ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹೊಸಹಳ್ಳಿ ಗ್ರಾಮದಲ್ಲಿ ಕಳೆದ ತಿಂಗಳು ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ 10 ದಿನಗಳ NSS ಶಿಬಿರ ನಡೆಯಿತು. ಈ ಶಿಬಿರದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರವನ್ನು Essilor Luxotticaಕಂಪನಿ ಹಾಗೂ
ಬುದ್ಧ ವಿಹಾರ ಎಜುಕೇಶನ್ ಟ್ರಸ್ಟ್ ಕಡೆಯಿಂದ ನಡೆಯಿತು. ಆ ಶಿಬಿರದಲ್ಲಿ ನೇತ್ರ ಚಿಕಿತ್ಸೆಗೆ ಒಳಪಟ್ಟ 100 ಗ್ರಾಮಸ್ಥರಿಗೆ ಉಚಿತ ಕನ್ನಡಕಗಳನ್ನು ಇಂದು ಅಕ್ಷಯ ತೃತೀಯ ದಿವಸ ವಿತರಿಸಲಾಯಿತು. ಈ ಶಿಬಿರದ ಮುಂದಾಳತ್ವ ವಹಿಸಿ ಶಿಬಿರವನ್ನು ನಡೆಸಿಕೊಟ್ಟ ಎಸ್ಸಿಲಾರ್ ಲಕ್ಸೋಟಿಕ ಕಂಪನಿಯ ಉದ್ಯೋಗಿ ಹಾಗೂ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಟ್ರಸ್ಟಿನ ಅಧ್ಯಕ್ಷರಾದ ಮಾಳವ ನಾರಾಯಣ್, ಶಿಕ್ಷಕರಾದ ಶಿವರಾಜು (ಭಯ್ಯ), ಲಾವಣ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ M C ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದು ಎಲ್ಲಾ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು.


