ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಆರು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಒಟ್ಟು 222 ಪ್ರಕರಣಗಳು ಇತ್ಯರ್ಥವಾಗಿದ್ದು ಇದರಲ್ಲಿ ವಿಚ್ಛೇದನದ ಪ್ರಕರಣಗಳಲ್ಲಿ ಬೇರೆಯಾಗಿದ್ದ ಇಬ್ಬರು ದಂಪತಿಗಳು ಅದಾಲತ್ನಲ್ಲಿ ಒಂದಾಗಿದ್ದಾರೆ.
ದೂರವಾಗಿದ್ದ ದಂಪತಿಗಳನ್ನು ನ್ಯಾಯಾಲಯದಲ್ಲಿ ಕರೆಸಿದ್ದ ನ್ಯಾಯಾಧೀಶರು, ಪರಸ್ಪರ ದಂಪತಿಗಳ ಮನವೊಲಿಸಿ ಮಕ್ಕಳು ಹಾಗೂ ಕುಟುಂಬದ ಹಿತ ದೃಷ್ಟಿಯಿಂದ ನೀವು ಒಂದಾಗಬೇಕು ಎಂದು ತಿಳಿಸಿದರು.
ದಂಪತಿಗಳಿಗೆ ಪರಸ್ಪರ ಹೂ ಮಾಲೆಗಳನ್ನು ಹಾಕಿಸುವುದರ ಮೂಲಕ ಒಂದು ಗೂಡಿಸಿದರು.
ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಹಾಗೂ ನ್ಯಾಯಾಧೀಶರಾದ ಪ್ರೀತಿ.ಕೆ ಸಮ್ಮುಖದಲ್ಲಿ ದಂಪತಿಗಳು ಒಂದಾದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಕನಕರಾಜ್ ಹಾಗೂ ಇತರ ವಕೀಲರುಗಳು ಈ ಒಂದಾದ ದಂಪತಿಗಳಿಗೆ ಸಾಕ್ಷಿಯಾದರು.
ಅದಾಲತ್ನಲ್ಲಿ ಒಟ್ಟು 30 ಬ್ಯಾಂಕ್ ಮೊಕದ್ದಮೆ ಪ್ರಕರಣಗಳು ರಾಶಿಯಾಗಿದೆ ಬ್ಯಾಂಕಿನಲ್ಲಿ ಸಾಲ ಪಡೆದು ಸಾಲ ತೀರಿಸಲಾಗದ ರೈತರಿಗೆ ನೋಟಿಸ್ ನೀಡಿದ್ದು ನೋಟಿಸ್ ತೆಗೆದುಕೊಂಡಿರುವ ರೈತರು ಬಂದು ಲೋಕದಲತ್ನಲ್ಲಿ ರಾಜಿ ಮಾಡಿಕೊಂಡಿದ್ದಾರೆ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳು ರಾಜಿಯಾಗಿದೆ ಜಮೀನಿನ ಕೇಸುಗಳು ಸಹ 40ಕ್ಕೂ ಹೆಚ್ಚು ಪ್ರಕರಣಗಳು ರಾಜಿಯಾಗಿವೆ ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.




