LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

"RSS ನೋಂದಣಿ ಶುಲ್ಕ ನಾನೇ ಕಟ್ಟುತ್ತೇನೆ": ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾರ ಬಳಿಯೂ ಕೈಚಾಚುವುದು ಬೇಡ, ಬೇಕಿದ್ದರೆ ಅದರ ನೋಂದಣಿ ಶುಲ್ಕವನ್ನು ನಾನೇ ಪಾವತಿಸುತ್ತೇನೆ" ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವ್ಯಂಗ್ಯವಾಡಿದ್ದಾರೆ.

ಆರ್ಎಸ್ಎಸ್ ನೋಂದಣಿ ಕುರಿತಾದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಸಂಘಟನೆಯ ಇತಿಹಾಸ ಮತ್ತು ಕಾರ್ಯವೈಖರಿಯನ್ನು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಿಶ್ವದ ಅತಿ ದೊಡ್ಡ ಸಂಸ್ಥೆ ಎಂದು ಕರೆಸಿಕೊಳ್ಳುವ RSS ಏಕೆ ಅಧಿಕೃತವಾಗಿ ನೋಂದಣಿ ಆಗಿಲ್ಲ ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಪಾದಿಸಿದರು.

ಪೇಜಾವರ ಶ್ರೀಗಳ ಮಾತನಾದರೂ ಕೇಳಲಿ!:
"
ನಮ್ಮ ಮಾತನ್ನು ಅವರು ಕೇಳದಿದ್ದರೂ ಪರವಾಗಿಲ್ಲ. ಆದರೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರೇ RSS ನೋಂದಣಿ ಆಗಬೇಕು ಎಂದು ಹೇಳಿದ್ದಾರೆ. ಕನಿಷ್ಠ ಪಕ್ಷ ತಮ್ಮದೇ ಧರ್ಮ ಗುರುಗಳ ಮಾತಿಗಾದರೂ ಆರ್ಎಸ್ಎಸ್ ಗೌರವ ಕೊಡಲಿ" ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ದಿನಕ್ಕೆ 4,500 ಚಟುವಟಿಕೆ; ಪ್ರಶ್ನಿಸುವುದು ತಪ್ಪೇ?:
ಆರ್ಎಸ್ಎಸ್ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, "ದಿನನಿತ್ಯ ಸುಮಾರು 4,500 ಕಡೆಗಳಲ್ಲಿ RSS ಚಟುವಟಿಕೆಗಳು ನಡೆಯುತ್ತವೆ. ಇಷ್ಟೊಂದು ಬೃಹತ್ ಕಾರ್ಯಕ್ರಮಗಳನ್ನು ಮಾಡುವಾಗ, ಸಾವಿರಾರು ಜನ ರಸ್ತೆಗೆ ಇಳಿಯುವಾಗ ಅದರ ಅಧಿಕೃತತೆಯ ಬಗ್ಗೆ ಪ್ರಶ್ನೆ ಮಾಡುವುದು ಸಹಜ. ಮಾಧ್ಯಮಗಳು ಸಹ ಈ ಬಗ್ಗೆ RSS ನಾಯಕರನ್ನು ನೇರವಾಗಿ ಪ್ರಶ್ನಿಸಬೇಕು" ಎಂದರು.

"ಆರ್ಎಸ್ಎಸ್ ನಾಯಕರು ತಮಗೆ ನೂರು ವರ್ಷದ ಇತಿಹಾಸವಿದೆ ಎಂದು ಹೇಳಿಕೊಳ್ಳುತ್ತಾರೆ. ನಮಗೆ ಅವರ ಇತಿಹಾಸ ಮುಖ್ಯವಲ್ಲ; ಸಂಸ್ಥೆ ನೋಂದಣಿಯಾಗಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡಲಿ. ಒಂದು ವೇಳೆ ನೋಂದಣಿ ಆಗಿಲ್ಲದಿದ್ದರೆ ಈಗಲಾದರೂ ಮಾಡಿಸಿಕೊಳ್ಳಲಿ, ಅದಕ್ಕೆ ತಗಲುವ ವೆಚ್ಚವನ್ನು ನಾನೇ ಭರಿಸಲು ಸಿದ್ಧನಿದ್ದೇನೆ."
ಪ್ರಿಯಾಂಕ್ ಖರ್ಗೆ, ಗೃಹ ಸಚಿವ.

ಆರ್ಎಸ್ಎಸ್‌ನ ನೂರನೇ ವರ್ಷದ ಸಂಭ್ರಮದ ನಡುವೆಯೇ ಗೃಹ ಸಚಿವರ ಈ 'ನೋಂದಣಿ' ಅಸ್ತ್ರ ಮತ್ತು ಉಚಿತ ಶುಲ್ಕದ ಆಫರ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು