LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ಬರದ ನಾಡಿಗೆ ಜಲಸಂಜೀವಿನಿ: ಸಿಎಂ ಡಿ.ಕೆ ಶಿವಕುಮಾರ್ ಅವರ ಭರವಸೆಗೆ ಒಲಿದ 244 ಕೋಟಿಯ ಬೃಹತ್ ಜಲ ಯೋಜನೆ!

Advertisement
Advertisement

ಸುದೀರ್ಘ ಜಲಸಂಕಷ್ಟಕ್ಕೆ ಶಾಶ್ವತ ಮುಕ್ತಿ ದೊರಕಿಸಿಕೊಟ್ಟ ಜನನಾಯಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಜಿ ಸಚಿವ
, ದಿವಂಗತ ಡಿ. ಸುಧಾಕರ್ ಅವರ ಅಕಾಲಿಕ ಮರಣದ ನಂತರ ಹಿರಿಯೂರು ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ನಾಯಕತ್ವದ ಶೂನ್ಯತೆಯನ್ನು ದೂರದೃಷ್ಟಿಯ ಕಾರ್ಯವೈಖರಿಯಿಂದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಶಸ್ವಿಯಾಗಿ ತುಂಬುತ್ತಿದ್ದಾರೆ.
ಬರ ಪೀಡಿತ ಹಣೆಪಟ್ಟಿ ಹೊತ್ತ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಅವರು
, ಇದೀಗ ಜವನಗೊಂಡನಹಳ್ಳಿ ಹೋಬಳಿ ಹಾಗೂ ಗಾಯತ್ರಿ ಜಲಾಶಯದ ಭಾಗದ ಸುದೀರ್ಘ ಜಲಸಂಕಷ್ಟಕ್ಕೆ 244.00 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರಕಿಸಿಕೊಡುವ ಪ್ರಮುಖ ಹಿರಿಯೂರು ಕ್ಷೇತ್ರದ ಅಭಿವೃದ್ಧಿ ಸೂತ್ರದ ಭರವಸೆ ಮುಖ್ಯಮಂತ್ರಿಗಳಾಗಿ ಹೊರಹೊಮ್ಮಿದ್ದಾರೆ.

 1000 ಅಡಿಗಿಂತ ಆಳಕ್ಕೆ ಕುಸಿದಿದ್ದ ಅಂತರ್ಜಲ: ಸವಾಲಾದ ನೀರಾವರಿ ಸಮಸ್ಯೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯು ಜಿಲ್ಲೆಯಲ್ಲೇ ಅತಿ ತೀವ್ರ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಈ ಭಾಗದಲ್ಲಿ ಅಂತರ್ಜಲ ಮಟ್ಟವು ಸುಮಾರು 1000 ಅಡಿಗಿಂತಲೂ ಆಳಕ್ಕೆ ಕುಸಿದಿದ್ದು, ಕುಡಿಯುವ ನೀರಿನ ಅಭಾವ ತೀವ್ರವಾಗಿತ್ತು. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿ, ಹೆಚ್ಚಿನ ಕುಡಿಯುವ ನೀರಿನ ಘಟಕಗಳು ನಿಷ್ಕ್ರಿಯಗೊಂಡಿದ್ದವು.

ಈ ಸವಾಲನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಹಾಗೂ ಅಂತರ್ಜಲ ಮರುಪೂರಣ ಯೋಜನೆಯ ಅಗತ್ಯತೆಯನ್ನು ಪೂರೈಸಲು ಕಾಂಗ್ರೆಸ್ ಸರ್ಕಾರದಲ್ಲಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ರೈತರ ನಿರಂತರ ಹೋರಾಟ ಮತ್ತು ಜನಪ್ರತಿನಿಧಿಗಳ ಬೇಡಿಕೆಗೆ ಸ್ವಂದಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಈ ಮಹತ್ವದ ಯೋಜನೆಗೆ ಅಂಕಿತ ಹಾಕಿದ್ದಾರೆ.
5 ಗ್ಯಾರಂಟಿಗಳು ಸೇರಿದಂತೆ ಹಲವು ಯೋಜನೆಗಳ ಮಧ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದ್ದರೂ ಮುಖ್ಯಮಂತ್ರಿಗಳು ಎದೆಗುಂದದೆ ತಾಂತ್ರಿಕ ಮತ್ತು ಆರ್ಥಿಕ ಸವಾಲುಗಳನ್ನು ಜಯಿಸಿ ಸರ್ಕಾರದ ಅನುಮೋದನೆ ನೀಡಿರುವುದು ಸುಲಭದ ಮಾತಾಗಿರಲಿಲ್ಲ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹಿರಿಯೂರಿನ ಜಲಸಂಕಷ್ಟದ ನೈಜ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಕ್ಷೇತ್ರದ ರೈತರು ಸೇರಿದಂತೆ, ಗನ್ನಾಯಕನಹಳ್ಳಿ ಆರ್.ಮಂಜುನಾಥ್, ಅಮೃತೇಶ್ವರಸ್ವಾಮಿ, ಸುಹಾಸ್ ಸುಧಾಕರ್ ಅವರು, ನಿರಂತರ ಸಭೆ ಹಾಗೂ ಮನವಿಗಳ ಮೂಲಕ ಯೋಜನೆಗೆ ಸಚಿವ ಸಂಪುಟದ ಸಮ್ಮತಿ ಸಿಗುವಂತೆ ನೋಡಿಕೊಂಡಿದ್ದಾರೆ.

ಇದರ ಪರಿಣಾಮವಾಗಿ, ಕಳೆದ 2026ರ ಜುಲೈ 21ರಂದು ಕರ್ನಾಟಕ ಸರ್ಕಾರವು (ಆದೇಶ ಸಂಖ್ಯೆ: MID/407/MISU/2026 (P-1)) ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ 244.00 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಐತಿಹಾಸಿಕ ಆದೇಶ ಹೊರಡಿಸಿದೆ.

ಯೋಜನೆಯ ತಾಂತ್ರಿಕ ವಿವರಗಳು ಮತ್ತು ವೈಶಿಷ್ಟ್ಯಗಳುಈ ಬೃಹತ್ ನೀರಾವರಿ ಯೋಜನೆಯು ತಾಂತ್ರಿಕವಾಗಿ ಅತ್ಯಂತ ಸುಸಜ್ಜಿತವಾಗಿ ವಿನ್ಯಾಸಗೊಂಡಿದ್ದು, ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ನದಿಯ ಮೂಲ: ದೊಡ್ಡಘಟ್ಟ ಗ್ರಾಮದ ಹತ್ತಿರ ಹರಿಯುವ ವೇದಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ (Submersible Diversion Weir) ನಿರ್ಮಾಣ ಮಾಡಲಾಗುತ್ತದೆ.
ವೇದಾವತಿ ನದಿಯಿಂದ ಎತ್ತುವ ನೀರಿನ ಪ್ರಮಾಣ: 0.307 ಟಿ.ಎಂ.ಸಿ ನೀರನ್ನು ಎತ್ತಿ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ತುಂಬಿಸುವುದು ಮುಖ್ಯ ಯೋಜನೆಯಾಗಿದೆ.
ಪಂಪಿಂಗ್ ವ್ಯವಸ್ಥೆ: ಜಾಕ್‌ವೆಲ್ ಮತ್ತು ಪಂಪ್ ಹೌಸ್ ನಿರ್ಮಿಸಿ
, 2000 ಹೆಚ್.ಪಿ (4+1) VT Pump ಗಳನ್ನು ಅಳವಡಿಕೆ ಮಾಡಲಾಗುತ್ತದೆ.

ಪೈಪ್‌ಲೈನ್ ಜಾಲ: 28.13 ಕಿ.ಮೀ ಉದ್ದದ MS ಪೈಪ್ ಏರು ಕೊಳವೆ (1100 ಮಿ.ಮೀ. ವ್ಯಾಸ) ಮತ್ತು 16.82 ಕಿ.ಮೀ ಉದ್ದದ HDPE ಗುರುತ್ವಾಕರ್ಷಣ ಕೊಳವೆ ಮಾರ್ಗ (1050 ಮಿ.ಮೀ. ವ್ಯಾಸ).
ನೀರು ತುಂಬಿಸಲು ಉದ್ದೇಶಿಸಿರುವ 16 ಕೆರೆಗಳು ಮತ್ತು ಗಾಯತ್ರಿ ಜಲಾಶಯದ ವಿವರ.

1 ಉಡುವಳ್ಳಿ ಕೆರೆ 0.1790.081, 2 ಗೌಡನಹಳ್ಳಿ ಕೆರೆ 0.1380.007, 3 ಗಾಂಧಿನಗರ ಕೆರೆ 0.0340.001, 4 ಬಗ್ಗನಡು ಕೆರೆ 0.0840.003, 5 ವೀರವ್ವ ನಾಗತಿಹಳ್ಳಿ ಕೆರೆ 0.0160.003, 6 ಪಿಲಾಲಿ ಕೆರೆ 0.0310.016, 7 ಜವನಗೊಂಡನಹಳ್ಳಿ ಕೆರೆ 0.0550.019, 8 ಅರಿಶಿನಗುಂಡಿ ಕೆರೆ 0.0110.003, 9 ಉಳುವಿನಹಾಳ್ ಕೆರೆ 0.0170.001, 10 ಯಲ್ಲದಕೆರೆ ಕೆರೆ 0.0190.005, 11 ವಡ್ಡನಹಳ್ಳಿ ಕೆರೆ 0.0660.001, 12 ಮಾವಿನಮಡು ಕೆರೆ 0.0310.032, 13 ದಿಂಡಾವರ ಕೆರೆ 0.0240.028, 14 ಮಾಳಗೊಂಡನಹಳ್ಳಿ ಕೆರೆ 0.0280.003, 15 ಕಾಟನಾಯಕನಹಳ್ಳಿ ಕೆರೆ 0.0180.010, 16 ಗಾಂಧಿನಗರ ಜಿಕೆ ಕೆರೆ 0.0010.00, 1-ಗಾಯತ್ರಿ ಜಲಾಶಯ 0.9700.094 ಒಟ್ಟು 1.720 ಟಿ.ಎಂ.ಸಿ 0.307 ಟಿ.ಎಂ.ಸಿ. ನಿಸ್ವಾರ್ಥ ರಾಜಕಾರಣದ ಹೊಸ ಮಾದರಿ: ತಾಲೂಕಿನಾದ್ಯಂತ ಶ್ಲಾಘನೆ ದಿವಂಗತ ಡಿ. ಸುಧಾಕರ್ ಅವರ ತತ್ತ್ವ ಸಿದ್ಧಾಂತಗಳ ಹಾದಿಯಲ್ಲಿ ಸಾಗುತ್ತಿರುವ ಅಮೃತೇಶ್ವರಸ್ವಾಮಿ ಅವರು, ಸ್ಥಾನಮಾನಗಳಿಗಿಂತ ಕ್ಷೇತ್ರದ ಜನಹಿತವೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.  

ಶಾಸಕರಲ್ಲದಿದ್ದರೂ ಸಹ ಸಚಿವ ಸಂಪುಟ ಮಟ್ಟದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಗಮನ ಸೆಳೆದು ಕ್ಷೇತ್ರದ ದಶಕಗಳ ಬೇಡಿಕೆಗೆ ಮಂಜೂರಾತಿ ತಂದುಕೊಟ್ಟಿರುವುದು ಅವರ ಬದ್ಧತೆ ಮತ್ತು ಕಳಕಳಿಗೆ ಸಾಕ್ಷಿಯಾಗಿದೆ.

ಜವನಗೊಂಡನಹಳ್ಳಿ ಹೋಬಳಿಯ ಈ ಐತಿಹಾಸಿಕ ಸಾಧನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕ್ಷೇತ್ರದ ಜನತೆ ಮತ್ತು ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದು, ಹಿರಿಯೂರು ಕ್ಷೇತ್ರದಲ್ಲಿ ಮತ್ತೆ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು