Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೇಕೆದಾಟು ಸ್ಥಳ ಪರಿಶೀಲನೆಗೆ ತಮಿಳುನಾಡು ನಿಯೋಗಕ್ಕೆ ಡಿಕೆಶಿ ಆಹ್ವಾನ: ಭದ್ರಾ ಮೇಲ್ದಂಡೆ, ಮಹದಾಯಿ ಹಾಗೂ ನೀರಾವರಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
, ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ಪರಿಹಾರದ ಕುರಿತು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ಹಂಚಿಕೊಂಡರು.

​ಮೇಕೆದಾಟು ಯೋಜನೆ ಸ್ಥಳಕ್ಕೆ ತಮಿಳುನಾಡು ಸರ್ಕಾರ ತನ್ನ ನಿಯೋಗವನ್ನು ಕಳುಹಿಸಿ ಜಾಗ ಪರಿಶೀಲನೆ ನಡೆಸಲಿ ಎಂದು ಕರೆ ನೀಡಿದ ಅವರು, ರಾಜ್ಯದ ಜಲವಿವಾದಗಳು ಹಾಗೂ ಕೇಂದ್ರದಿಂದ ಬರಬೇಕಾದ ಅನುದಾನಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

​ ​ಮೇಕೆದಾಟು ಯೋಜನೆ ಮತ್ತು ತಮಿಳುನಾಡಿಗೆ ಆಹ್ವಾನ:
ಮೇಕೆದಾಟು ಯೋಜನೆಯು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದ್ದು
, ಇದನ್ನು ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಪ್ರಮುಖ ಅಂಶವನ್ನು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನದಟ್ಟು ಮಾಡಿಕೊಡಲಾಗಿದೆ. ತಮಿಳುನಾಡು ಸರ್ಕಾರವೂ ನಿಯೋಗವನ್ನು ಕಳುಹಿಸಿ ಯೋಜನೆಯ ಜಾಗ ಪರಿಶೀಲಿಸಬಹುದು. ತಮಿಳುನಾಡು ಮುಖ್ಯಮಂತ್ರಿಯವರಿಗೂ ಈ ಕುರಿತು ಸಭೆಯಲ್ಲಿ ಪಾಲ್ಗೊಳ್ಳಲು ಮತ್ತು ಸ್ಥಳ ಭೇಟಿಗೆ ಮನವಿ ಮಾಡಲಾಗುವುದು. ಕೆ.ಆರ್.ಎಸ್ ಭರ್ತಿಯಾಗದ ಕಾರಣ ಕಬಿನಿ ಭಾಗದ ರೈತರು ಗಲಾಟೆ ಮಾಡುತ್ತಿರುವ ಈ ಸಂದರ್ಭದಲ್ಲಿ 5 ಸಾವಿರ ಕ್ಯೂಸೆಕ್ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಜಾಗ ಗುರುತಿಸಲಾಗಿದೆ ಎಂದು ವಿವರಿಸಿದರು.

​ಕೇಂದ್ರ ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ:
ಕೃಷ್ಣಾ, ಮೇಕೆದಾಟು ಸೇರಿದಂತೆ ರಾಜ್ಯದ ಇತರೆ ಜಲವಿವಾದಗಳ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಹಕರಿಸಬೇಕೆಂದು ಕೋರಲಾಗಿದ್ದು, ಜಲಶಕ್ತಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭರವಸೆ ನೀಡಿದಂತೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕೇಂದ್ರ ಗೃಹ ಸಚಿವರು ಒಪ್ಪಿದ್ದು, ಅಕ್ಟೋಬರ್ 10ರ ನಂತರ ಸಮಯ ನೀಡಿದ್ದಾರೆ.

​ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ:
ಮಹದಾಯಿ ಯೋಜನೆಯ ಅರಣ್ಯ ತೆರವು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಜಂಟಿ ಸಭೆ ನಡೆಸುವುದಾಗಿ ಕೇಂದ್ರ ಭರವಸೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಕೋರಲಾಗಿದೆ. ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸರಿಯಾಗಿ ಪತ್ರವ್ಯವಹಾರ ಆಗುತ್ತಿಲ್ಲ ಎಂಬ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

​ಭದ್ರಾ ಮೇಲ್ದಂಡೆ ಯೋಜನೆ ಅನುದಾನಕ್ಕೆ ಒತ್ತಾಯ:
ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿದ್ದರೂ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಮೂರು-ನಾಲ್ಕು ವರ್ಷಗಳಿಂದ ಕೇವಲ ಮಾತುಗಳನ್ನೇ ಆಡಿದ್ದು, ನಗದು ಹಣ ತಲುಪಿಲ್ಲ. ಈ ವಿಚಾರ ಕೇಂದ್ರ ಸಂಪುಟ ಸಭೆಯಲ್ಲಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.

​ರಾಜ್ಯದ ಬರ ಪರಿಸ್ಥಿತಿ ಮತ್ತು ಪರಿಹಾರ:
ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. ಆರಂಭದಲ್ಲಿ 101 ತಾಲೂಕುಗಳಿಗೆ 700 ಕೋಟಿ ರೂ. ಅನುದಾನ ಕೋರಲಾಗಿತ್ತು. ಪ್ರಸ್ತುತ ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ. ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಅಕ್ಟೋಬರ್ 3 ರಂದು ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಲಿದೆ.

​ಬೆಂಗಳೂರು ನಗರಾಭಿವೃದ್ಧಿ ಹಾಗೂ ರಕ್ಷಣಾ ಇಲಾಖೆ ಭೂಮಿ:
ಬೆಂಗಳೂರಿನ ಇಬ್ಬಲೂರಿನಲ್ಲಿರುವ ರಕ್ಷಣಾ ಇಲಾಖೆಯ 700 ಎಕರೆ ಖಾಲಿ ಜಮೀನಿನಲ್ಲಿ ‘ಹಸಿರು ಉದ್ಯಾನವನ’ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ರಕ್ಷಣಾ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಮೇಖ್ರಿ ಸರ್ಕಲ್, ಸರ್ಜಾಪುರ ರಸ್ತೆ ಅಗಲೀಕರಣ, ಅಗರ-ಸರ್ಜಾಪುರ ರಸ್ತೆ ವಿಸ್ತರಣೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಅವಳಿ ಸುರಂಗ ಯೋಜನೆ ಹಾಗೂ ಏರ್‌ಪೋರ್ಟ್ ರಸ್ತೆಯಿಂದ ಸರೋವರ ಲೇಔಟ್‌ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರಿಸುವಂತೆ ಮನವಿ ಮಾಡಲಾಗಿದೆ.

 ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಕೇಂದ್ರ ತಂಡಕ್ಕೆ ಟಿ.ಬಿ. ಜಯಚಂದ್ರ ಮನವಿರಾಹುಲ್ ಗಾಂಧಿ 'ಚೀನಾ-ಪಾಕ್ ಏಜೆಂಟ್' ಎಂದ ಶಾಸಕ; ಸಿದ್ದರಾಮಯ್ಯಗೆ ಕಾಂಗ್ರೆಸ್ ಬಿಡುವಂತೆ ಬಹಿರಂಗ ಸಲಹೆ!ಹಿರಿಯ ಚಲನಚಿತ್ರ ಮಾಂತ್ರಿಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ: ಗಣ್ಯರಿಂದ ಕಂಬನಿಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮುರಿದುಬಿದ್ದ ಎಲ್‌ಇಡಿ ಕಮಾನು; ವೃದ್ಧ ಸೇರಿ ಹಲವರಿಗೆ ಗಾಯಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲುಹಿರಿಯ ಐಎಎಸ್‌ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಜವಾಬ್ದಾರಿ ಹಂಚಿಕೆಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ"ರಾಹುಲ್ ಗಾಂಧಿಗೆ ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿಕೆಯಿತ್ತು": ಸಂಸದರ ವಿವಾದಾತ್ಮಕ ಹೇಳಿಕೆವೀಳ್ಯದೆಲೆ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದ ನಿಖಿಲ್ ಕುಮಾರಸ್ವಾಮಿದಸರಾ ವಿಜೃಂಭಣೆಗೆ ಸಿದ್ಧತೆ: ರಾಜಕೀಯ ರಹಿತ, ವೈಭವದ ದಸರಾಗೆ ಡಿ.ಕೆ. ಶಿವಕುಮಾರ್ ಕರೆ