Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಅಂತ್ಯ: ಕಚ್ಚಾ ತೈಲ ದರ ಭಾರೀ ಕುಸಿತ!

Advertisement
Advertisement

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಜಾಗತಿಕ ಆರ್ಥಿಕತೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಮತ್ತು ಇರಾನ್ ನಡುವಣ
107 ದಿನಗಳ ಸುದೀರ್ಘ ಯುದ್ಧ ಕೊನೆಗೂ ಅಂತ್ಯದ ಹಂತಕ್ಕೆ ತಲುಪಿದೆ. ಉಭಯ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷಕ್ಕೆ ಪೂರ್ಣವಿರಾಮ ಇಡುವ ಮತ್ತು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು ಮುಕ್ತಗೊಳಿಸುವ ಪ್ರಾಥಮಿಕ ಒಪ್ಪಂದಕ್ಕೆ ಬರಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹಾಗೂ ಇರಾನ್‌ಉಪ ವಿದೇಶಾಂಗ ಸಚಿವರು ಜಂಟಿಯಾಗಿ ಪ್ರಕಟಿಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಒಂದೇ ದಿನದಲ್ಲಿ ತೈಲ ದರ ಶೇ. 4ರಷ್ಟು ಕುಸಿತ!:
ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ತಲೆಕೆಳಗಾಗಿದ್ದು, ಸರಾಸರಿ ಶೇ. 4ರಷ್ಟು ಇಳಿಕೆ ಕಂಡುಬಂದಿದೆ. ಆ ಮೂಲಕ ತೈಲ ದರ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಆಸುಪಾಸಿಗೆ ಬಂದು ತಲುಪಿದೆ.

ಬ್ರೆಂಟ್ ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 3.58 ಡಾಲರ್ (ಶೇ. 4.1) ಇಳಿಕೆಯಾಗುವ ಮೂಲಕ 83.75 ಡಾಲರ್‌ಗೆ ಕುಸಿದಿದೆ.

ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್: ಪ್ರತಿ ಬ್ಯಾರೆಲ್‌ಗೆ 4.01 ಡಾಲರ್ (ಶೇ. 4.72) ಕುಸಿತ ಕಂಡು, 80.87 ಡಾಲರ್‌ಗೆ ತಲುಪಿದೆ.

ಯುದ್ಧದ ತೀವ್ರತೆಯಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 120 ಡಾಲರ್‌ವರೆಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ, ಯುದ್ಧಕ್ಕೂ ಮುನ್ನ ತೈಲ ದರ 70 ಡಾಲರ್‌ನ ಆಸುಪಾಸಿನಲ್ಲಿತ್ತು ಎಂಬುದು ಗಮನಾರ್ಹ.

'ಹಾರ್ಮುಜ್ ಜಲಸಂಧಿ' ಮುಕ್ತ: ಜಾಗತಿಕ ನಿರಾಳತೆ:
ವಿಶ್ವದ ಒಟ್ಟು ಕಚ್ಚಾತೈಲದ ಶೇ. 20ರಷ್ಟು ಭಾಗವು ಹರ್ಮುಜ್ ಜಲಸಂಧಿ ಮೂಲಕವೇ ಸಾಗಣೆಯಾಗುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಈ ಜಲಸಂಧಿಯ ಮೇಲೆ ಕಠಿಣ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಗಗನಕ್ಕೇರಿದ್ದವು. ಈಗ ಜಲಸಂಧಿ ಪುನಾರಂಭಗೊಳ್ಳುತ್ತಿರುವುದರಿಂದ ಪೂರೈಕೆ ವ್ಯವಸ್ಥೆ ಹಳಿಗೆ ಬರಲಿದೆ.

ಭಾರತದ ಗ್ರಾಹಕರಿಗೆ ಸಿಗಲಿದೆಯೇ ಬೆಲೆ ಇಳಿಕೆಯ ಲಾಭ?:
ಕಚ್ಚಾ ತೈಲ ಬೆಲೆ ಏರಿಕೆಯ ನೆಪವನ್ನೊಡ್ಡಿ ಇತ್ತೀಚೆಗಷ್ಟೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಕೇಂದ್ರದ ಮೋದಿ ಸರ್ಕಾರಕ್ಕೆ ಈಗ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ, ಇದರ ನೇರ ಲಾಭವನ್ನು ಸರ್ಕಾರ ದೇಶದ ಗ್ರಾಹಕರಿಗೆ ವರ್ಗಾಯಿಸಿ ಇಂಧನ ದರ ಇಳಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.