ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಯ ವಿಶ್ವಪ್ರಸಿದ್ಧ ಹಜರತ್ ಖ್ವಾಜಾ ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದ ಜನತೆಯ ಸುಖ, ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಗಾಗಿ ದರ್ಗಾದಲ್ಲಿ ಜಂಟಿಯಾಗಿ ಪ್ರಾರ್ಥಿಸಿದ ಅವರು, ಬಳಿಕ ದರ್ಗಾದ ಧರ್ಮಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಸಚಿವರು, ಗಣ್ಯರ ಸಾಥ್:
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ಖರ್ಗೆ, ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್, ಸಚಿವ ಡಾ. ಶರಣಪ್ರಕಾಶ್‌ಪಾಟೀಲ್, ಶಾಸಕರುಗಳಾದ ರಹೀಂ ಖಾನ್, ಅಜಯ್‌ಸಿಂಗ್‌ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸೌಹಾರ್ದತೆಯ ಸಂದೇಶ: "ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲಿ, ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ನಾಡಿನ ಜನರಲ್ಲಿ ಸೌಹಾರ್ದತೆ ನೆಲೆಸಲಿ ಎಂದು ಸೂಫಿ ಸಂತರ ಪವಿತ್ರ ನಾಡಿನಲ್ಲಿ ಪ್ರಾರ್ಥಿಸಲಾಗಿದೆ" ಎಂದು ಈ ಸಂದರ್ಭದಲ್ಲಿ ನಾಯಕರು ಆಶಯ ವ್ಯಕ್ತಪಡಿಸಿದರು.



