Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ: ದೇವಿಕ ಬಿ.ಎಂ ಕಾಲೇಜು ಟಾಪರ್

Advertisement

​ಚಂದ್ರವಳ್ಳಿ ನ್ಯೂಸ್, ಹರಿಯಬ್ಬೆ: 
2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಹರಿಯಬ್ಬೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 75ರಷ್ಟು ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ. 

​ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳು-
​ಕಾಲೇಜಿನ ಅನೇಕ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಹರಿಯಬ್ಬೆ ಸರ್ಕಾರಿ ಕಾಲೇಜ್ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

​ಕಾಲೇಜು ಟಾಪರ್: ದೇವಿಕ ಬಿ.ಎಂ. ಅವರು 559 ಅಂಕಗಳನ್ನು (93.16%) ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 

​ಇತರ ಪ್ರಮುಖ ಸಾಧಕರು: ನವ್ಯ ಆರ್. (92.83%), ರಾಜೇಶ್ ಹೆಚ್. (90.81%), ಗಾಯನ ಸಿ. (89.00%), ಮತ್ತು ಉಮಾ ಎಸ್.ಎನ್. (88.00%) ರವರು ಉತ್ತಮ ಅಂಕಗಳೊಂದಿಗೆ ಗಮನ ಸೆಳೆದಿದ್ದಾರೆ. 

​ಒಟ್ಟಾರೆಯಾಗಿ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (Distinction), 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 

​ಫಲಿತಾಂಶದ ಮುಖ್ಯಾಂಶಗಳು
​ಒಟ್ಟು ಫಲಿತಾಂಶ: ಕಾಲೇಜು ಶೇ.
75 ರಷ್ಟು ಸಾಧನೆ ಮಾಡಿದೆ. 
​ಉನ್ನತ ಅಂಕಗಳು: ಒಟ್ಟು
450ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದೆ. 

​ಅಭಿನಂದನೆಗಳು ಮತ್ತು ದಾಖಲಾತಿ-
​ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು
, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಹರಿಯಬ್ಬೆ ಗೆಳೆಯರ ಬಳಗದವರು ಮತ್ತು ಗ್ರಾಮಸ್ಥರು ಹೃತೂರ್ವಕವಾಗಿ ಅಭಿನಂದಿಸಿದ್ದಾರೆ. 

​ಇದೇ ಸಂದರ್ಭದಲ್ಲಿ, 2026-27ನೇ ಸಾಲಿಗೆ ಕಲಾ (HESP), ವಾಣಿಜ್ಯ (HEBA) ಮತ್ತು ವಿಜ್ಞಾನ (PCMB) ವಿಭಾಗಗಳಿಗೆ ಹೊಸ ದಾಖಲಾತಿಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.  ​ಮಾಹಿತಿಗಾಗಿ ಸಂಪರ್ಕಿಸಿ: 9448956214, 6362088506, 9980850423.

news_1777041061_0_657.webp

 

news_1777041054_8_266.webp

 

news_1777041055_9_336.webp

 

news_1777041054_7_237.webp

 


ಕೆ.ಪಿ.ಎಸ್. (
KPS) ಶಾಲೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಹರಿಯಬ್ಬೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಕೆ.ಪಿ.ಎಸ್. ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಮಾಡಿದ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಗ್ರಾಮಸ್ಥರು ತಿಳಿಸಿದ್ದಾರೆ.

ಶಾಲೆಯ ಒಟ್ಟಾರೆ ಶ್ರೇಷ್ಠ ಫಲಿತಾಂಶಕ್ಕಾಗಿ ಅಪ್ರತಿಮ ಪರಿಶ್ರಮ ಮತ್ತು ಮಾರ್ಗದರ್ಶನ ನೀಡಿದ ಶಾಲೆಯ ಬೋಧಕ ವೃಂದಕ್ಕೆ, ಹರಿಯಬ್ಬೆಯ ಪೋಷಕರಿಗೂ ಮತ್ತು SDMC ಸದಸ್ಯರಿಗೂ ಅಭಿನಂದನೆಗಳನ್ನು ಗ್ರಾಮಸ್ಥರು ತಿಳಿಸಿದ್ದಾರೆ.

ಶೈಕ್ಷಣಿಕ ಶಿಸ್ತು ಮತ್ತು ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಕೆ.ಪಿ.ಎಸ್ ಉಪಪ್ರಾಂಶುಪಾಲ ರುದ್ರಮುನಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರಯ್ಯ ಅವರ ದಕ್ಷ ನಾಯಕತ್ವದ ಬಗ್ಗೆ ನನಗೆ ಹೆಮ್ಮೆಯಿದೆ.

ಕೆ.ಪಿ.ಎಸ್ ಸಂಸ್ಥೆಯು ಹೀಗೆಯೇ ಬೆಳೆಯಲಿ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಇನ್ನೂ ಉನ್ನತ ಗುರಿಗಳನ್ನು ಸಾಧಿಸಲಿ. ನಮ್ಮ ಗ್ರಾಮದ ಹಿರಿಯರ ಮತ್ತು ಹಿತೈಷಿಗಳ ಕನಸು ನನಸಾಗಿದೆ. ನಾನು ಎಂದೆಂದಿಗೂ ನಿಮ್ಮೆಲ್ಲರ ಜೊತೆಗಿರುತ್ತೇನೆ.
ಹರಿಯಬ್ಬೆ ಡಾ. ಎಂ. ಜಿ. ಗೋವಿಂದಯ್ಯ, ವಿಶ್ರಾಂತ ಡೀನ್, ಜಿಕೆವಿಕೆ, ಬೆಂಗಳೂರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಂಗಲ್ಯ, ಜನಿವಾರ ವಿವಾದ: ಕಾಂಗ್ರೆಸ್‌ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಭಕ್ತಿಭಾವದ ಶ್ರೀ ರಾಮನವಮಿ ಆಚರಣೆ; ಆರ್. ಅಶೋಕ್ ಭಾಗಿದಾವಣಗೆರೆ ವಿಶ್ವವಿದ್ಯಾಲಯದ ಬಳಿ ಸುಸಜ್ಜಿತ ಬಸ್ ನಿಲ್ದಾಣ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ನವೋದ್ಯಮ ಮತ್ತು ಕೈಗಾರಿಕಾ ಕ್ರಾಂತಿಯ ನಾಯಕತ್ವ: ಕರ್ನಾಟಕದ ಕಹಳೆಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ;- ಸಿ.ಟಿ. ರವಿ ಆಕ್ರೋಶ"ಗ್ಯಾರಂಟಿ ಬೇಡ, ಜೀವಕ್ಕೆ ಗ್ಯಾರಂಟಿ ಕೊಡಿ": ನಿಖಿಲ್ ಕುಮಾರಸ್ವಾಮಿ ಆಗ್ರಹಶರಾವತಿ ಯೋಜನೆಗೆ ಕೇಂದ್ರದ ಅಸಹಕಾರ: ಸಿದ್ದರಾಮಯ್ಯ ತೀವ್ರ ಅಸಮಾಧಾನಗ್ರಾಮ ಪಂಚಾಯತ್ ಅನುದಾನ ಬಿಡುಗಡೆಗೆ ತಾರತಮ್ಯ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: "ಕರ್ನಾಟಕಕ್ಕೆ ಸಿಗದ ಮೂಲಸೌಕರ್ಯ ನ್ಯಾಯ"ಬೆಂಗಳೂರು ಕೃಷಿ ತಂತ್ರಜ್ಞಾನದ ರಾಜಧಾನಿಯಾಗಲಿ: ಸಿಎಂ ಸಿದ್ದರಾಮಯ್ಯ ಆಶಯ