Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

 ‘ಗವರ್ನಮೆಂಟ್ ಫಸ್ಟ್’ ನಾವೀನ್ಯತೆ ಉಪಕ್ರಮ ಜಾರಿ: 25 ಲಕ್ಷದವರೆಗೆ ಆರ್ಥಿಕ ನೆರವು!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರಿ ಇಲಾಖೆಗಳ ಅಗತ್ಯಗಳಿಗೆ ನವೀನ ಪರಿಹಾರ ಒದಗಿಸುವ ಸುವರ್ಣ ಅವಕಾಶ ಕಲ್ಪಿಸಲು, ನೈಜ ಪರಿಸರದಲ್ಲಿ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡುವ ಮಹತ್ವಾಕಾಂಕ್ಷೆಯ ‘ಗವರ್ನಮೆಂಟ್ ಫಸ್ಟ್’ ಉಪಕ್ರಮ ಜಾರಿಗೆ ಬರಲಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸ್ಟಾರ್ಟ್‌ಅಪ್ ನೀತಿ 2025–30ರ ಅಡಿಯಲ್ಲಿ ‘ಎಲಿವೇಟ್’ ಕಾರ್ಯಕ್ರಮದ ಭಾಗವಾಗಿ ಈ ಉಪಕ್ರಮ ಜಾರಿಗೊಳ್ಳಲಿದ್ದು, ರಾಜ್ಯ ಸರ್ಕಾರ ಈಗಾಗಲೇ ಇದಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಡಿ, ಮುಂಬರುವ ಮೂರು ವರ್ಷಗಳಲ್ಲಿ ಒಟ್ಟು ₹25 ಕೋಟಿ ವೆಚ್ಚದಲ್ಲಿ ಗರಿಷ್ಠ 100 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಲು ಉದ್ದೇಶಿಸಲಾಗಿದೆ.

Advertisement

ಸರ್ಕಾರವೇ ಮೊದಲ ಗ್ರಾಹಕ: ಹೊಸ ತಂತ್ರಜ್ಞಾನ ಹಾಗೂ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತದಲ್ಲೇ ಮಾರುಕಟ್ಟೆ ಅವಕಾಶ ಕಲ್ಪಿಸುವುದು ಈ ಉಪಕ್ರಮದ ಪ್ರಮುಖ ಧ್ಯೇಯವಾಗಿದೆ. ಸರ್ಕಾರವು ಕೇವಲ ಖರೀದಿದಾರನಾಗಿರದೆ, ನಾವೀನ್ಯತೆಗಳನ್ನು ಮೊದಲು ಅಳವಡಿಸಿಕೊಳ್ಳುವ 'ಮೊದಲ ಗ್ರಾಹಕ' ಹಾಗೂ ಸಹಭಾಗಿಯಾಗಿ ಕಾರ್ಯನಿರ್ವಹಿಸಲಿದೆ.

ಸಮಸ್ಯೆ ಆಧಾರಿತ ಪ್ರಸ್ತಾವನೆ: ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಸಮಸ್ಯೆಗಳನ್ನು ಗುರುತಿಸಿ ಪರಿಹಾರಗಳನ್ನು ಆಹ್ವಾನಿಸಬಹುದು.
ಸ್ವಯಂ ಪ್ರಸ್ತಾವನೆ: ಸರ್ಕಾರದ ಅಗತ್ಯಗಳನ್ನು ಗ್ರಹಿಸಿ ಸ್ಟಾರ್ಟ್‌ಅಪ್‌ಗಳೇ ತಮ್ಮ ನವೀನ ಪರಿಹಾರಗಳನ್ನು ನೇರವಾಗಿ ಸರ್ಕಾರಕ್ಕೆ ಪ್ರಸ್ತಾಪಿಸಬಹುದು.

ಪರೀಕ್ಷೆ, ಮೌಲ್ಯಮಾಪನ ಮತ್ತು ಖರೀದಿ ವ್ಯವಸ್ಥೆ: ಈ ಉಪಕ್ರಮದಲ್ಲಿ 'ಪರೀಕ್ಷೆ–ಮೌಲ್ಯಮಾಪನ–ಖರೀದಿ' ಎಂಬ ವ್ಯವಸ್ಥಿತ ವಿಧಾನವನ್ನು ಅನುಸರಿಸಲಾಗುತ್ತದೆ. ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳ ಪರಿಹಾರಗಳನ್ನು ಸರ್ಕಾರಿ ಇಲಾಖೆಗಳ ನೈಜ ಪರಿಸರದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ.

ಅವುಗಳ ಕಾರ್ಯಕ್ಷಮತೆ, ಪರಿಣಾಮ, ಬಳಕೆದಾರರ ಸ್ವೀಕಾರ, ವೆಚ್ಚದ ಪರಿಣಾಮಕಾರಿತ್ವ ಹಾಗೂ ವಿಸ್ತರಣಾ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿ ನಿರೀಕ್ಷಿತ ಫಲಿತಾಂಶ ನೀಡುವ ಪರಿಹಾರಗಳನ್ನು ಮುಂದಿನ ಹಂತದಲ್ಲಿ ನೇರ ಸರ್ಕಾರಿ ಖರೀದಿ ಹಾಗೂ ಬೃಹತ್ ಪ್ರಮಾಣದ ಅಳವಡಿಕೆಗೆ ಪರಿಗಣಿಸಲಾಗುತ್ತದೆ.

ಪ್ರತಿ ಸ್ಟಾರ್ಟ್‌ಅಪ್‌ಗೆ ಗರಿಷ್ಠ 25 ಲಕ್ಷ ಆರ್ಥಿಕ ನೆರವು: ಅನುದಾನ ಹಂಚಿಕೆ: ಒಟ್ಟು ₹25 ಕೋಟಿ ಅನುದಾನದಲ್ಲಿ ಶೇ. 95ರಷ್ಟು (ಅಂದರೆ ₹23.75 ಕೋಟಿ) ನೇರವಾಗಿ ಸ್ಟಾರ್ಟ್‌ಅಪ್‌ಗಳ ನೆರವಿಗೆ ಮೀಸಲಾಗಿದೆ. ಉಳಿದ ಶೇ. 5ರಷ್ಟು (ಅಂದರೆ ₹1.25 ಕೋಟಿ) ಆಡಳಿತಾತ್ಮಕ ವೆಚ್ಚಗಳಿಗೆ ಬಳಸಲಾಗುತ್ತದೆ.

ಪ್ರತಿ ಸ್ಟಾರ್ಟ್‌ಅಪ್‌ಗೆ ಬೆಂಬಲ: ಪ್ರಾಯೋಗಿಕ ಅಳವಡಿಕೆ ಮತ್ತು ಮೌಲ್ಯಮಾಪನಕ್ಕಾಗಿ ಪ್ರತಿ ಅರ್ಹ ಸ್ಟಾರ್ಟ್‌ಅಪ್‌ಗೆ ಗರಿಷ್ಠ ₹25 ಲಕ್ಷದವರೆಗೆ ಆರ್ಥಿಕ ನೆರವು ದೊರೆಯಲಿದೆ.

ಅರ್ಹತೆಗಳೇನು?:
ಕರ್ನಾಟಕದಲ್ಲಿ ಅಧಿಕೃತವಾಗಿ ನೋಂದಾಯಿತವಾಗಿರಬೇಕು.
ಕಂಪನಿ ಸ್ಥಾಪನೆಯಾಗಿ 10 ವರ್ಷಕ್ಕಿಂತ ಕಡಿಮೆ ಅವಧಿಯಾಗಿರಬೇಕು.
ಯಾವುದೇ ಹಣಕಾಸು ವರ್ಷದಲ್ಲಿ 200 ಕೋಟಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರಬಾರದು.
ಪರಿಹಾರಗಳು ನವೀನತೆ, ವಿಸ್ತರಣಾ ಸಾಮರ್ಥ್ಯ ಹಾಗೂ ನೈಜ ಪರಿಸರದಲ್ಲಿ ತಕ್ಷಣ ಪರೀಕ್ಷೆಗೆ ಸಿದ್ಧವಿರುವ ತಾಂತ್ರಿಕ ಗುಣಮಟ್ಟವನ್ನು ಹೊಂದಿರಬೇಕು.

ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಸಲಹಾ ಸೇವೆಗಳು, ವಿನ್ಯಾಸ ಮತ್ತು ಸಾಗಣೆ ವ್ಯವಸ್ಥೆ ಸೇರಿದಂತೆ ವಿವಿಧ ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳಿಗೆ ಈ ಉಪಕ್ರಮದ ಮೂಲಕ ಭಾರಿ ಒತ್ತು ನೀಡಲಾಗುತ್ತಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ