Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭಾರೀ ಮಳೆ ಒಂದೇ ರಾತ್ರಿಗೆ ಪಕ್ಕುರ್ತಿ ಹಾಗೂ ಗೌರಸಮುದ್ರದ ಕೆರೆ ಭರ್ತಿ

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣ ಹಾಗೂ ತಾಲೂಕಿನಲ್ಲಿ ಕಳೆದ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದ ಪರಿಣಾಮ ತಾಲೂಕಿನ ಪಕ್ಕುರ್ತಿ ಕೆರೆ ಹಾಗೂ ಗೌರಸಮುದ್ರದ ಕೆರೆ ತುಂಬಿ ಕೋಡಿ ಬಿದ್ದಿದ್ದು, ರಂಗಯ್ಯನದುರ್ಗ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಹರಿದು ಬರಲಿದೆ.

 ಕಳೆದ ಶುಕ್ರವಾರ ರಾತ್ರಿ ವೇಳೆ ಸುಮಾರು ೧೧ ಗಂಟೆಯಿಂದ ಶುರುವಾದ ಮಳೆಯು ಬೆಳಿಗ್ಗೆ ೬ ಗಂಟೆಯ ವರೆಗೂ ಧಾರಾಕಾರ ಮಳೆ ಸುರಿದಿದೆ.

  ಧಾರಾಕಾರವಾಗಿ ಸುರಿದ ಮಳೆಯಿಂದ ಪಟ್ಟಣದ ಐತಿಹಾಸಿಕ ಕೂಗೆಗುಡ್ಡದ ಕೆರೆ ತುಂಬಿದ ಪರಿಣಾಮ ಯತೇಚ್ಚವಾದ ನೀರು ರಾಜಕಾಲುವೆ ಮೂಲಕ ಹರಿದು ತಾಲೂಕಿನ ರಾಯಾಪುರ ಬಳಿಯ ತುಪ್ಪದಕ್ಕನಹಳ್ಳಿ ಕೆರೆಗೆ ತುಂಬಿಕೊಂಡಿದೆ. ಪಟ್ಟಣದ ದವಳಪ್ಪನ ಕುಂಟೆ ಸೇರಿದಂತೆ ತಾಲೂಕಿನ ಇನ್ನಿತರ ಹಳ್ಳಗಳು ತುಂಬಿ ಹರಿದಿವೆ. 

ತಾಲೂಕಿನಲ್ಲಿ ಸುರಿದ ಮಳೆಯಿಂದ ಚಿಕ್ಕೋಬನಹಳ್ಳಿ ಬಳಿಯ ಬ್ಯಾರೇಜ್ ತುಂಬಿಕೊಂಡು ಅಪಾರ ಪ್ರಮಾಣದ ನೀರು ರಂಗಯ್ಯನದುರ್ಗ ಜಲಾಶಯಕ್ಕೆ ಹರಿದಿದೆ.  ತಾಲೂಕಿನಲ್ಲಿನ ಪಕ್ಕುರ್ತಿ ಕೆರೆಯು ತುಂಬಿ ಕೋಡಿ ಬಿದ್ದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ತಾಲೂಕಿನ ದೇವಸಮುದ್ರ ಕೆರೆ, ಅಮಕುಂದಿಕೆರೆ, ಹಿರೇಕೆರೆಹಳ್ಳಿ ಕೆರೆನಾಗಸಮುದ್ರದ ಕೆರೆ, ಅಶೊಕ ಸಿದ್ದಾಪುರ ಕೆರೆ , ಭಟ್ರಹಳ್ಳಿ ಕೆರೆ ಹಾಗೂ ಇನ್ನಿತರ ಕೆರೆ ಕುಂಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದಿದೆ.

            ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಾಗಿದ್ದು, ತಾಲೂಕಿನಲ್ಲಿ ಅತಿ ಹೆಚ್ಚು ದೇವಸಮುದ್ರದಲ್ಲಿ ೮೯.೩ ಮಿ.ಮೀ ನಷ್ಟು ಅಧಿಕ ಮಳೆಯಾಗಿದೆ. ಮೊಳಕಾಲ್ಮೂರು ಪಟ್ಟಣದಲ್ಲಿ ೭೨.೬ ಮಿ.ಮೀ, ತಾಲೂಕಿನ ರಾಂಪುರ ದಲ್ಲಿ ೭೦.೧ ಮಿ.ಮೀ.ರಾಯಾಪುರ ದಲ್ಲಿ ೬೨ ಮಿ.ಮೀ, ಹಾಗೂ ಬಿ.ಜಿ.ಕೆರೆ ಯಲ್ಲಿ ೩೪.೪ ಮಿ.ಮೀ. ನಷ್ಟು ಮಳೆಯಾಗಿರುವುದು ವರದಿಯಾಗಿದೆ.

ಧಾರಾಕಾರವಾಗಿ ಸುರಿದ ಮಳೆಯಿಂದ ತಾಲೂಕಿನ ಮೊಗಲಹಳ್ಳಿಯಲ್ಲಿ ೧, ಬಿ.ಜಿ.ಕೆರೆಯಲ್ಲಿ ೨, ಹಿರೇಕೆರೆಹಳ್ಳಿ ಮ್ಯಾಸರಹಟ್ಟಿ ೧, ದೇವಸಮುದ್ರದಲ್ಲಿ ೨, ಫಕ್ಕುರ್ತಿಯಲ್ಲಿ ೧, ಕೆರೆಕೊಂಡಾಪುರದಲ್ಲಿ ೧ , ಪೆನ್ನಮ್ಮನಹಳ್ಳಿಯಲ್ಲಿ ೧ ಹಾಗೂ ಕೆಳಗಿನಕಣಿವೆಯಲ್ಲಿ ೧ ಸೇರಿದಂತೆ  ಒಟ್ಟು ೧೦ ಮನೆಗಳು ಭಾಗಶಃ ಹಾನಿಯಾಗಿರುವುದು ವರದಿಯಾಗಿದೆ. ತಾಲೂಕಿನಲ್ಲಿ ಬಿತ್ತನೆ ಮಾಡಿದ ಕೃಷಿ ಬೆಳೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ