್ಕೆರೆ ಪೆÇಲೀಸ್ ಠಾಣೆ ಸಂಖ್ಯೆ08191-275233, ಹೊಳಲ್ಕೆರೆ ವೃತ್ತ ನಿರೀಕ್ಷಕರ ಸಂಖ್ಯೆ 9480803135, ಕಚೇರಿ ಸಂಖ್ಯೆ 08191-275376, ಚಿತ್ರದುರ್ಗ ಪೆÇಲೀಸ್ ಉಪಧೀಕ್ಷಕ ಕಛೇರಿ ಸಂಖ್ಯೆ 08194-222430, ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782, ಗೆ ಕರೆ ಮಾಡಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



