ಚಂದ್ರವಳ್ಳಿ ನ್ಯೂಸ್, ನವದೆಹಲಿ:
ವಿಶ್ವ ಇವಿ ದಿನದ ಅಂಗವಾಗಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದೇಶದ ಎಲೆಕ್ಟ್ರಿಕ್ ವಾಹನ ವಲಯದ ಅಭಿವೃದ್ಧಿ ಹಾಗೂ ಮೈಲಿಗಲ್ಲುಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆ ಮತ್ತು ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯದ ವಿವಿಧ ಉಪಕ್ರಮಗಳು ಭಾರತವನ್ನು ಸ್ವಚ್ಛ, ಹಸಿರು ಹಾಗೂ ಆತ್ಮನಿರ್ಭರ ವಾಹನ ರಂಗದತ್ತ ಕೊಂಡೊಯ್ಯುತ್ತಿವೆ ಎಂದು ಕುಮಾರಸ್ವಾಮಿ ಪ್ರಶಂಸಿದ್ದಾರೆ.
ಭಾರತದ ಇವಿ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳು:
ಒಟ್ಟು ಮಾರಾಟ: ದೇಶದಲ್ಲಿ ಈವರೆಗೆ ಒಟ್ಟು 1.01 ಕೋಟಿಗೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ.
ಪಿಎಂ ಇ-ಡ್ರೈವ್ ಬೆಂಬಲ: 'PM E-DRIVE' ಯೋಜನೆಯಡಿ 28.63 ಲಕ್ಷ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗಿದೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು: ಯೋಜನೆಯಡಿ 25.88 ಲಕ್ಷ ಇ-ದ್ವಿಚಕ್ರ ವಾಹನಗಳು ಹಾಗೂ 2.75 ಲಕ್ಷ ಇ-ತ್ರಿಚಕ್ರ ವಾಹನಗಳಿಗೆ ಸಬ್ಸಿಡಿ ಮತ್ತು ಬೆಂಬಲ ಸಿಕ್ಕಿದೆ.
ದಾಖಲೆಯ ಬೆಳವಣಿಗೆ: 2014-15ರ ಹಣಕಾಸು ವರ್ಷದಲ್ಲಿ ಕೇವಲ 2,322 ರಷ್ಟಿದ್ದ ವಾರ್ಷಿಕ ಇವಿ ಮಾರಾಟವು, 2025-26ರ ಹಣಕಾಸು ವರ್ಷದಲ್ಲಿ 25.45 ಲಕ್ಷಕ್ಕೆ ಏರಿಕೆಯಾಗಿ ಬೃಹತ್ ಜಿಗಿತ ಕಂಡಿದೆ.




