Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ: ಮುಳುಗಡೆ ಸಂತ್ರಸ್ತ ರೈತರಿಗೆ ಶೀಘ್ರ ಪರಿಹಾರ ವಿತರಿಸಿ- ಎಂ.ಬಿ. ಪಾಟೀಲ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಬಾಧಿತ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವಂತೆ ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಅವರು ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. 

​​ವ್ಯಾಪಕ ಭೂಸ್ವಾಧೀನ ಹಾಗೂ ಮುಳುಗಡೆ ಪ್ರದೇಶ: ಜಲಾಶಯದ ಎತ್ತರ ಹೆಚ್ಚಳದಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 184 ಗ್ರಾಮಗಳ 75,563 ಎಕರೆ ಭೂಮಿ ಮುಳುಗಡೆಯಾಗಲಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳಿದ್ದು, ಸಚಿವ ಎಂ. ಬಿ. ಪಾಟೀಲ್ ಅವರು ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳ 5,600 ಎಕರೆ ಭೂಮಿ ಸೇರಿದೆ. 

Advertisement

​ರೂ. 500 ಕೋಟಿ ಪರಿಹಾರ ಕಾಯ್ದಿರಿಸಲು ಮನವಿ: ಸರ್ಕಾರ ಪ್ರಸ್ತಾವಿಸಿರುವ ಒಟ್ಟು ರೂ. 3,000 ಕೋಟಿ ಪರಿಹಾರ ಮೊತ್ತದ ಪೈಕಿ, ಬಬಲೇಶ್ವರ ತಾಲೂಕಿನ ಕನಿಷ್ಠ 1,000 ಎಕರೆ ಭೂಸ್ವಾಧೀನಕ್ಕಾಗಿ ಸುಮಾರು 20% ನಷ್ಟು ಅಂದರೆ ರೂ. 500 ಕೋಟಿಗಳನ್ನು ಮೊದಲ ಹಂತದಲ್ಲೇ ಕಾಯ್ದಿರಿಸಿ ಬಿಡುಗಡೆ ಮಾಡಬೇಕು. 

​ಆದ್ಯತೆ ಮೇರೆಗೆ 4 ಗ್ರಾಮಗಳಿಗೆ ತುರ್ತು ಪರಿಹಾರ: ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿರುವ ಶಿರೂರ, ಕಣಬೂರ, ಚಿಕ್ಕಗಲಗಲಿ ಮತ್ತು ಹೊಸೂರ ಗ್ರಾಮಗಳಿಗೆ 2026-27ರ ಪ್ರಸ್ತುತ ಆರ್ಥಿಕ ವರ್ಷದಲ್ಲೇ ಪರಿಹಾರ ವಿತರಿಸಬೇಕು. 

​ಉಳಿದ ಗ್ರಾಮಗಳಿಗೆ ಅಧಿಸೂಚನೆ: ಬಬಲೇಶ್ವರ ಕ್ಷೇತ್ರದ ಬಾಕಿ ಉಳಿದ 10 ಗ್ರಾಮಗಳಿಗೂ ಕೂಡಲೇ 11(1) ಅಧಿಸೂಚನೆ ಜಾರಿಗೊಳಿಸಿ ತುರ್ತು ಕ್ರಮ ಕೈಗೊಳ್ಳಬೇಕು. 

​ಮುಳುಗಡೆ ಭೀತಿಯಲ್ಲಿರುವ ರೈತರ ಹಿತರಕ್ಷಣೆಗೆ ರಾಜ್ಯ ಸರ್ಕಾರವು ಈ ಮನವಿಗೆ ತಕ್ಷಣವೇ ಸ್ಪಂದಿಸಿ, ಶೀಘ್ರವಾಗಿ ಪರಿಹಾರ ಧನ ಬಿಡುಗಡೆ ಮಾಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ