Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಿವಿ ಐವರಿಗೆ ಸ್ಥಾನ

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಶ್ರೇಷ್ಠ ಶೇಕಡಾ ೨ರಷ್ಟು ವಿಜ್ಞಾನಿಗಳ ಜಾಗತಿಕ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಐವರು ಪ್ರಾಧ್ಯಾಪಕರು ಸ್ಥಾನ ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಮಹತ್ವದ ಕೀರ್ತಿ ತಂದಿದ್ದಾರೆ.

ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಸಿ. ಪ್ರಸನ್ನಕುಮಾರ, ಪ್ರೊ. ಯು.ಎಸ್. ಮಹಾಬಲೇಶ್ವರ, ಪ್ರೊ. ಡಿ.ಜಿ. ಪ್ರಕಾಶ್ ಹಾಗೂ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಗೋವಿಂದಪ್ಪ ಅವರು ಸತತ ಐದನೇ ಬಾರಿಗೆ ಈ ಪ್ರತಿಷ್ಠಿತ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದರೊಂದಿಗೆ, ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ಆರ್. ರಘುನಾಥ್ ಅವರು ಈ ಬಾರಿ ಹೊಸದಾಗಿ ಈ ಜಾಗತಿಕ ಪಟ್ಟಿಗೆ ಆಯ್ಕೆಯಾಗಿದ್ದಾರೆ.

Advertisement

ವಿಜ್ಞಾನಿಗಳ ಉನ್ನತ ಮಟ್ಟದ ಸಂಶೋಧನೆ, ಅವರ ಸಂಶೋಧನಾ ಪ್ರಕಟಣೆಗಳು, ಅವುಗಳ ಮಹತ್ವ, ಮೌಲ್ಯ ಹಾಗೂ ಶೈಕ್ಷಣಿಕ ಪ್ರಭಾವವನ್ನು ಪ್ರಮುಖ ಮಾನದಂಡವಾಗಿಟ್ಟುಕೊಂಡು ಈ ಜಾಗತಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

news_1791894576_4_747.webp

 

news_1791894576_0_932.webp

 

news_1791894576_2_502.webp

 

news_1791894576_3_335.webp

 

ಜಾಗತಿಕ ಮಟ್ಟದ ವಿಜ್ಞಾನಿಗಳ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ಐವರು ವಿಷಯ ತಜ್ಞರು ಸ್ಥಾನ ಪಡೆದಿರುವುದು ಇಡೀ ವಿಶ್ವವಿದ್ಯಾಲಯಕ್ಕೇ ಹೆಮ್ಮೆಯ ಸಂಗತಿಯಾಗಿದೆ. ಈ ಮಹತ್ವದ ಸಾಧನೆಗೈದ ಐವರೂ ಪ್ರಾಧ್ಯಾಪಕರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಇ. ರಂಗಸ್ವಾಮಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಚಿತ್ರದುರ್ಗದಲ್ಲಿ ವಿಜೃಂಭಣೆಯ ನಾಡ ದೊರೆ ರಾಜವೀರ ಮದಕರಿ ನಾಯಕ ಜಯಂತಿಚುನಾವಣೆ ನೀತಿ ಸಂಹಿತೆ ಯಿಂದಾಗಿ ಸರಳವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗಂಡಭೇರುಂಡ – ಮೈಸೂರು ರಾಜಶಕ್ತಿಯ ಸಂಕೇತ:…ರಾಯಣ್ಣ ವೀರಮರಣ ಹೊಂದಿದ ಜಾಗದಲ್ಲಿ ದೈವಿಕ ಶಕ್ತಿಯಿದೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ಅಹಂಕಾರ, ಅನಗತ್ಯ ಬಯಕೆಗಳನ್ನು ತೊರೆದಾಗ ಮಾತ್ರ ಜೀವನ ಸಾರ್ಥಕ: ಪಾವಗಡದ ನಂದೀಶ.ಎಲ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಸಂವಿಧಾನದ ಆಶಯದಂತೆ ನಡವಳಿಕೆ ಇರಲಿ: ಸಂಸದ ಕಾರಜೋಳಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು, ಪರಮೇಶ್ವರ್-ಮುನಿಯಪ್ಪ ರಾಜೀನಾಮೆ ನೀಡಿ ಹೋರಾಟ ಮಾಡಲಿ-ಗೋವಿಂದ ಕಾರಜೋಳವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಿವಿ ಐವರಿಗೆ ಸ್ಥಾನಶರಣ ಸಂಸ್ಕೃತಿ ಉತ್ಸವ 2026: ಇಂದು ಮುರುಘಾ ಮಠದಲ್ಲಿ ಬಸವ ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳು