LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಡಳಿತ ಸುಧಾರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್: ಎರಡು ಹೊಸ ಸಚಿವಾಲಯಗಳ ರಚನೆ, ರೌಡಿ ನಿಗ್ರಹಕ್ಕೆ ವಿಶೇಷ ಸ್ಕ್ವಾಡ್!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಆಡಳಿತ ಚುರುಕುಗೊಳಿಸಲು ಮತ್ತು ಜನಸ್ನೇಹಿ ಸರ್ಕಾರ ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರ್ಜರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿದ ಸಿಎಂ, ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇವತ್ತಿನಿಂದಲೇ ನಮ್ಮ ಕೆಲಸ ಆರಂಭವಾಗಿದೆ. ಕೇವಲ ಇತಿಹಾಸ ಓದುವುದಲ್ಲ, ಆಡಳಿತದಲ್ಲಿ ಹೊಸ ಇತಿಹಾಸ ನಿರ್ಮಿಸಿ ಸಾಕ್ಷಿ ಗುಡ್ಡ ಬಿಟ್ಟು ಹೋಗಬೇಕು ಎಂಬ ಸಂದೇಶವನ್ನು ಅಧಿಕಾರಿಗಳಿಗೆ ನೀಡಿದ್ದೇನೆ" ಎಂದು ತಿಳಿಸಿದರು.

ಸಿಎಂ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಹಾಗೂ ನೀಡಿದ ಖಡಕ್ ಸೂಚನೆಗಳು ಇಲ್ಲಿವೆ:

೧. ಎರಡು ಹೊಸ ಸಚಿವಾಲಯಗಳ ಸ್ಥಾಪನೆ:
ಸಾರ್ವಜನಿಕ ಕುಂದುಕೊರತೆ ಸಚಿವಾಲಯ: ದಿನನಿತ್ಯ ತಮ್ಮ ಅಹವಾಲುಗಳನ್ನು ಹಿಡಿದು ಪ್ರತಿಭಟನೆ ನಡೆಸುವ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು, ಅವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗುವುದು.

ಅನಿವಾಸಿ ಭಾರತೀಯರ ಸಚಿವಾಲಯ: ರಾಜ್ಯದಲ್ಲಿ ಬಂಡವಾಳ ಹೂಡುವ ಎನ್‌ಆರ್‌ಐಗಳ ಸಮಸ್ಯೆಗಳ ನಿವಾರಣೆ, ಸಮನ್ವಯತೆ ಹಾಗೂ ಅವರಿಗೆ ಪೂರಕ ಹೂಡಿಕೆ ವಾತಾವರಣ ನಿರ್ಮಿಸಲು ಪ್ರತ್ಯೇಕ ಸಚಿವಾಲಯ ರಚನೆಗೆ ತೀರ್ಮಾನಿಸಲಾಗಿದೆ.

೨. ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ 'ಪೊಲೀಸ್ ಸ್ಕ್ವಾಡ್':
ರಾಜ್ಯದಲ್ಲಿ ರೌಡಿಸಂಗೆ ಸಂಪೂರ್ಣ ಬ್ರೇಕ್ ಹಾಕಲು ಪೊಲೀಸರಿಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಪ್ರತಿ ತಾಲೂಕು ಮಟ್ಟದಲ್ಲೂ ರೌಡಿಗಳ ಮೇಲೆ ನಿಗಾ ಇಡಲು ಮತ್ತು ಅವರ ಅಟ್ಟಹಾಸವನ್ನು ಅಡಗಿಸಲು ಪ್ರತ್ಯೇಕ ವಿಶೇಷ ಪಡೆಯನ್ನು ರಚಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

೩. ೮,೦೦೦ ಕೋಟಿ ಸಿಎಸ್‌ಆರ್ ನಿಧಿ: ಹಳ್ಳಿಗಳಲ್ಲೇ ಹೈಟೆಕ್ ಶಾಲೆ!:
"
ರಾಜ್ಯದಲ್ಲಿ ಕಂಪನಿಗಳ ಬಳಿ ಸುಮಾರು 8,000 ಕೋಟಿ ರೂ. ಸಿಎಸ್‌ಆರ್ ನಿಧಿ ಇದೆ. ಇದು ಎಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿ ಸರ್ಕಾರಕ್ಕೆ ಇರಬೇಕು," ಎಂದು ಗುಡುಗಿದ ಸಿಎಂ, ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ಜನ ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಲು ಹೊಸ ನೀತಿ ಪ್ರಕಟಿಸಿದರು.

ಯೋಜನೆ: ಮೂರು ಪಂಚಾಯತಿಗಳಿಗೆ ಒಂದರಂತೆ ಜಾಗ ಗುರುತಿಸಿ, ಸಿಎಸ್‌ಆರ್ ನಿಧಿಯ ಮೂಲಕ ಎಲ್ಲಾ ಮೂಲಸೌಕರ್ಯಗಳಿರುವ ಸುಸಜ್ಜಿತ ಹೈಟೆಕ್ ಶಾಲೆಗಳನ್ನು ಗ್ರಾಮಗಳಲ್ಲೇ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

೪. "ನನ್ನ ಕಚೇರಿ ಮಾತನ್ನೂ ಕೇಳಬೇಡಿ" - ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ:
ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪ್ರಭಾವಕ್ಕೆ ಮಣಿಯದೆ ಪಾರದರ್ಶಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಅಭಯ ನೀಡಿದ್ದಾರೆ. "ಮಂತ್ರಿಗಳು, ಶಾಸಕರು ಅಷ್ಟೇ ಏಕೆ, ನನ್ನ ಕಚೇರಿಯವರೇ ಆದರೂ ಯಾರ ಒತ್ತಡಕ್ಕೂ ಮಣಿಯಬೇಡಿ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ" ಎಂದ ಅವರು, 15 ದಿನಗಳಲ್ಲಿ ಇಲಾಖಾವಾರು ಕಾರ್ಯಯೋಜನೆ ಹಾಗೂ 25 ದಿನಗಳಲ್ಲಿ ಬಾಕಿ ಕೆಲಸಗಳ ಪೂರ್ಣ ವರದಿ ನೀಡಲು ಗಡುವು ವಿಧಿಸಿದ್ದಾರೆ.

೫. ಗೃಹ ಜ್ಯೋತಿ ದುರುಪಯೋಗಕ್ಕೆ ಬ್ರೇಕ್!:
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡಿದ ಸಿಎಂ, "ಗೃಹ ಜ್ಯೋತಿ ಯೋಜನೆಯಡಿ ಸುಮಾರು 1.60 ಕೋಟಿ ಜನ 200 ಯುನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಆದರೆ, ಕೆಲವರು ಒಂದೇ ಮನೆಯಲ್ಲಿ 4-5 ಮೀಟರ್ ಇಟ್ಟುಕೊಂಡು ಗೃಹ ಬಳಕೆಯ ವಿದ್ಯುತ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಹಾಗೂ ಮೃತರ ಹೆಸರಲ್ಲೂ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಹಣ ದುರುಪಯೋಗ ತಡೆಯಲು ಇನ್ನು ಮುಂದೆ ಫಲಾನುಭವಿಗಳ ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಲಾಗುವುದು" ಎಂದರು.

ಇತರ ಪ್ರಮುಖ ನಿರ್ಧಾರಗಳು:
ಮತದಾರರ ಜಾಗೃತಿ: ಬೇರೆ ರಾಜ್ಯಗಳಂತೆ ನಮ್ಮಲ್ಲಿ ಅರ್ಹರ ಹೆಸರು ಮತದಾರರ ಪಟ್ಟಿಯಿಂದ ಕೈತಪ್ಪಬಾರದು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಾಲೂಕುಗಳಿಗೆ ಭೇಟಿ ನೀಡಿ ಕೆಳಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು.

ಕರ್ನಾಟಕ ಭವನಕ್ಕೆ ಕಾಯಕಲ್ಪ: ದೆಹಲಿಯ ಕರ್ನಾಟಕ ಭವನದ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಅಲ್ಲಿ ಪ್ರತ್ಯೇಕ ಸೆಲ್ ರಚಿಸಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಇತರ ರಾಜ್ಯಗಳ ಮಾದರಿಯಲ್ಲಿ ಸಮರ್ಥವಾಗಿ ಪಡೆದುಕೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಲು ಆದೇಶಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್