ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಿರಿಯೂರು ತಾಲೂಕು ಶಾಖೆಯ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರಾದ ಚಿತ್ರಾಲ ಮಹೇಶ್ವರರೆಡ್ಡಿ ಅವರು ಚುನಾವಣಾ ಅಧಿಕಾರಿಯಾಗಿ ಈ ಸಂಪೂರ್ಣ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು.
ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುಂಗಸವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಹರಿಯಬ್ಬೆ ಸುನಂದಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.
ನೂತನ ಪದಾಧಿಕಾರಿಗಳ ವಿವರ:
ಸಂಘದ ವಿವಿಧ ಸ್ಥಾನಗಳಿಗೆ ಆಯ್ಕೆಯಾದ ಇತರ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
ಹುದ್ದೆ ಆಯ್ಕೆಯಾದ ಪದಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ:
ಅಧ್ಯಕ್ಷರು ಸುನಂದಮ್ಮ (ಸಹಶಿಕ್ಷಕಿ) ಸ.ಹಿ.ಪ್ರಾ. ಶಾಲೆ, ಮುಂಗಸವಳ್ಳಿ
ಉಪಾಧ್ಯಕ್ಷರು ಎಸ್.ವಿ. ನಾಗೇಶ್ (ಸಹಶಿಕ್ಷಕ)
ವೈ.ಸಿ. ದೇವರತ್ನ (ಸಹಶಿಕ್ಷಕಿ) ಸ.ಕಿ.ಪ್ರಾ. ಶಾಲೆ, ಉಪ್ಪಾರಹಟ್ಟಿ ಬೆನಕನಹಳ್ಳಿ ಲಾಯರ್ ಸ.ಕಿ.ಪ್ರಾ. ಶಾಲೆ, ದಾಸರಹಳ್ಳಿ
ಕಾರ್ಯದರ್ಶಿ ಹೆಚ್. ಕೋಟಿಲಿಂಗಯ್ಯ (ಸಹಶಿಕ್ಷಕ) ಸ.ಹಿ.ಪ್ರಾ. ಶಾಲೆ, ಕಾತ್ರಿಕೇನಹಳ್ಳಿ
ಸಹಕಾರ್ಯದರ್ಶಿಗಳು ಟಿ. ಮಂಜುನಾಥ್ (ಸಹಶಿಕ್ಷಕ)
ಹಸೀನಾ (ಸಹಶಿಕ್ಷಕಿ) ಸ.ಕಿ.ಪ್ರಾ. ಶಾಲೆ, ಬಿದರಕೆರೆ ಎ.ಕೆ.ಕಾಲೋನಿ
ಸ.ಕಿ.ಪ್ರಾ. ಶಾಲೆ, ಇದ್ದಲನಾಗೇನಹಳ್ಳಿ
ಖಜಾಂಚಿ ಎಂ. ದಿವ್ಯನಾಥ್ (ಸಹಶಿಕ್ಷಕ) ಸ.ಹಿ.ಪ್ರಾ. ಶಾಲೆ, ಹೂವಿನಹೊಳೆ
ಸಂಘಟನಾ ಕಾರ್ಯದರ್ಶಿಗಳು ಬಿ. ದಾದಾಪೀರ್ (ಸಹಶಿಕ್ಷಕ)
ಜಿ.ಎಸ್. ನವೀನ್ (ಮುಖ್ಯಶಿಕ್ಷಕ) ಸ.ಹಿ.ಪ್ರಾ. ಶಾಲೆ, ಗೌಡನಹಳ್ಳಿ
ಸ.ಹಿ.ಪ್ರಾ. ಶಾಲೆ, ಭರಂಗಿರಿ.
ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆಯ ಅಧಿಕೃತ ವಿವರಗಳನ್ನು ಸಂಘದ ನೂತನ ಅಧ್ಯಕ್ಷರಾದ ಸುನಂದಮ್ಮ ಅವರು ಮಾಧ್ಯಮಗಳಿಗೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. ನೂತನ ಪದಾಧಿಕಾರಿಗಳಿಗೆ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.



