Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೀ ಭೂತರಾಯಸ್ವಾಮಿ ದೇವಾಲಯದಲ್ಲಿ ನೂತನ ಬೆನವಗಳ ಪ್ರತಿಷ್ಠಾಪನೆ ಮಹೋತ್ಸವ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಭೂತರಾಯಸ್ವಾಮಿ ದೇವಾಲಯದಲ್ಲಿ ನೂತನ ಬೆನವಗಳ ಪ್ರತಿಷ್ಠಾಪನಾ ಮಹೋತ್ಸವವು ದಿನಾಂಕ
12-11-2026 ಮತ್ತು 13-11-2026 ರಂದು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಈ ಶುಭ ಸಂದರ್ಭಕ್ಕೆ ಗ್ರಾಮಸ್ಥರು ಮತ್ತು ಭಕ್ತಾದಿಗಳು ಎಲ್ಲರನ್ನೂ ಆದರದಿಂದ ಆಹ್ವಾನಿಸುತ್ತಿದ್ದಾರೆ.

​ಕಾರ್ಯಕ್ರಮದ ವಿವರ: ​ದಿನಾಂಕ 12-11-2026, ಗುರುವಾರ ​ಸಂಜೆ 4:00 ಗಂಟೆಗೆ ಪವಿತ್ರ ಕ್ಷೇತ್ರವಾದ ಶ್ರೀ ಕುನಕಲಗುಂಡಿಯಲ್ಲಿ ತಿಮ್ಮಪ್ಪಸ್ವಾಮಿಗೆ ಗಂಗಾ ಸ್ನಾನ ಮತ್ತು ಪುಣ್ಯ ಸ್ನಾನದೊಂದಿಗೆ ಮಹೋತ್ಸವ ಚಾಲನೆ ಪಡೆಯಲಿದೆ.

Advertisement

​ಸಂಜೆ 7:00 ಗಂಟೆಗೆ: ಶ್ರೀ ಭೂತರಾಯಸ್ವಾಮಿ ಆವರಣದಲ್ಲಿ ಸ್ವಾಮಿಯ ಗದ್ದಿಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ.

​ದಿನಾಂಕ 13-11-2026, ಶುಕ್ರವಾರ: ​ಬೆಳಗಿನ ಜಾವ 4:00 ಗಂಟೆಗೆ: ದೇವತಾ ಪ್ರಾರ್ಥನೆ, ಅನುಜ್ಞೆ, ಪುಣ್ಯಾಹ, ಮತ್ತು ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.
​ಬೆಳಗಿನ ಜಾವ
4:30 ರಿಂದ 5:30 ರವರೆಗೆ (ಬ್ರಾಹ್ಮೀ ಮುಹೂರ್ತದಲ್ಲಿ): ಶ್ರೀ ಭೂತರಾಯಸ್ವಾಮಿ ನೂತನ ಬೆನವಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

​ಇದರ ನಂತರ ಕಲಶಾರಾಧನೆ, ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮತ್ತು ಪ್ರಾಣ ಪ್ರತಿಷ್ಠಾಪನಾ ಹೋಮಗಳು ನೆರವೇರಲಿವೆ.
​ಕಾರ್ಯಕ್ರಮದ ಕೊನೆಯಲ್ಲಿ ಮಹಾ ಪೂರ್ಣಾಹುತಿ
, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ.​

​ಈ ಪವಿತ್ರ ಕಾರ್ಯಕ್ರಮದ ನೇತೃತ್ವವನ್ನು ಹಿರಿಯೂರು ತಾಲ್ಲೂಕಿನ ಕೂನಿಕೆರೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಶ್ರೀ ಪಾಂಚರಾತ್ರ ಆಗಮಿಕರಾದ ಶ್ರೀ ನರಸಿಂಹಮೂರ್ತಿಯವರು ವಹಿಸಲಿದ್ದಾರೆ.

​​ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು, ತನು-ಮನ-ಧನ ಸಹಾಯ ಮತ್ತು ಸಹಕಾರ ನೀಡುವುದರ ಜೊತೆಗೆ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಭಕ್ತಾದಿಗಳು ಮತ್ತು ಗ್ರಾಮಸ್ಥರು ಕೋರುತ್ತಿದ್ದಾರೆ. ​ಹೆಚ್ಚಿನ ವಿವರಗಳಿಗಾಗಿ ಅಥವಾ ಸಂಪರ್ಕಿಸಲು ಸಂಘಟಕರನ್ನು ಸಂಪರ್ಕಿಸಬಹುದಾಗಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿಗೀತಮ್ ಕಾಲೇಜಿನ ಬಿ. ಟೆಕ್ ವಿದ್ಯಾರ್ಥಿನಿ ಸಾವುಗಾಯಿತ್ರಿ ಜಲಾಶಯದ ಕೆರೆ ಅಂಗಳದಲ್ಲಿ ಅಕ್ರಮ ಮಣ್ಣು ಸಾಗಾಟ – ಇಟಾಚಿ, ಟಿಪ್ಪರ್ ಲಾರಿಗಳು ವಶಕ್ಕೆ! ಹಿರಿಯೂರು ಉಪಚುನಾವಣೆ: ಅಧಿಕೃತ ಅರ್ಜಿ ಪಡೆದ ಕಾಂಗ್ರೆಸ್‌ ಟಿಕೆಟ್‌ಗಾಗಿ ಸಿ. ಶಿವು ಯಾದವ್‌CJP ಪರ ಖರ್ಗೆ ಬೆಂಬಲ: ರಾಜ್ಯದ ಹಣ ಲೂಟಿ ಮಾಡಿ ದೇಶದಲ್ಲಿ ಅಭದ್ರತೆ ಸೃಷ್ಟಿಸುತ್ತಿದ್ದಾರೆ - HDK ಗಂಭೀರ ಆರೋಪಕೆಪಿಎಸ್‌ಸಿ ಅಕ್ರಮ: ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಂದ ಪರೀಕ್ಷೆ! ಇಡಿ ತನಿಖೆಯಲ್ಲಿ ಕರಾಳ ದಂಧೆ ಬಯಲುಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರದಲ್ಲಿ ಅತ್ಯಾಧುನಿಕ ‘INS ಸಮರ್ಥಕ್’ ಬಹುಪಯೋಗಿ ಯುದ್ಧನೌಕೆ ಲೋಕಾರ್ಪಣೆ'ಕರ್ನಾಟಕ ಹನಿಟ್ರ್ಯಾಪ್' ಯೂಟ್ಯೂಬ್ ಚಾನೆಲ್‌ನ 54 ಸಬ್‌ಸ್ಕ್ರೈಬರ್‌ಗಳಿಗೆ ಪೊಲೀಸ್ ನೋಟಿಸ್?ದಾವಣಗೆರೆಯಲ್ಲಿ ಎರಡು ಭೀಕರ ರಸ್ತೆ ಅಪಘಾತಗಳು: ಕಾರು ಡಿಕ್ಕಿಯಾಗಿ ಅಪ್ರಾಪ್ತ ಸಾವು, ಮತ್ತೊಂದರಲ್ಲಿ ಹಿಟ್ ಆ್ಯಂಡ್ ರನ್​ಗೆ ವ್ಯಕ್ತಿ ಬಲಿಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಒಗ್ಗಟ್ಟಿನ ಹೋರಾಟ ಅನಿವಾರ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆ