ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೀವ್ರ ಗದ್ದಲ ಹಾಗೂ ಗೊಂದಲಗಳ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಹೈಕಮಾಂಡ್ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಬಳಿಕವೂ ಕೊನೆಯ ಕ್ಷಣದವರೆಗೆ ಹಲವು ಬದಲಾವಣೆಗಳು ನಡೆದಿದ್ದು, ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ರಾಜಕೀಯವಾಗಿ ಮೌನಕ್ಕೆ ಶರಣಾಗಿದ್ದರು. ಆದರೆ, ಮೊದಲ ಸಂಪುಟ ರಚನೆಯಲ್ಲಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯ, ಈ ಬಾರಿಯ ಸಂಪುಟ ವಿಸ್ತರಣೆಯಲ್ಲೂ ತಮ್ಮದೇ ಕೈ ಮೇಲಾಗುವಂತೆ ನೋಡಿಕೊಂಡಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಬಣ ಮೇಲುಗೈ ಸಾಧಿಸಲಿದೆ ಎಂಬ ನಿರೀಕ್ಷೆ ಇತ್ತಾದರೂ, ಅಂತಿಮ ಪಟ್ಟಿಯಲ್ಲಿ ಸಿದ್ದರಾಮಯ್ಯ ಆಪ್ತರ ಸಂಖ್ಯೆಯೇ ಹೆಚ್ಚಿರುವುದು ಕಂಡುಬಂದಿದೆ.
ಯಾವ ಬಣಕ್ಕೆ ಎಷ್ಟು ಸ್ಥಾನ? ಪೂರ್ಣ ವಿವರ ಇಲ್ಲಿದೆ:
1. ಸಿದ್ದರಾಮಯ್ಯ ಬಣ (19 ನಾಯಕರು):
ಸಂಪುಟದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಪಡೆಯುವಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಯಶಸ್ವಿಯಾಗಿದ್ದಾರೆ.
ಡಾ. ಜಿ. ಪರಮೇಶ್ವರ್ (ಪರಿಶಿಷ್ಟ ಜಾತಿ, ತುಮಕೂರು), ಕೆ.ಜೆ. ಜಾರ್ಜ್ (ಕ್ರಿಶ್ಚಿಯನ್, ಬೆಂಗಳೂರು), ಎಂ.ಬಿ. ಪಾಟೀಲ್ (ಲಿಂಗಾಯತ, ವಿಜಯಪುರ), ಕೃಷ್ಣ ಬೈರೇಗೌಡ (ಒಕ್ಕಲಿಗ, ಬೆಂಗಳೂರು), ರುದ್ರಪ್ಪ ಲಮಾಣಿ (ಪರಿಶಿಷ್ಟ ಜಾತಿ, ಹಾವೇರಿ), ಬೈರತಿ ಸುರೇಶ್ (ಕುರುಬ, ಬೆಂಗಳೂರು), ಡಾ. ಯತೀಂದ್ರ ಸಿದ್ದರಾಮಯ್ಯ (ಕುರುಬ, ಮೈಸೂರು), ಈಶ್ವರ್ ಖಂಡ್ರೆ (ಲಿಂಗಾಯತ, ಬೀದರ್), ವಿಜಯಾನಂದ ಕಾಶಪ್ಪನವರ್ (ಲಿಂಗಾಯತ, ಹುನಗುಂದ), ಶಿವರಾಜ್ ತಂಗಡಗಿ (ಪರಿಶಿಷ್ಟ ಜಾತಿ, ಕನಕಗಿರಿ), ಸಿ. ಪುಟ್ಟರಂಗಶೆಟ್ಟಿ (ಉಪ್ಪಾರ, ಚಾಮರಾಜನಗರ), ಸಂತೋಷ್ ಲಾಡ್ (ಮರಾಠ, ಕಲಘಟಗಿ), ಡಾ. ಅಜಯ್ ಸಿಂಗ್ (ರಜಪೂತ, ಜೇವರ್ಗಿ), ಗಾಯತ್ರಿ ಶಾಂತೇಗೌಡ (ಕುರುಬ, ಮೇಲ್ಮನೆ ಸದಸ್ಯೆ), ಜಮೀರ್ ಅಹ್ಮದ್ ಖಾನ್ (ಮುಸ್ಲಿಂ, ಚಾಮರಾಜಪೇಟೆ), ಕೆ. ಎಂ. ಶಿವಲಿಂಗೇಗೌಡ (ಒಕ್ಕಲಿಗ, ಅರಸೀಕೆರೆ), ಬಸವರಾಜ ರಾಯರೆಡ್ಡಿ (ಲಿಂಗಾಯತ, ಯಲಬುರ್ಗಾ), ಕೆ. ಎಸ್. ಬಸವಂತಪ್ಪ (ಪರಿಶಿಷ್ಟ ಜಾತಿ, ಮಾಯಕೊಂಡ), ಪಿ. ಎಂ. ನರೇಂದ್ರ ಸ್ವಾಮಿ (ಪರಿಶಿಷ್ಟ ಜಾತಿ, ಮಳವಳ್ಳಿ).
2. ಡಿ.ಕೆ. ಶಿವಕುಮಾರ್ ಬಣ (8 ನಾಯಕರು):
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಿಂದ 8 ನಾಯಕರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಯು.ಟಿ. ಖಾದರ್ (ಮುಸ್ಲಿಂ, ಮಂಗಳೂರು), ರಾಮಲಿಂಗಾ ರೆಡ್ಡಿ (ರೆಡ್ಡಿ ಒಕ್ಕಲಿಗ, ಬೆಂಗಳೂರು), ಲಕ್ಷ್ಮಣ ಸವದಿ (ಲಿಂಗಾಯತ, ಅಥಣಿ), ಎಚ್.ಸಿ. ಬಾಲಕೃಷ್ಣ (ಒಕ್ಕಲಿಗ, ಮಾಗಡಿ), ರಿಜ್ವಾನ್ ಅರ್ಷದ್ (ಮುಸ್ಲಿಂ, ಶಿವಾಜಿನಗರ), ಎನ್. ಚಲುವರಾಯಸ್ವಾಮಿ (ಒಕ್ಕಲಿಗ, ನಾಗಮಂಗಲ), ಮಧು ಬಂಗಾರಪ್ಪ (ಈಡಿಗ, ಸೊರಬ), ಬಿ. ನಾಗೇಂದ್ರ (ಪರಿಶಿಷ್ಟ ಪಂಗಡ, ಬಳ್ಳಾರಿ ಗ್ರಾಮೀಣ).
3. ತಟಸ್ಥ ಬಣ (6 ನಾಯಕರು):
ಯಾವುದೇ ಬಣಕ್ಕೆ ನೇರವಾಗಿ ಗುರುತಿಸಿಕೊಳ್ಳದ, ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಟಸ್ಥ ನಾಯಕರಿಗೂ ಅವಕಾಶ ಸಿಕ್ಕಿದೆ.
ಪ್ರಿಯಾಂಕ್ ಖರ್ಗೆ (ಪರಿಶಿಷ್ಟ ಜಾತಿ, ಕಲ್ಬುರ್ಗಿ), ಟಿ. ರಘುಮೂರ್ತಿ (ಪರಿಶಿಷ್ಟ ಪಂಗಡ, ಚಳ್ಳಕೆರೆ), ಕೆ.ಎಚ್. ಮುನಿಯಪ್ಪ (ಪರಿಶಿಷ್ಟ ಜಾತಿ, ಬೆಂಗಳೂರು ಗ್ರಾಮಾಂತರ), ಡಾ. ಶರಣಪ್ರಕಾಶ್ ಪಾಟೀಲ್ (ಲಿಂಗಾಯತ, ಕಲ್ಬುರ್ಗಿ), ಸತೀಶ್ ಜಾರಕಿಹೊಳಿ (ಪರಿಶಿಷ್ಟ ಪಂಗಡ, ಬೆಳಗಾವಿ – ಹಿಂ. ಸಿದ್ದರಾಮಯ್ಯ ಬಣ), ಎಸ್.ಎಸ್. ಮಲ್ಲಿಕಾರ್ಜುನ್ (ಲಿಂಗಾಯತ, ದಾವಣಗೆರೆ ಉತ್ತರ).
ಒಟ್ಟಾರೆಯಾಗಿ, ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ, ಸಂಪುಟದ ಮೇಲಿನ ಹಿಡಿತ ಮತ್ತು ಪ್ರಭಾವದ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೆ ಮೇಲುಗೈ ಸಾಧಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.



