Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೊದಲ ದಿನವೇ 32,797 ಗಣತಿ ನಮೂನೆಗಳ ವಿತರಣೆ: ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್

Advertisement
Advertisement

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: 
ಜಿಲ್ಲೆಯಲ್ಲಿ ಮಂಗಳವಾರದಿಂದ ಆರಂಭವಾಗಿರುವ ‘ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್)-2026’ ಮನೆ-ಮನೆ ಭೇಟಿ ಅಭಿಯಾನದ ಮೊದಲ ದಿನವೇ ಜಿಲ್ಲೆಯಾದ್ಯಂತ 32,797 ಗಣತಿ ನಮೂನೆಗಳನ್ನು  ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. 

     ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ -2026ರ ಅಂಗವಾಗಿ ಮನೆ ಮನೆ ಭೇಟಿ ಕಾರ್ಯವು 2026ರ ಜೂನ್ 30 ರಿಂದ ಆರಂಭವಾಗಿದ್ದು,  ಜುಲೈ 29 ರವರೆಗೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು  ವಿತರಿಸುವ ಕಾರ್ಯ ಪ್ರಾರಂಭಿಸಿದ್ದಾರೆ. 

    2026ರ ಜೂನ್ 16 ರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 14,40,534 ಮತದಾರರಿದ್ದು, ಒಟ್ಟು 1,661 ಮತಗಟ್ಟೆ ಭಾಗಗಳಿವೆ. ಅಭಿಯಾನದ ಮೊದಲ ದಿನವಾದ ಜೂನ್ 30 ರಂದು ಜಿಲ್ಲೆಯಾದ್ಯಂತ ಒಟ್ಟು 32,797 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈ ಪೈಕಿ 2,525 ನಮೂನೆಗಳನ್ನು ಈಗಾಗಲೇ ಗಣಕೀಕರಣ ಮಾಡಲಾಗಿದೆ. 

     *ವಿಧಾನಸಭಾ ಕ್ಷೇತ್ರವಾರು ಗಣತಿ ನಮೂನೆಗಳ ವಿತರಣೆ:* ಮೊಳಕಾಲ್ಮೂರು ಕ್ಷೇತ್ರದಲ್ಲಿ 285 ಮತಗಟ್ಟೆ ಭಾಗಗಳಿದ್ದು, 2,51,685 ಮತದಾರರಿದ್ದಾರೆ.

ಇಲ್ಲಿ ಮೊದಲ ದಿನ 17,558 ನಮೂನೆಗಳನ್ನು ವಿತರಿಸಿ, 716 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ಚಳ್ಳಕೆರೆ ಕ್ಷೇತ್ರದಲ್ಲಿ 260 ಭಾಗಗಳು ಹಾಗೂ 2,25,619 ಮತದಾರರಿದ್ದು, 1,645 ನಮೂನೆಗಳನ್ನು ವಿತರಿಸಲಾಗಿದ್ದು, 182 ನಮೂನೆಗಳು ಗಣಕೀಕರಣಗೊಂಡಿವೆ. ಚಿತ್ರದುರ್ಗ ಕ್ಷೇತ್ರದಲ್ಲಿ 288 ಭಾಗಗಳು ಮತ್ತು 2,69,332 ಮತದಾರರಿದ್ದು, 2,223 ನಮೂನೆಗಳನ್ನು ವಿತರಿಸಿ, 350 ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಹಿರಿಯೂರು ಕ್ಷೇತ್ರದಲ್ಲಿ 287 ಭಾಗಗಳು ಹಾಗೂ 2,51,482 ಮತದಾರರಿದ್ದು, 3,579 ನಮೂನೆಗಳನ್ನು ವಿತರಿಸಲಾಗಿದ್ದು, 671 ನಮೂನೆಗಳು ಗಣಕೀಕರಣಗೊಂಡಿವೆ. 

ಹೊಸದುರ್ಗ ಕ್ಷೇತ್ರದಲ್ಲಿ 242 ಭಾಗಗಳು ಮತ್ತು 2,03,481 ಮತದಾರರಿದ್ದು, 3,882 ನಮೂನೆಗಳನ್ನು ವಿತರಿಸಿ, 379 ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಕೊನೆಯದಾಗಿ ಹೊಳಲ್ಕೆರೆ ಕ್ಷೇತ್ರದಲ್ಲಿ 299 ಭಾಗಗಳು ಹಾಗೂ 2,38,935 ಮತದಾರರಿದ್ದು, 3,910 ನಮೂನೆಗಳನ್ನು ವಿತರಿಸಲಾಗಿದ್ದು, 227 ನಮೂನೆಗಳನ್ನು  ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.