Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

​ಹಿರಿಯೂರು ನಗರದಲ್ಲಿ ಮುಂದಿನ 3 ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ: ನಗರಸಭೆ ಪ್ರಕಟಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ (ವಿ.ವಿ. ಸಾಗರ) ಜಲಾನಯನ ಪ್ರದೇಶದಲ್ಲಿ ವಿದ್ಯುತ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಹಿರಿಯೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಮುಂದಿನ ಮೂರು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತರಾದ ವಾಸೀಂ ಎ. ಅವರು ತಿಳಿಸಿದ್ದಾರೆ.

ನೀರು ಸರಬರಾಜು ವಿಳಂಬಕ್ಕೆ ಕಾರಣವೇನು? ಜೂನ್ 30ರ ಮಧ್ಯರಾತ್ರಿ 12:35 ರಿಂದ ಜುಲೈ 1ರ ಬೆಳಿಗ್ಗೆ 11:15ರ ವರೆಗೆ ವಿ.ವಿ. ಸಾಗರದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

  ಈ ಸುದೀರ್ಘ ವಿದ್ಯುತ್ ಕಡಿತದಿಂದಾಗಿ ನಗರಕ್ಕೆ ನೀರು ಹರಿಸುವ ಪ್ರಕ್ರಿಯೆಯಲ್ಲಿ ಒಂದು ದಿನದ ವಿಳಂಬ ಉಂಟಾಗಿದೆ.

ಬದಲಾದ ನೀರು ಸರಬರಾಜು ವೇಳಾಪಟ್ಟಿ: ನೀರಿನ ಪಂಪಿಂಗ್ ಕಾರ್ಯ ಸ್ಥಗಿತಗೊಂಡಿದ್ದರಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ ನೀರಿನ ವಿತರಣಾ ದಿನಾಂಕಗಳು ಈ ಕೆಳಗಿನಂತೆ ಬದಲಾಗಲಿವೆ:

  • ಇಂದು ಬರಬೇಕಿದ್ದ ಪ್ರದೇಶಗಳಿಗೆ: ನಾಳೆ ನೀರು ಸರಬರಾಜು ಮಾಡಲಾಗುವುದು.
  • ನಾಳೆ ಬರಬೇಕಿದ್ದ ಪ್ರದೇಶಗಳಿಗೆ: ನಾಡಿದ್ದು ನೀರು ಹರಿಸಲಾಗುವುದು.
  • ನಾಡಿದ್ದು ಬರಬೇಕಿದ್ದ ಪ್ರದೇಶಗಳಿಗೆ: ಆಚೆ ನಾಡಿದ್ದು ನೀರು ಸರಬರಾಜು ಮಾಡಲಾಗುವುದು.

ಸಾರ್ವಜನಿಕರಲ್ಲಿ ವಿನಂತಿ: ಒಟ್ಟಾರೆಯಾಗಿ ನೀರಿನ ಪೂರೈಕೆಯಲ್ಲಿ ಒಂದು ದಿನದ ವ್ಯತ್ಯಾಸ ಉಂಟಾಗಲಿದ್ದು, ನಗರದ ಸಾರ್ವಜನಿಕರು ಹಾಗೂ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಗರಸಭೆಯೊಂದಿಗೆ ಸಹಕರಿಸಬೇಕಾಗಿ ಪೌರಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.