Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪಡಿತರ ಚೀಟಿದಾರರ ಇ-ಕೆವೈಸಿ ಕಡ್ಡಾಯ ‘ಅನ್ನಸೇವೆ’ ಆ್ಯಪ್  ಮೂಲಕ ಇ-ಕೆವೈಸಿ

​ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಡಿತರ ಚೀಟಿ ಹೊಂದಿರುವವರು ಸ್ವಯಂ ಇ-ಕೆವೈಸಿ ದಾಖಲಿಸಲು ಆಹಾರ ಇಲಾಖೆಯು ಅನ್ನಸೇವೆ ಆ್ಯಪ್ ಮೂಲಕ ಇ-ಕೆವೈಸಿ ಪಡೆದುಕೊಳ್ಳುವ ಸೌಲಭ್ಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.

ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿದಾರರ ಕುಟುಂಬದ ಎಲ್ಲ ಸದಸ್ಯರು, ಈಗಾಗಲೇ ಇ-ಕೆವೈಸಿ ಮಾಡಿಸಿ 5 ವರ್ಷ ಪೂರ್ಣಗೊಂಡಿದ್ದಲ್ಲಿ ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ‘ಅನ್ನಸೇವೆ’ ಆ್ಯಪ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.

ಕಳೆದ  ಸೆಪ್ಟೆಂಬರ್ ಮಾಹೆಯ 1ನೇ ತಾರೀಖಿನಿಂದ ಇಲ್ಲಿಯವರೆಗೆ ಒಟ್ಟು 8,94,600 ಫಲಾನುಭವಿಗಳಲ್ಲಿ, ಅಕ್ಟೋಬರ್ 13ರವರೆಗೆ 6,77,293 ಅಂದರೆ ಶೇ.75.70ರಷ್ಟು ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಂಡಿದೆ. ಆದರೆ, ಇನ್ನೂ ಒಟ್ಟು 2,17,307 ಫಲಾನುಭವಿಗಳ ಇ-ಕೆವೈಸಿ ಕಾರ್ಯ ಬಾಕಿ ಉಳಿದಿದೆ.

          ‘ಅನ್ನಸೇವೆ’ ಆ್ಯಪ್  ಮೂಲಕ ಇ-ಕೆವೈಸಿ ಮಾಡಿಕೊಳ್ಳುವ ವಿಧಾನ: ಫಲಾನುಭವಿಗಳು ‘ಅನ್ನಸೇವೆ’ ಆ್ಯಪ್  ಮೂಲಕ ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ರೇಷನ್ ಕಾರ್ಡ್ ನಂಬರ್ ಹಾಗೂ ರೇಷನ್ ಕಾರ್ಡ್‍ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ಲಾಗಿನ್ ಆಗಬೇಕು. ಕುಟುಂಬದ ಸದಸ್ಯರ ಪಟ್ಟಿ ತೆರೆದುಕೊಂಡ ಬಳಿಕ, ಯಾರ ಇ-ಕೆವೈಸಿ ಬಾಕಿ ಇದೆಯೋ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ ಆಪ್‍ಗಳ ಸಹಾಯದಿಂದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

          ಇ-ಕೆವೈಸಿ ಮಾಡಿಸದೆ ಹೋದರೆ ಅಂತಹ ಪಡಿತರ ಚೀಟಿಯ ಫಲಾನುಭವಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ ಬಾಕಿ ಇರುವ 2,17,307 ಪಡಿತರ ಚೀಟಿದಾರರ ಫಲಾನುಭವಿಗಳು ಕೂಡಲೇ ಇ-ಕೆವೈಸಿ ಮಾಡಿಸಿಕೊಂಡು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರದ ದ್ವಂದ್ವ ನೀತಿ ಅಂತ್ಯಗೊಳ್ಳಲಿ; ಮದ್ಯ ಮಾರಾಟ ರದ್ದುಗೊಳಿಸಲು ಕ್ರಮ ಕೈಗೊಳ್ಳಲಿಕಲ್ಯಾಣದ ಸಂಕಟದಲ್ಲಿ ಮರಣವೇ ಮಹಾನವಮಿಸಿಜೆಪಿಗೆ ಕಾಂಗ್ರೆಸ್ ನೆರವು: 'ಖಜಾನೆ ಎಟಿಎಂ ಆಯಿತೇ?' - ಆರ್. ಅಶೋಕ್ ತೀವ್ರ ವಾಗ್ದಾಳಿಎ-ಖಾತಾ ಆಸ್ತಿ ಮಾಲೀಕರಿಗೆ ಮನೆಬಾಗಿಲಲ್ಲೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ!ಗೂಗಲ್ ಮ್ಯಾಪ್ ಹೇಳಿದಂತೆ ಕೇಳಿ ದಾರಿತಪ್ಪಿ ಕಾರು ಸಮೇತ ಕಂದಕಕ್ಕೆ ಬಿದ್ದ ಇನ್ಫೋಸಿಸ್ ಟೆಕ್ಕಿಗಳು!ಲೈಂಗಿಕ ಕಿರುಕುಳ ಆರೋಪ: ತಲೆಮರೆಸಿಕೊಂಡಿದ್ದ ಚರ್ಚ್‌ಪಾದ್ರಿ ಪೋಕ್ಸೋ ಅಡಿಯಲ್ಲಿ ಬಂಧನಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ: ಬುಡಕಟ್ಟು ಸಂಸ್ಕೃತಿ ಮತ್ತು ಪವಾಡದ ಅಪೂರ್ವ ಧಾರ್ಮಿಕ ಸಂಗಮಪ್ರಜ್ಞೆಯ ಜಾಗೃತಿ, ಬದುಕಿನ ಸಂಸ್ಕೃತಿ:ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ