ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಆಟೋಮೊಬೈಲ್ ಚಿಲ್ಲರೆ ವಲಯವು ಅತ್ಯಂತ ಬಲವಾದ ಪ್ರಗತಿ ಸಾಧಿಸುತ್ತಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 3 ಕೋಟಿ ವಾಹನಗಳು ಮಾರಾಟವಾಗಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ನವದೆಹಲಿಯಲ್ಲಿ ಆಯೋಜಿಸಿದ್ದ 8ನೇ 'ಆಟೋ ರಿಟೇಲ್ ಕಾನ್ಕ್ಲೇವ್'ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉದ್ಯೋಗ ಸೃಷ್ಟಿ: ದೇಶದಾದ್ಯಂತ ಆಟೋ ಚಿಲ್ಲರೆ ಮಾರಾಟ ರಂಗವು ಸುಮಾರು 50 ಲಕ್ಷ ಜನರ ಜೀವನೋಪಾಯಕ್ಕೆ ಆಸರೆಯಾಗಿದೆ.
ಸರ್ಕಾರದ ಬೆಂಬಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ಪಿಎಂ ಇ-ಡ್ರೈವ್' ಮತ್ತು ಆಟೋಮೊಬೈಲ್ 'ಪಿಎಲ್‌ಐ' ಯೋಜನೆಗಳು ಭಾರತದ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುತ್ತಿವೆ.
ವಿಕಸಿತ ಭಾರತ 2047: 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ಕನಸನ್ನು ನನಸು ಮಾಡಲು ಸರ್ಕಾರ ಮತ್ತು ಆಟೋ ಉದ್ಯಮ ಕ್ಷೇತ್ರಗಳು ಜಂಟಿಯಾಗಿ ನಾವೀನ್ಯತೆ, ಉತ್ಪಾದನೆ ಹಾಗೂ ಒಳಗೊಳ್ಳುವಿಕೆಯ ಬೆಳವಣಿಗೆಗೆ ಶ್ರಮಿಸಲಿವೆ.
'ಭಾರತ ಚಾಲಕನ ಸೀಟಿನಲ್ಲಿ: ಒಳಗೊಳ್ಳುವಿಕೆಯ ಸಂಚಾರ ಮತ್ತು ಪ್ರೇರಿತ ಬೆಳವಣಿಗೆ' ಎಂಬ ಆಶಯದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿತ್ತು.




