ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಪತ್ತೆಯಾಗಿರುವ ಅಪರೂಪದ ಮಹಾಯಾನ ಬೌದ್ಧ ಚೈತ್ಯಾಲಯ ಮತ್ತು ವಿಹಾರದ ಕುರುಹುಗಳ ಅಧ್ಯಯನ ಮತ್ತು ರಕ್ಷಣೆಗೆ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಕ್ರಮ ಕೈಗೊಂಡಿವೆ. ಕರ್ನಾಟಕ ಸರ್ಕಾರದ ಹಾಗೂ ನುರಿತ ತಜ್ಞರ ತಂಡವು ಈ ಐತಿಹಾಸಿಕ ತಾಣವನ್ನು ಪುರಾತತ್ವ ಮತ್ತು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು
ಬೌದ್ಧರ ನೆಲೆ ಹಾಗೂ ಆರಾಧನಾ ಕೇಂದ್ರವಾಗಿದ್ದ ಇಲ್ಲಿನ ಅವಶೇಷಗಳು ಉತ್ತರ ಕರ್ನಾಟಕದ ಸನ್ನತಿ ಬೌದ್ಧ ಕೇಂದ್ರದೊಂದಿಗೆ ಹೋಲಿಕೆಯಾಗುತ್ತವೆ. ಇಲ್ಲಿನ ಬುದ್ಧನ ಇತಿಹಾಸದ ಬಗ್ಗೆ ರಾಜಘಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎಂದು ಹಲವು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ವಿಚಾರವಾಗಿ ಅಧ್ಯಯನ ಸಮಿತಿ ರಚಿಸಲು ಚಿಂತಿಸಲಾಗುವುದು. ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಅಮೂಲ್ಯವಾದಂತಹ ಸಾವಿರಾರು ವರ್ಷಗಳ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇದರ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡಗಳನ್ನು ರಚಿಸಿ ಈ ಭಾಗದಲ್ಲಿನ ಬೌದ್ದ ಸಂಸ್ಕೃತಿ, ಆ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡುತ್ತೇವೆ” ಎಂದರು.
ನಾನು ಮುಖ್ಯಮಂತ್ರಿ ಆದ ತಕ್ಷಣ ಒಂದು ಹೊಸ ಇಲಾಖೆ ಮಾಡಲು ಹೊರಟಿದ್ದೇನೆ. ಹೋರಾಟ ಮಾಡುವವರಿಗೆ, ನೊಂದ ಜನರಿಗೆ ಧ್ವನಿಯನ್ನು ತುಂಬಲು, ಅವರ ವಿಚಾರ ತಿಳಿಯಲು ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಮುಂದಾಗಿದ್ದೇವೆ” ಎಂದರು.



