LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ: ಆಗಸ್ಟ್ ತಿಂಗಳಿಡೀ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಗ್ರಂಥಗಳಿಗೆ ಶೇ. 50% ರಿಯಾಯಿತಿ

Advertisement
Advertisement

ಸಿರಿಗನ್ನಡ ಮಳಿಗೆಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಕಚೇರಿಗಳು ಹಾಗೂ ಆನ್‍ಲೈನ್‍ನಲ್ಲೂ ಬೃಹತ್ ಪುಸ್ತಕ ಮಾರಾಟ ಅಭಿಯಾನ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕನ್ನಡ ಸಾಹಿತ್ಯಾಸಕ್ತರಿಗೆ ಹಾಗೂ ಪುಸ್ತಕ ಪ್ರಿಯರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಬೃಹತ್ ಕೊಡುಗೆಯೊಂದನ್ನು ಘೋಷಿಸಿದೆ.

2026ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲಾದ ಎಲ್ಲಾ ಮೌಲ್ಯಯುತ ಪುಸ್ತಕಗಳನ್ನು ಶೇಕಡಾ 50% ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು
ಪುಸ್ತಕ ರಿಯಾಯಿತಿ ಸೌಲಭ್ಯ ದೊರೆಯುವ ಪ್ರಮುಖ ಕೇಂದ್ರಗಳು:
ಸಿರಿಗನ್ನಡ ಪುಸ್ತಕ ಮಳಿಗೆ (ಬೆಂಗಳೂರು): ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ಮುಖ್ಯ ಸಿರಿಗನ್ನಡ ಪುಸ್ತಕ ಮಳಿಗೆ.

ಜಿಲ್ಲಾ ಕೇಂದ್ರಗಳು: ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳು.

ಸಿರಿಗನ್ನಡ ಮಳಿಗೆಗಳು: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕಾರ್ಯಾಚರಿಸಲ್ಪಡುವ ರಾಜ್ಯದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳು.

ಆನ್‍ಲೈನ್ ಸೌಲಭ್ಯ: ಮನೆಬಾಗಿಲಿಗೇ ಪುಸ್ತಕ ತರಿಸಿಕೊಳ್ಳಲು ಪ್ರಾಧಿಕಾರದ ಅಧಿಕೃತ ವೆಬ್‍ಸೈಟ್ https://kpp.karnataka.gov.in  (ಆನ್‍ಲೈನ್ ಪುಸ್ತಕ ಖರೀದಿಗೆ ಇಲ್ಲಿ ವೀಕ್ಷಿಸಿ) ನಲ್ಲೂ ಶೇ.50 ರಿಯಾಯಿತಿ ಲಭ್ಯವಿದೆ.

ಸಾಹಿತ್ಯ ವೈವಿಧ್ಯತೆ ಹಾಗೂ ಪ್ರಕಟಣೆಗಳ ವಿವರ:
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರವು ಇದುವರೆಗೆ ವಿವಿಧ ಪ್ರಕಾರಗಳಲ್ಲಿ ಸುಮಾರು 769 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ.

ವ್ಯಕ್ತಿ ಚಿತ್ರಗಳು & ನಾಟಕಗಳು: ಸಾಧಕರ ಜೀವನಾಧಾರಿತ ಕೃತಿಗಳು ಹಾಗೂ ರಂಗಭೂಮಿಯ ಕೃತಿಗಳು.
ಅಲೆಮಾರಿ ಸಮುದಾಯ ಸಂಶೋಧನೆ: ಅಂಚಿಗೆ ತಳ್ಳಲ್ಪಟ್ಟ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಂಸ್ಕ
ತಿಗಳ ಅಧ್ಯಯನ ಗ್ರಂಥಗಳು.

ಪ್ರಾಚೀನ ಸಾಹಿತ್ಯ & ಜಾನಪದ: ಹಳೆಗನ್ನಡ, ನಡುಗನ್ನಡ ಕಾವ್ಯಗಳು ಹಾಗೂ ಜಾನಪದ ಕಲೆಯ ಸಂಗ್ರಹಗಳು.

ವೈದ್ಯಕೀಯ, ಕೃಷಿ & ಪರಿಸರ: ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಹಾಗೂ ಕೃಷಿ ಮಾಹಿತಿಕೋಶಗಳು.

ಅತ್ಯಂತ ಪ್ರಾಜ್ಞರು ಹಾಗೂ ತಜ್ಞರಿಂದ ರಚಿತವಾದ ಈ ಮೌಲಿಕ ಗ್ರಂಥಗಳನ್ನು ಜನಸಾಮಾನ್ಯರಿಗೆ ಅತ್ಯಂತ ಸುಲಭ ಹಾಗೂ ಕೈಗೆಟುಕುವ ಬೆಲೆಯಲ್ಲಿ ತಲುಪಿಸುವುದು ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಈ ಸುವರ್ಣ ಅವಕಾಶವನ್ನು ಎಲ್ಲಾ ಓದುಗರು ಹಾಗೂ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, 1ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು - 560 002 ಅಥವಾ ದೂರವಾಣಿ: 080-22107704, 22484516 ಅಥವಾ ಇ-ಮೇಲ್ [email protected] ಅಥವಾ ವೆಬ್‍ಸೈಟ್: https://kpp.karnataka.gov.in ನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು