ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ವಸತಿ ಶಾಲೆಗಳು, ಕಾಲೇಜುಗಳು ಹಾಗೂ ಆಡಳಿತ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 3,409 ಹುದ್ದೆಗಳ ಬೃಹತ್ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಹಂಗಾಮಿ/ಅತಿಥಿ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಇಲಾಖೆ ಹಸಿರು ನಿಶಾನೆ ತೋರಿಸಿದೆ.
ಹುದ್ದೆಗಳ ವರ್ಗೀಕರಣ ಹೀಗಿದೆ:
ನೇರ ನೇಮಕಾತಿ ಹುದ್ದೆಗಳು: 1,469, ಹಂಗಾಮಿ/ಅತಿಥಿ ಸಿಬ್ಬಂದಿ ಹುದ್ದೆಗಳು: 1,940, ಒಟ್ಟು ಒಟ್ಟು ಹುದ್ದೆಗಳು: 3,409
ಎಲ್ಲೆಲ್ಲಿ ನೇಮಕಾತಿ ನಡೆಯಲಿದೆ?:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಕೆಳಗಿನ ಸಂಸ್ಥೆಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಮೌಲಾನಾ ಆಜಾದ್ ಮಾದರಿ ಶಾಲೆಗಳು (2,050 ಹುದ್ದೆಗಳು)
ಮೋರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳು (800 ಹುದ್ದೆಗಳು) ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳು ಮತ್ತು ವಿವಿಧ ವಸತಿ ನಿಲಯಗಳು.
ಯಾವೆಲ್ಲಾ ಹುದ್ದೆಗಳು ಲಭ್ಯವಿವೆ?:
ಬೋಧಕ ಹಾಗೂ ಬೋಧಕೇತರ ವಿಭಾಗ ಸೇರಿದಂತೆ ವಿವಿಧ ಹಂತದ ಹುದ್ದೆಗಳು ಭರ್ತಿಯಾಗಲಿದ್ದು, ಪಟ್ಟಿ ಹೀಗಿದೆ.
ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರು:
ಪದವಿ ಪೂರ್ವ ಕಾಲೇಜು ಉಪನ್ಯಾಸಕರು (ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯ ಹಾಗೂ ಇತರೆ ವಿಷಯಗಳು), ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು, ವಿಷಯವಾರು ಶಿಕ್ಷಕರು (ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಹಿಂದಿ)
ದೈಹಿಕ ಶಿಕ್ಷಣ, ಕಲಾ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ.
ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?:
KEA ಮೂಲಕ ನೇರ ನೇಮಕಾತಿ: ಸ್ಪರ್ಧಾತ್ಮಕ ಮತ್ತು ಪಾರದರ್ಶಕ ವಾತಾವರಣ ನಿರ್ಮಿಸಲು, 1,469 ನೇರ ನೇಮಕಾತಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಲಿಖಿತ ಪರೀಕ್ಷೆಯ ಮೂಲಕವೇ ಭರ್ತಿ ಮಾಡಲು ಸರ್ಕಾರ ಆದೇಶಿಸಿದೆ.
ಇನ್ನುಳಿದ ಹಂಗಾಮಿ ಹಾಗೂ ಅತಿಥಿ ಶಿಕ್ಷಕರು/ಸಿಬ್ಬಂದಿಗಳನ್ನು ಇಲಾಖೆಯು ಹೊರಡಿಸಲಿರುವ ಪ್ರತ್ಯೇಕ ಮಾರ್ಗಸೂಚಿಗಳ ಅನ್ವಯ ನೇಮಕ ಮಾಡಿಕೊಳ್ಳಲಾಗುತ್ತದೆ. ಸದ್ಯದಲ್ಲೇ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಆರಂಭವಾಗಲಿದೆ.



