ಸ್ವಾತಂತ್ರ್ಯ
ಸ್ವಾತಂತ್ರ್ಯ ಸ್ವಾತಂತ್ರ್ಯ
ಎಲ್ಲೖತಪ್ಪಾ ಸ್ವಾತಂತ್ರ್ಯ
ಸ್ವಾತಂತ್ರ್ಯ ಸ್ವಾತಂತ್ರ್ಯ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ಪೂಜಾರಿಯಿಂದ ದೇವರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ದೇವಾಲಯದಿಂದ ಭಕ್ತರಿಗೆ ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ಸ್ವಾಮೀಜಿಯಿಂದ ಮಠಕ್ಕೇ ಸಿಕ್ಕೇಇಲ್ಲ ಸ್ವಾತಂತ್ರ್ಯ
ಮಠದಿಂದ ಮಂದಿಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ರಾಜಕಾರಣಿಯಿಂದ ಪ್ರಜೆಗಳಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ ರಾಜಕೀಯದಿಂದ
ದೇಶಕ್ಕೆ ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ಉಳ್ಳವರಿಂದ ದಲಿತರಿಗೆ ಸಿಕ್ಕೇ ಇಲ್ಲಾ ಸ್ವಾತಂತ್ರ್ಯ
ಬಂಡವಾಳ ಶಾಹಿಗಳಿಂದ ಕಾರ್ಮಿಕರಿಗೆ
ಸಿಗಬೇಕಪ್ಪ ಸ್ವಾತಂತ್ರ್ಯ ( ಪ )
ಭೂಮಾಲಿಕರಿಂದ ಗೇಣೀದಾರರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಪುರುಷರಿಂದ ಸ್ತ್ರೀಯರಿಗೆ ಸಿಗಬೇಕಪ್ಪ ಸ್ವಾತಂತ್ರ್ಯ ( ಪ)
ಪೋಲೀಸರಿಂದ ಕಳ್ಳರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಲಾಯರಿಂದ ಕಕ್ಷಿದಾರರಿಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ )
ಲಾಯರಿಂದ ಕೋರ್ಟ್ ಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಪೋಲೀಸರಿಂದ ಠಾಣೆಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ಬೋಧಕರಿಂದ ವಿದ್ಯಾರ್ಥಿಗಳಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಪರೀಕ್ಷೆ ಯಿಂದ ವಿದ್ಯಾರ್ಥಿಗಳಿಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ವ್ಯಾಪಾರಿಯಿಂದ ಗಿರಾಕಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಬ್ರೋಕರಿಂದ ವ್ಯಾಪಾರಿಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ ( ಪ)
ಯುದ್ದದಿಂದ ಸೖನಿಕರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ದ್ವೇಷದಿಂದ ಯುದ್ದಕ್ಕೆ
ಸಿಗಬೇಕಪ್ಪಾ ಸ್ವಾತಂತ್ರ್ಯ( ಪ)
ಬ್ರಾಹ್ಮಣರಿಂದ ಕ್ಷತ್ರಿಯರಿಗೆ
ಸಿಗಬೇಕಪ್ಪಾ ಸ್ವಾತಂತ್ರ್ಯ
ಕ್ಷತ್ರಿಯರಿಂದ ವೖಶ್ಯರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ವೖಶ್ಯರಿಂದ ಶೂದ್ರರಿಗೆ
ಸಿಗಬೇಕಪ್ಪ ಸ್ವಾತಂತ್ರ್ಯ
ಶೂದ್ರರಿಂದ ಅಸ್ಪೃಶ್ಯರಿಗೆ
ಸಿಕ್ಕೇ ಇಲ್ಲ ಸ್ವಾತಂತ್ರ್ಯ
ಸ್ವಾತಂತ್ರ್ಯ ಸ್ವಾತಂತ್ರ್ಯ
ಎಲ್ಲೖತಪ್ಪಾ ಸ್ವಾತಂತ್ರ್ಯ
ಸ್ವಾತಂತ್ರ್ಯ ಸ್ವಾತಂತ್ರ್ಯ
ಸಿಗಬೇಕಪ್ಪಾ ಸ್ವಾತಂತ್ರ್ಯ
ಕವಿಗಳು: ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ,
ಚಿತ್ರದುರ್ಗ.



