Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜಿಟಿಟಿಸಿ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅವಧಿ ವಿಸ್ತರಣೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ ಖಾಲಿ ಇರುವ 98 ಹುದ್ದೆಗಳಿಗೆ ನೇರ ನೇರ ನೇಮಕಾತಿ ಮುಖಾಂತರ ಭರ್ತಿಮಾಡಲು ಕೆ.ಇ.ಎ ಮುಖಾಂತರ ಪರಿಷ್ಕøತ ಅಧಿಸೂಚನೆ ಜಾಲತಾಣದಲ್ಲಿ ಹೊರಡಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೆಇಎ ದಿನಾಂಕ 17-09-2024 ರ ಪ್ರಕಟಣೆ ಸಂಖ್ಯೆ ಇಡಿ/ಕೆಇಎ/ಆಡಳಿತ/ಸಿಆರ್04/2023(ಆರ್‍ಪಿಸಿ) ರನ್ವಯ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ಈ ಮಾಹಿತಿಯನ್ನು ಕೆಇಎ ಜಾಲತಾಣ http://kea.kar.nic.in  ದಿಂದ ಪಡೆದುಕೊಳ್ಳಬಹುದಾಗಿದೆ.


ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿರುವುದರಿಂದ ಜಿಟಿಟಿಸಿ ಕೇಂದ್ರದಲ್ಲಿ ಈಗಾಗಲೇ ಪ್ರಾರಭಿಸಿರುವ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 27ವರ್ಷ ದಿಂದ 30 ವರ್ಷಗಳು,

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷಗಳಿಂದ 33 ವರ್ಷಗಳಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷಗಳಿಂದ 35 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಕೆಇಎ ಮುಖಾಂತರ ದಿನಾಂಕ 17-09-20240 ಸಂ.ಇಡಿ/ಕೆಇಎ/ಆಡಳಿತ/ಸಿ.ಆರ್.04/2023(ಆರ್‍ಪಿಸಿ) ಆದೇಶ ಹೊರಡಿಸಿಲಾಗಿದೆ.


ಅಭ್ಯರ್ಥಿಗಳು ಅನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 28-09-2024 ನಿಗದಿಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕೆಇಎ ಜಾಲತಾಣ http://kea.kar.nic.in ವನ್ನು ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ: ಹಿರಿಯ ಜೀವಗಳೊಂದಿಗೆ ಮಗುವಾದ ಸಂಭ್ರಮ!ಆತ್ರೇಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳ ಅತಂತ್ರ ಭವಿಷ್ಯ: ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಬಿ.ಎಸ್.ಚಂದ್ರಶೇಖರ್ ಆಗ್ರಹಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕಾಂಗ್ರೆಸ್ ಮುಖಂಡರ ತೀವ್ರ ಆಕ್ರೋಶತನ್ನ ಪತ್ನಿಯನ್ನು ಆಕೆಯ ಇಚ್ಛೆಯಂತೆ ಪ್ರಿಯಕರನೊಡನೆ ಮದುವೆ ಮಾಡಿಸಿದ ವಿಶಾಲ ಹೃದಯದ ಪತಿ!ಪತ್ರಕರ್ತ ಜಿ. ಮಹಂತೇಶ್‌ಗೆ ಜೀವ ಬೆದರಿಕೆ ಪ್ರಕರಣ: ವಿಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿದ ನಂದಿನಿ ಲೇಔಟ್ ಪೊಲೀಸರುಜೈಲಿನಲ್ಲೂ ಮುಂದುವರಿದ ಪ್ರಜ್ವಲ್ ರೇವಣ್ಣ ವಿಕೃತಿ: ಸೆಲ್‌ನಲ್ಲೇ ಪೆನ್ ಡ್ರೈವ್ ಬಳಸಿ ಅಶ್ಲೀಲ ವೀಡಿಯೋ ವೀಕ್ಷಣೆ!ಮಸೀದಿ ಮುಂದೆ ಗಣೇಶ ಮೆರವಣಿಗೆ ನಿಷೇಧ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶಭಾರತ-ಚೀನಾ ಸಂಬಂಧಕ್ಕೆ ಹೊಸ ಚೈತನ್ಯ: ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ಇಂಟರ್ನೆಟ್ ಇಲ್ಲದೆಯೂ ಯುಪಿಐ ಪಾವತಿ: ‘ಟ್ಯಾಪ್‌ಆ್ಯಂಡ್‌ಪೇ’ ಹಾಗೂ ‘ಮೈಯುಪಿಐ’ ಹೊಸ ಫೀಚರ್‌ಪರಿಚಯಿಸಿದ ಆರ್‌ಬಿಐನಮಗೆ ಹಾಕಿರುವ ಬೇಡಿ ಬಿಚ್ಚಿದರೆ ಕರ್ನಾಟಕವನ್ನೇ ಸ್ವಚ್ಛ ಮಾಡುತ್ತೇವೆ: ನ್ಯಾ. ಬಿ. ವೀರಪ್ಪ