ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ರೈತ ದಂಪತಿ ಹೆಂಜಾರಪ್ಪ ಹಾಗೂ ಗಿರಿಜಮ್ಮ ಅವರ ಪುತ್ರ ಕೃಷ್ಣಮೂರ್ತಿ ಅವರು ಭಾರತೀಯ ವಿಜ್ಞಾನ ಸಂಸ್ಥೆ (IISc) ಯಿಂದ ಅತ್ಯುನ್ನತ ಪಿ.ಎಚ್.ಡಿ. ಪದವಿ ಪಡೆದು ಸಾಧನೆ ಮಾಡಿದ್ದಾರೆ.
ಅವರು ಸಂಸ್ಥೆಯ ಡಾ. ನೀಲಕಮಲ್ ಮಹಾನ್ ಅವರ ಮಾರ್ಗದರ್ಶನದಲ್ಲಿ “Biochemical Studies on Oxidoreductase and Aminotransferase Enzymes in the Antibiotic Pseudouridimycin Biosynthetic Pathway” ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಈ ಪಿ.ಎಚ್.ಡಿ. ಪದವಿ ಲಭಿಸಿದೆ. ಕೃಷ್ಣಮೂರ್ತಿ ಅವರು ಈ ಹಿಂದೆ CSIR-UGC NET (JRF), GATE ಹಾಗೂ KSET ಪರೀಕ್ಷೆಗಳಲ್ಲಿಯೂ ಉನ್ನತ ಅರ್ಹತೆ ಪಡೆದುಕೊಂಡಿದ್ದರು.
ಅಭಿನಂದನೆ ಸಲ್ಲಿಕೆ:
ಕೃಷ್ಣಮೂರ್ತಿ ಅವರ ಈ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಭೀಮನಬಂಡೆಯ ಯಾಜ್ಞವಲ್ಕ್ಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಸಿಬ್ಬಂದಿ ವರ್ಗದವರು ಅವರನ್ನು ಸಾಂಪ್ರದಾಯಿಕವಾಗಿ ಅಭಿನಂದಿಸಿ ಗೌರವಿಸಿದರು.
ಈ ಶುಭ ಸಂದರ್ಭದಲ್ಲಿ ಶ್ರೀಮತಿ ಹರ್ಷಿತಾ, ಸುಕನ್ಯ, ಅಭಿಷೇಕ್, ಸುರೇಶ್, ನೇತ್ರಾವತಿ ಹಾಗೂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.




