Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರು ತಾಲೂಕಿನಲ್ಲಿ ಭೀಕರ ಬರಗಾಲ: ತುರ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಜೆಡಿಎಸ್ ಆಗ್ರಹ

​ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಮುಂಗಾರು ಮಳೆ ವೈಫಲ್ಯದಿಂದಾಗಿ ತೀವ್ರ ಸ್ವರೂಪದ ಬರಗಾಲ ಆವರಿಸಿದ್ದು
, ಕೃಷಿ ಸಂಪೂರ್ಣ ಹಾನಿಗೊಂಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಅಭಾವ ಹಾಗೂ ಉದ್ಯೋಗದ ಕೊರತೆಯಿಂದ ಜನರು ನಗರ ಪ್ರದೇಶಗಳಿಗೆ ಮತ್ತು ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

 ಈ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರವು ತಕ್ಷಣವೇ ತುರ್ತು ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜೆಡಿಎಸ್ (ಜಾತ್ಯತೀತ) ಹಿರಿಯೂರು ತಾಲೂಕು ಘಟಕದ ಅಧ್ಯಕ್ಷ ಕೆ. ಶಂಕರಮೂರ್ತಿ ಹಾಗೂ ಪದಾಧಿಕಾರಿಗಳು ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. 

Advertisement

​ಜೆಡಿಎಸ್ ಸಲ್ಲಿಸಿರುವ ಪ್ರಮುಖ ಬೇಡಿಕೆಗಳು:
​ವಿಜ್ಞಾನಾಧಾರಿತ ಬೆಳೆ ಹಾನಿ ಸಮೀಕ್ಷೆ ಹಾಗೂ ಪರಿಹಾರ:
ಮಳೆ ಅಭಾವದಿಂದ ಬಿತ್ತನೆ ಮಾಡಲಾಗದ ಭೂಮಿ
, ಮೊಳಕೆಯೊಡೆದು ವಿಫಲವಾದ ಬೆಳೆಗಳು ಮತ್ತು ಒಣಗಿ ನಾಶವಾದ ಬೆಳೆಗಳ ನಿಖರ ವೈಜ್ಞಾನಿಕ ಸಮೀಕ್ಷೆ ನಡೆಸಿ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ, NDRF/SDRF ಮಾರ್ಗದರ್ಶಿ ಸೂತ್ರಗಳನ್ವಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಬೇಕು. 

​ಕುಡಿಯುವ ನೀರು ಮತ್ತು RO ಪ್ಲಾಂಟ್ ಸರಿಪಡಿಸುವಿಕೆ: ಬರಪೀಡಿತ ಗ್ರಾಮಗಳಿಗೆ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು, ತಾತ್ಕಾಲಿಕ ನೀರು ಪಾಯಿಂಟ್‌ಗಳ ನಿರ್ಮಾಣ, ಕೆಟ್ಟುಹೋದ ಬೋರ್‌ವೆಲ್ ಹಾಗೂ ಆರ್‌.ಒ. ಪ್ಲಾಂಟ್‌ಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಬೇಕು. 

​ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ: ಹಿಂಗಾರು ಋತುವಿನಲ್ಲಿ ಕಡಿಮೆ ಅವಧಿಯ ಬೆಳೆಗಳನ್ನು (ರಾಗಿ, ತೊಗರಿ, ಕಡಲೆ, ಎಳ್ಳು, ಮಿಲೆಟ್ಸ್ ಮುಂತಾದವು) ಬೆಳೆಯಲು ಉಚಿತ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ತಾಂತ್ರಿಕ ಮಾರ್ಗದರ್ಶನ ಒಳಗೊಂಡ ವಿಶೇಷ ಸಹಾಯಧನ ಪ್ಯಾಕೇಜ್ ಘೋಷಿಸಬೇಕು. 

​ಜಾನುವಾರುಗಳ ರಕ್ಷಣೆ ಹಾಗೂ ಗೋಶಾಲೆ ಸ್ಥಾಪನೆ: ತೀವ್ರ ಮೇವಿನ ಅಭಾವವಿರುವ ಕಾರಣ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಉಚಿತ ಮೇವು, ನೀರು ಮತ್ತು ಪಶುವೈದ್ಯಕೀಯ ಆರೈಕೆ ಒದಗಿಸಬೇಕು. 

​ಸ್ಥಳೀಯವಾಗಿ ಉದ್ಯೋಗ ಸೃಷ್ಟಿ: ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು ಹಾಗೂ ಯುವಕರು ವಲಸೆ ಹೋಗುವುದನ್ನು ತಪ್ಪಿಸಲು ಹಳ್ಳ-ಕೊಳ್ಳ ಹೂಳೆತ್ತುವುದು, ಕೆರೆ-ಚೆಕ್ ಡ್ಯಾಂ ಮರುಜ್ಜೀವನ ಮುಂತಾದ ತುರ್ತು ಉದ್ಯೋಗ ಕಾಮಗಾರಿಗಳನ್ನು ತಾಲೂಕು ಮಟ್ಟದಲ್ಲಿ ಆರಂಭಿಸಬೇಕು. 

​ಸಾಲ ಮನ್ನಾ ಮತ್ತು ಬೆಳೆ ವಿಮೆ ಪರಿಹಾರ: ಬರಪೀಡಿತ ತಾಲೂಕಿನಲ್ಲಿ ರೈತರ ಭೂಕಂದಾಯವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರು ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದಿರುವ ಕೃಷಿ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕು ಹಾಗೂ ಬೆಳೆ ವಿಮೆ ಕಂಪನಿಗಳಿಂದ ಅರ್ಹ ರೈತರಿಗೆ ತಕ್ಷಣ ವಿಮೆ ಪರಿಹಾರ ಹಣ ತಲುಪಿಸುವಂತೆ ನಿರ್ದೇಶನ ನೀಡಬೇಕು. 

​ಕೇಂದ್ರ ಅಧ್ಯಯನ ತಂಡಕ್ಕೆ ಮನವಿ ಮತ್ತು ಅನುದಾನ ಬಿಡುಗಡೆ:
ಕೇಂದ್ರ ಸರ್ಕಾರದ ಬರದ ಅಧ್ಯಯನ ತಂಡ ಆಗಮಿಸಲಿದ್ದು ತಾಲೂಕಿನ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಬೇಕು ಹಾಗೂ ಚಿತ್ರದುರ್ಗ ಜಿಲ್ಲೆಯ ತುರ್ತು ಬರಪರಿಹಾರ ಕಾಮಗಾರಿಗಳಿಗೆ ಕನಿಷ್ಠ
₹50 ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. 

​ಎಚ್ಚರಿಕೆ: ಬರಪೀಡಿತ ಹಿರಿಯೂರು ತಾಲೂಕಿನಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಸೂಕ್ತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳದಿದ್ದರೆ, ಜನತಾ ದಳ (ಜಾತ್ಯತೀತ) ಪಕ್ಷದ ವತಿಯಿಂದ ತಾಲೂಕು ಮತ್ತು ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಕೆ. ಶಂಕರಮೂರ್ತಿ ಎಚ್ಚರಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ